ETV Bharat / state

ಹಾಸನ: ಕಾಡಾನೆ ದಾಳಿಗೆ ಮತ್ತೋರ್ವ ವೃದ್ಧ ಬಲಿ - WILD ELEPHANT ATTACK

ಕಾಡಾನೆಯೊಂದು ನಡೆದುಕೊಂಡು ಹೋಗುತ್ತಿದ್ದ ವೃದ್ಧನ ಮೇಲೆ ದಾಳಿ ಮಾಡಿ ಕೊಂದು ಹಾಕಿದೆ.

HASSAN  OLD AGE DEATH IN HASSAN  ELEPHANT ATTACK  ಕಾಡಾನೆ ದಾಳಿ WILD ELEPHANT ATTACK
ಹಾಸನ: ಕಾಡಾನೆ ದಾಳಿಗೆ ಮತ್ತೋರ್ವ ವಯೋವೃದ್ಧ ಬಲಿ (ETV Bharat)
author img

By ETV Bharat Karnataka Team

Published : Jan 22, 2025, 1:21 PM IST

ಹಾಸನ: ಕಾಡಾನೆ ದಾಳಿಗೆ ವಯೋವೃದ್ಧರೊಬ್ಬರು ಬಲಿಯಾಗಿರುವ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಅಡಿಬೈಲು ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಪುಟ್ಟಯ್ಯ (78) ಕಾಡಾನೆ ದಾಳಿಗೆ ಬಲಿಯಾದ ವಯೋವೃದ್ಧ. ನಿನ್ನೆ ಸಂಜೆ ಮಗ್ಗೆ ಗ್ರಾಮದಿಂದ ಅಡಿಬೈಲು ಗ್ರಾಮಕ್ಕೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಏಕಾಏಕಿ ಆನೆ ದಾಳಿ ನಡೆಸಿದೆ. ದಾಳಿಯಿಂದ ತಪ್ಪಿಸಿಕೊಳ್ಳಲು ಓಡಲು ಪ್ರಯತ್ನ ಪಟ್ಟರೂ ಕಾಡಾನೆ ತನ್ನ ಕಾಲಿನಿಂದ ತುಳಿದು ಮರಕ್ಕೆ ಅಪ್ಪಳಿಸಿ ಬಿಸಾಡಿದೆ. ಇದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಪುಟ್ಟಯ್ಯ ಮನೆಗೆ ಬಾರದ ಕಾರಣ ಕುಟುಂಬಸ್ಥರು ಹುಡುಕಾಡಿದ್ದರು. ಆದರೆ ಪತ್ತೆಯಿರಲಿಲ್ಲ. ಇಂದು ಬೆಳಗ್ಗೆ ಎಂದಿನಂತೆ ಗ್ರಾಮಸ್ಥರು ಕಾಫಿ ತೋಟಕ್ಕೆ ಹೋದ ವೇಳೆ ಪುಟ್ಟಯ್ಯನ ಶವ ಪತ್ತೆಯಾಗಿದೆ.

ನಿನ್ನೆ ರಾತ್ರಿ ಆಲೂರು ಭಾಗದ ಕಾಫಿ ತೋಟದಲ್ಲಿ ಘೀಳಿಡುತ್ತಿದ್ದ ಕಾಡಾನೆಯನ್ನು ಓಡಿಸಲು ಅರಣ್ಯ ಇಲಾಖೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆದರೆ ಕಾಡಾನೆ ಪುಟ್ಟಯ್ಯರನ್ನು ಬಲಿ ತೆಗೆದುಕೊಂಡಿರುವುದು ಇಂದು ಬೆಳಗ್ಗೆ ಗೊತ್ತಾಗಿದೆ.

ಸ್ಥಳಕ್ಕೆ ಶಾಸಕ ಸಿಮೆಂಟ್ ಮಂಜು ಭೇಟಿ ನೀಡಿ ಮೃತ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. ಈ ಸಂಬಂಧ ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬಾಗಲೂರು ವ್ಯಾಪ್ತಿಯಲ್ಲಿ ರೌಡಿ ಶೀಟರ್ ಹತ್ಯೆ ಪ್ರಕರಣ : ಅಮೃತಸರದಲ್ಲಿದ್ದ ಆರೋಪಿ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.