ನ್ಯೂಯಾರ್ಕ್: ಜಾಗತಿಕ ಸಂತೋಷ ಸೂಚ್ಯಂಕ ವರದಿಯಲ್ಲಿ 148 ದೇಶಗಳ ಪೈಕಿ ಭಾರತ 126ನೇ ಸ್ಥಾನ ಪಡೆದಿದೆ. ವಿಶ್ವದಲ್ಲೇ ಅಧಿಕ ಜನಸಂಖ್ಯೆ ಹೊಂದಿರುವ ಭಾರತದ ಹಿರಿಯ ವಯಸ್ಕರು ಜೀವನ ತೃಪ್ತಿ ಹೊಂದಿರುವುದು ವರದಿಯಲ್ಲಿ ಕಂಡುಬಂದಿದೆ.
ಫಿನ್ಲೆಂಡ್‌ಗೆ ಮೊದಲ ಸ್ಥಾನ: 2024ರ ವಿಶ್ವದ ಸಂತೋಷದಾಯಕ ದೇಶಗಳ ವರದಿಯಲ್ಲಿ (World Happiness Report) ಮೊದಲ ಸ್ಥಾನವನ್ನು ಫಿನ್ಲೆಂಡ್ ಪಡೆದಿದ್ದು, ಏಳನೇ ಬಾರಿಗೆ ಈ ಶ್ರೇಯಾಂಕ ಕಾಪಾಡಿಕೊಂಡಿರುವ ಹೆಗ್ಗಳಿಕೆಗೂ ಕೂಡ ಈ ದೇಶ ಪಾತ್ರವಾಗಿದೆ. ಫಿನ್ಲೆಂಡ್ ಬಳಿಕ ಡೆನ್ಮಾರ್ಕ್, ಐಸ್ಲ್ಯಾಂಡ್, ಸ್ವೀಡನ್, ಇಸ್ರೇಲ್, ನೆದರ್ಲ್ಯಾಂಡ್ಸ್, ನಾರ್ವೆ, ಲಕ್ಸಂಬರ್ಗ್, ಸ್ವಿಟ್ಜರ್ಲೆಂಡ್ ಮತ್ತು ಆಸ್ಟ್ರೇಲಿಯಾ ಈ ಪಟ್ಟಿಯಲ್ಲಿ ಮೊದಲ ಹತ್ತು ಸ್ಥಾನಗಳಲ್ಲಿವೆ.
ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಸಂತೋಷದ ದಿನದ ಹಿನ್ನೆಲೆಯಲ್ಲಿ ಈ ಪಟ್ಟಿ ಬಿಡುಗಡೆಯಾಗಿದೆ. ಪಟ್ಟಿಯಲ್ಲಿ ಭಾರತದ ನಂತರದ ಸ್ಥಾನಗಳಲ್ಲಿ ಲಿಬಿಯಾ, ಇರಾಕ್, ಪ್ಯಾಲೆಸ್ಟೈನ್ ಮತ್ತು ನೈಗರ್ ದೇಶಗಳಿವೆ.