ವಾಷಿಂಗ್ಟನ್: ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪದಗ್ರಹಣ ಕಾರ್ಯಕ್ರಮಕ್ಕೆ ತೆರಳಿರುವ ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಕ್ವಾಡ್ ಸಭೆಯಲ್ಲಿ ಭಾಗಿಯಾದರು. ಇದು ಟ್ರಂಪ್ ಅಧ್ಯಕ್ಷರಾದ ಬಳಿಕದ ಮೊದಲ ಸಭೆಯಾಗಿದೆ.
ಸಭೆಯಲ್ಲಿ ಭಾರತದ ಜೊತೆಗೆ ಆಸ್ಟ್ರೇಲಿಯಾ, ಜಪಾನ್ ಮತ್ತು ಅಮೆರಿಕದ ವಿದೇಶಾಂಗ ಸಚಿವರು ಭಾಗಿಯಾಗಿದ್ದರು. ಇದಾದ ಬಳಿಕ ಹೊಸದಾಗಿ ನೇಮಕಗೊಂಡ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಮೈಕ್ ವಾಲ್ಟ್ಜ್ ಅವರೊಂದಿಗೆ ಪ್ರತ್ಯೇಕ ಸಭೆ ನಡೆಸಿದರು.
Attended a productive Quad Foreign Ministers’ Meeting today in Washington DC. Thank @secrubio for hosting us and FMs @SenatorWong & Takeshi Iwaya for their participation.
— Dr. S. Jaishankar (@DrSJaishankar) January 21, 2025
Significant that the Quad FMM took place within hours of the inauguration of the Trump Administration. This… pic.twitter.com/uGa4rjg1Bw
ಕ್ವಾಡ್, ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಗುರಿಯನ್ನು ಹೊಂದಿರುವ ನಾಲ್ಕು (ಭಾರತ, ಅಮೆರಿಕ, ಜಪಾನ್, ಆಸ್ಟ್ರೇಲಿಯಾ) ದೇಶಗಳ ಗುಂಪಾಗಿದೆ.
ಮಿತ್ರ ರಾಷ್ಟ್ರಗಳ ಮಾತುಕತೆ : ಟ್ರಂಪ್ ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ಕ್ವಾಡ್ನ ವಿದೇಶಾಂಗ ಸಚಿವರ ಸಭೆ ನಡೆದಿರುವುದು ಗಮನಾರ್ಹ. ಸಭೆಯ ಬಳಿಕ ಮಾತನಾಡಿದ ಅಮೆರಿಕದ ವಿದೇಶಾಂಗ ಸಚಿವ ಮಾರ್ಕೊ ರೊಬಿಯೊ, ಈ ಸಭೆಯು ಕ್ವಾಡ್ ಸದಸ್ಯ ರಾಷ್ಟ್ರಗಳ ವಿದೇಶಾಂಗ ನೀತಿಗೆ ಹೆಚ್ಚಿನ ಆದ್ಯತೆ ನೀಡುತ್ತದೆ. ಮುಕ್ತ, ಸ್ಥಿರ ಮತ್ತು ಸಮೃದ್ಧ ಇಂಡೋ- ಪೆಸಿಫಿಕ್ ರಾಷ್ಟ್ರಗಳ ನಿರ್ಮಾಣ ಮತ್ತು ಮಿತ್ರ ರಾಷ್ಟ್ರಗಳ ಜೊತೆಗೆ ಉತ್ತಮ ಬಾಂಧವ್ಯದ ಕುರಿತು ಚರ್ಚಿಸಲಾಯಿತು ಎಂದರು.
ರಾಷ್ಟ್ರಗಳ ನಡುವಿನ ದೂರದೃಷ್ಟಿ, ಕಾರ್ಯಸೂಚಿ, ಪರಸ್ಪರ ಸಹಯೋಗದ ಬಗ್ಗೆ ಮಾತುಕತೆ ನಡೆಸಲಾಯಿತು. ಕ್ವಾಡ್ ಜಾಗತಿಕ ಒಳಿತಿಗಾಗಿ ಒಂದು ಶಕ್ತಿಯಾಗಿ ಮುಂದುವರಿಯಲಿದೆ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸುತ್ತದೆ ಎಂದರು.
Delighted to meet @secrubio for his first bilateral meeting after assumption of office as Secretary of State.
— Dr. S. Jaishankar (@DrSJaishankar) January 21, 2025
Reviewed our extensive bilateral partnership, of which @secrubio has been a strong advocate.
Also exchanged views on a wide range of regional and global issues.
Look… pic.twitter.com/NVpBUEAyHK
ಫೋಟೋ ಹಂಚಿಕೊಂಡ ಜೈಶಂಕರ್ : ಇನ್ನು, ಕ್ವಾಡ್ ವಿದೇಶಾಂಗ ಸಚಿವರ ಜೊತೆಗಿನ ಸಭೆಯ ಕುರಿತ ಚಿತ್ರಗಳನ್ನು ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ರುಬಿಯೊ ಮತ್ತು ಜೈಶಂಕರ್ ಅವರು ಸಭೆಯ ನಂತರದ ಫೋಟೋ ಸೆಷನ್‌ನಲ್ಲಿ ಕೈಕುಲುಕುತ್ತಾ ನಗುತ್ತಿದ್ದರು.
"ಟ್ರಂಪ್ ಆಡಳಿತದಲ್ಲಿ ವಿದೇಶಾಂಗ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ದ್ವಿಪಕ್ಷೀಯ ಸಭೆಯಲ್ಲಿ ರುಬಿಯೊ ಅವರ ಜೊತೆ ಮಾತುಕತೆ ನಡೆಸಿದ್ದು ಸಂತೋಷ ತಂದಿದೆ. ಅಮೆರಿಕ ಮತ್ತು ಭಾರತದ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಉತ್ತಮಪಡಿಸುವ ಬಗ್ಗೆ ಚರ್ಚಿಸಲಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಡಾಲರ್ ಬದಲಿಸಿದರೆ ಶೇ.100 ರಷ್ಟು ಸುಂಕ: ಬ್ರಿಕ್ಸ್ ರಾಷ್ಟ್ರಗಳಿಗೆ ಟ್ರಂಪ್ ಬೆದರಿಕೆ
ಡೊನಾಲ್ಡ್ ಟ್ರಂಪ್ ಪ್ರಮಾಣವಚನ ಸಮಾರಂಭದಲ್ಲಿ ಎಲಾನ್ ಮಸ್ಕ್ 'ನಾಜಿ ಸೆಲ್ಯೂಟ್': ಆರೋಪ
ಅಮೆರಿಕ ಹೊರಬಿದ್ದ ಬೆನ್ನಲ್ಲೇ, ಡಬ್ಲ್ಯೂಎಚ್ಒಗೆ ಬೆಂಬಲ ಘೋಷಿಸಿದ ಚೀನಾ