ತೈಪೆ (ತೈವಾನ್):ಪ್ರಬಲ ಭೂಕಂಪ ಸಂಭವಿಸಿದ ಹಿನ್ನೆಲೆ ದಕ್ಷಿಣ ಜಪಾನಿನ ಎರಡು ದ್ವೀಪಗಳಿಗೆ ಸುನಾಮಿಯ ಮೊದಲು ಅಲೆಗಳು ಅಪ್ಪಳಿಸಿವೆ ಎಂದು ಜಪಾನ್ ಸರ್ಕಾರ ತಿಳಿಸಿದೆ. ಬುಧವಾರ ಮುಂಜಾನೆ ತೈವಾನ್‌ನಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಸಿಲುಕಿ ನಾಲ್ಕು ಜನರ ಸಾವನ್ನಪ್ಪಿದ್ದಾರೆ. ಇಡೀ ದ್ವೀಪದಲ್ಲಿ ಭೀಕರ ಪರಿಸ್ಥಿತಿ ನಿರ್ಮಾಣವಾಗಿದೆ. ದ್ವೀಪದಲ್ಲಿರುವ ಕಟ್ಟಡಗಳು ಕುಸಿದಿವೆ. ಇದಕ್ಕೂ ಮುನ್ನ, ದಕ್ಷಿಣ ಜಪಾನಿನ ಓಕಿನಾವಾ ದ್ವೀಪ ಸಮೂಹಕ್ಕೆ ಜಪಾನ್ ಹವಾಮಾನ ಸಂಸ್ಥೆಯು ಸುನಾಮಿಯ ಎಚ್ಚರಿಕೆ ನೀಡಲಾಗಿತ್ತು. ಆದರೆ, ಇದೀಗ ಪ್ರಬಲ ಭೂಕಂಪದ ನಂತರ, ಸುನಾಮಿಯ ಮೊದಲ ಅಲೆಗಳು ತನ್ನ ಎರಡು ದಕ್ಷಿಣ ದ್ವೀಪಗಳನ್ನು ಅಪ್ಪಳಿಸಿವೆ ಎಂದು ಜಪಾನ್ ಹೇಳಿದೆ.
ರಾಷ್ಟ್ರೀಯ ಅಗ್ನಿಶಾಮಕ ಸಂಸ್ಥೆ ಮಾಹಿತಿ:ಹುವಾಲಿಯನ್ ಕೌಂಟಿಯಲ್ಲಿ ನಾಲ್ಕು ಜನರು ಸಾವನ್ನಪ್ಪಿದ್ದಾರೆ ಎಂದು ತೈವಾನ್‌ನ ರಾಷ್ಟ್ರೀಯ ಅಗ್ನಿಶಾಮಕ ಸಂಸ್ಥೆ ತಿಳಿಸಿದೆ. ಬುಧವಾರ ಬೆಳಿಗ್ಗೆ 8 ಗಂಟೆಗೆ ಸಂಭವಿಸಿದ ಭೂಕಂಪದ ಕೇಂದ್ರ ಬಿಂದು ಹುವಾಲಿಯನ್ ಆಗಿದೆ. ಭೂಕಂಪನದ ಪರಿಣಾಮ ತಾರೊಕೊ ರಾಷ್ಟ್ರೀಯ ಉದ್ಯಾನವನದಲ್ಲಿ ಬಂಡೆಗಳು ಕುಸಿದು ಮೂವರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಯುನೈಟೆಡ್ ಡೈಲಿ ನ್ಯೂಸ್ ವರದಿ ಮಾಡಿದೆ.
ಜಪಾನ್‌ನ ಹವಾಮಾನ ಸಂಸ್ಥೆಯು 3 ಮೀಟರ್ (9.8 ಅಡಿ) ವರೆಗಿನ ಸುನಾಮಿಯ ಮುನ್ಸೂಚನೆ ನೀಡಲಾಗಿದೆ. ತೈವಾನ್‌ನ ಭೂಕಂಪ ಮಾನಿಟರಿಂಗ್ ಏಜೆನ್ಸಿಯು ಪ್ರಕಾರ, 7.2 ರ ತೀವ್ರತೆಯ ಪ್ರಬಲ ಭೂಕಂಪ ಸಂಭವಿದೆ. ಅಮೆರಿಕ ಜಿಯೋಲಾಜಿಕಲ್ ಸರ್ವೆ ಮಾಹಿತಿ ಪ್ರಕಾರ, 7.5 ತೀವ್ರತೆಯೆ ಭೂಕಂಪನ ಇದಾಗಿದೆ. ಹುವಾಲಿಯನ್‌ನಲ್ಲಿನ ಕಟ್ಟಡಗಳು ಕುಸಿದಿವೆ. ಸ್ಥಳೀಯ ಕಾಲಮಾನ ಬೆಳಗ್ಗೆ 7.58ಕ್ಕೆ ಭೂಕಂಪ ಸಂಭವಿಸಿದ್ದು, ರಾಜಧಾನಿ ತೈಪೆಯಲ್ಲಿ ಭೂಮಿ ನಡುಗಿದ ಅನುಭವವಾಗಿದೆ.
ಹುವಾಲಿಯನ್ನಲ್ಲಿ ವಾಲಿ ಐದು ಅಂತಸ್ತಿನ ಬೃಹತ್ ಕಟ್ಟಡ:ಹುವಾಲಿಯನ್ನಲ್ಲಿ ಐದು ಅಂತಸ್ತಿನ ಕಟ್ಟಡವು ತುಂಬಾ ಹಾನಿಗೊಳಗಾಗಿದೆ. ಅದರ ಮೊದಲ ಮಹಡಿ ಕುಸಿದಿದೆ. ಕಟ್ಟಡದ ಉಳಿದ ಭಾಗ 45 ಡಿಗ್ರಿಯಷ್ಟು ವಾಲಿದೆ. ರಾಜಧಾನಿ ತೈಪೆಯಲ್ಲಿರುವ ಹಳೆಯ ಕಟ್ಟಡಗಳು ಮತ್ತು ಕೆಲವು ಹೊಸ ಕಚೇರಿ ಸಂಕೀರ್ಣಗಳಿಗೆ ಹಾನಿಯಾಗಿವೆ. ಹುವಾಲಿಯನ್‌ನ ದಕ್ಷಿಣ - ನೈಋತ್ಯ ಪ್ರದೇಶದಲ್ಲಿ ಸುಮಾರು 18 ಕಿಲೋಮೀಟರ್‌ಗಳಷ್ಟು ವ್ಯಾಪ್ತಿಯಲ್ಲಿ ಬೆಳಗ್ಗೆ 7.58ಕ್ಕೆ ಭೂಮಿ ನಡುಗಿದೆ. ಸುಮಾರು 35 ಕಿಲೋ ಮೀಟರ್‌ಗಳಷ್ಟು (21 ಮೈಲುಗಳು) ಆಳದಲ್ಲಿ ಭೂಮಿ ಕಂಪಿಸಿದೆ.
ಸುರಂಗಮಾರ್ಗ, ರೈಲು ಸೇವೆ ಬಂದ್:23 ಮಿಲಿಯನ್ ಜನರಿರುವ ತೈಪೆಯ ದ್ವೀಪದಾದ್ಯಂತ ಸುರಂಗಮಾರ್ಗ ಹಾಗೂ ರೈಲು ಸೇವೆಯನ್ನು ಬಂದ್ ಮಾಡಲಾಗಿದೆ. ಆದರೆ, ರಾಜಧಾನಿಯಲ್ಲಿ ಪರಿಸ್ಥಿತಿ ತ್ವರಿತವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. ಮಕ್ಕಳು ಶಾಲೆಗೆ ಹೋಗಲು ಆರಂಭಿಸಿದ್ದಾರೆ. ಜೊತೆಗೆ ಬೆಳಗಿನ ಜನ ಸಂಚಾರ ಸಾಮಾನ್ಯವಾಗಿರುವುದು ಕಂಡು ಬಂದಿದೆ.