ಕರಾಚಿ: ಮಾಜಿ ಪತ್ನಿಯ ಶೀಲದ ಮೇಲೆ ಶಂಕೆ ಮತ್ತು ಆರೋಪಿಯಿಂದ ಆಕೆಗೆ ಜನಿಸಿದ ಮಗುವಿನ ಪಿತೃತ್ವವನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನಿಗೆ 80 ಛಡಿ ಏಟಿನ ಶಿಕ್ಷೆ ನೀಡಿ ಕರಾಚಿ ಸೆಷನ್ಸ್ ಕೋರ್ಟ್ ತೀರ್ಪು ನೀಡಿದೆ. ಅಪರೂಪದ ಪ್ರಕರಣದಲ್ಲಿ ಫರೀದ್ ಖಾದೀರ್ ಎಂಬಾತನಿಗೆ ಶಿಕ್ಷೆ ವಿಧಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮಲಿರ್ ಶೆಹನಾಜ್ ಬೊಹ್ಯೊ ಆದೇಶಿಸಿದ್ದಾರೆ.
ಆರೋಪಿ ಸುಳ್ಳುಗಾರ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಮಗಳ ಹುಟ್ಟಿನ ಬಗ್ಗೆ ಆತ ಆರೋಪ ಮಾಡಿದ್ದಾನೆ. ಆರೋಪಿ ತಪ್ಪಿತಸ್ಥನಾಗಿದ್ದು, ಆತನಿಗೆ ಛಡಿಯೇಟಿನ ಶಿಕ್ಷೆ ನೀಡಲಾಗುತ್ತಿದೆ ಎಂದು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.