ನವದೆಹಲಿ: ಒಂದಕ್ಕಿಂತ ಹೆಚ್ಚು ಮೊಬೈಲ್ ಸಿಮ್ಗಳನ್ನು ಹೊಂದಿರುವ ಗ್ರಾಹಕರಿಗೆ ಇದು ಮಹತ್ವದ ಮಾಹಿತಿ. ತಾವು ಎರಡನೇ ಸಿಮ್ ಅನ್ನು ರೀಚಾರ್ಜ್ ಮಾಡದೇ ಇದ್ದರೆ ಅದು ನಿಗದಿತ 90 ದಿನಗಳವರೆಗೂ ನಿಷ್ಕ್ರಿಯವಾಗುವುದಿಲ್ಲ. ಜೊತೆಗೆ ಕೇವಲ ವಾಯ್ಸ್ ಕರೆಗಳಿಗೆ ಮಾತ್ರ ಪ್ಲಾನ್ಗಳನ್ನು ರೂಪಿಸಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಟೆಲಿಕಾಂ ಕಂಪನಿಗಳಿಗೆ ನಿರ್ದೇಶನ ನೀಡಿದೆ.
ಸಿಮ್ ಕಾರ್ಡ್ಗಳ ನಿಷ್ಕ್ರಿಯತೆ ಮತ್ತು ವಾಯ್ಸ್ ಕರೆಗಳ ಯೋಜನೆಗಳಿಗೆ ಸಂಬಂಧಿಸಿದಂತೆ ಟ್ರಾಯ್ ಮಹತ್ವದ ನಿರ್ಧಾರ ಕೈಗೊಂಡಿದೆ. ಇದು ಇಂಟರ್ನೆಟ್ ಡೇಟಾ ಅಗತ್ಯವಿಲ್ಲದ ಬಳಕೆದಾರರಿಗೆ ಹೆಚ್ಚಿನ ಅನುಕೂಲ ನೀಡುತ್ತದೆ.
— TRAI (@TRAI) January 23, 2025
ಸಿಮ್ ನಿಷ್ಕ್ರಿಯಕ್ಕೆ 90 ದಿನ: ಟೆಲಿಕಾಂ ಗ್ರಾಹಕ ಸಂರಕ್ಷಣಾ ನಿಯಮಗಳ (TCPR) 6ನೇ ತಿದ್ದುಪಡಿಯ ಪ್ರಕಾರ, ಯಾವುದೇ ಟೆಲಿಕಾಂ ಕಂಪನಿಯ ಬಳಕೆದಾರರು ತಾವು ಬಳಸುತ್ತಿರುವ ಸಿಮ್ಗಳನ್ನು ರೀಚಾರ್ಜ್ ಮಾಡದೇ ಹೋದಲ್ಲಿ ಗರಿಷ್ಠ 90 ದಿನಗಳವರೆಗೆ ಬಳಕೆ ಮಾಡಬಹುದಾಗಿದೆ. ಬಳಿಕ ರೀಚಾರ್ಜ್ ಮಾಡಲು 15 ದಿನ ಹೆಚ್ಚುವರಿ ಸಮಯ ನೀಡಲಾಗುತ್ತದೆ. ಇದಾದ ಬಳಿಕವೂ ಬಳಕೆದಾರರು ರೀಚಾರ್ಜ್ ಮಾಡದೇ ಹೋದಲ್ಲಿ ಸಿಮ್ ಅನ್ನು ಕಂಪನಿಗಳು ನಿಷ್ಕ್ರಿಯ ಮಾಡಲು ಅವಕಾಶವಿದೆ ಎಂದು ಟ್ರಾಯ್ ಹೇಳಿದೆ.
ವಾಯ್ಸ್ ಕಾಲ್ ರೀಚಾರ್ಜ್ ಪ್ಲಾನ್ಗಳು: ಡೇಟಾ ಅಗತ್ಯವಾದರೂ, ಕೆಲ ಬಳಕೆದಾರರಿಗೆ ಇದು ಅನಗತ್ಯ. ಹೀಗಾಗಿ, ಇಂಟರ್ನೆಟ್ ಬಳಸದ ಗ್ರಾಹಕರಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲು ಟೆಲಿಕಾಂ ಕಂಪನಿಗಳು ಕೇವಲ ವಾಯ್ಸ್ ಕಾಲ್ ಯೋಜನೆಗಳನ್ನು ರೂಪಿಸಲು ಸೂಚಿಸಿದೆ. ಇದರಲ್ಲಿ ಬಳಕೆದಾರರು ಕೇವಲ ಕರೆ ಮಾಡುವ ಮತ್ತು ಸಂದೇಶ ರವಾನಿಸುವ ಸೇವೆಯನ್ನು ಹೊಂದಿರುತ್ತಾರೆ. ದರ ಕೂಡ ಕಡಿಮೆ ಇರುತ್ತದೆ.
ಈಗಿನ ಡೇಟಾ ಪ್ಯಾಕ್ ಸಹಿತ ಯೋಜನೆಗಳು ದುಬಾರಿಯಾಗಿದ್ದು, ಇಂಟರ್ನೆಟ್ ಬಳಸದ ಗ್ರಾಹಕರಿಗೆ ಇದು ಹೊರೆಯಾಗಿತ್ತು. ಇದನ್ನು ತಪ್ಪಿಸಲು ಟ್ರಾಯ್ ಹೊಸ ನಿಯಮ ರೂಪಿಸಿದೆ.
ಈಗ ಕರೆ ಯೋಜನೆಗಳು ಹೇಗಿವೆ?: ಟ್ರಾಯ್ ಸೂಚನೆಯ ಬಳಿಕ ಜಿಯೋ ಮತ್ತು ಭಾರ್ತಿ ಏರ್‌ಟೆಲ್ ಟೆಲಿಕಾಂ ಕಂಪನಿಗಳು ಕೇವಲ ಕರೆ ಮಾಡಲು ಮಾಡಲು ಮಾತ್ರ ಪ್ರೀಪೇಯ್ಡ್ ಯೋಜನೆಗಳನ್ನು ಪ್ರಾರಂಭಿಸಿವೆ. ಉದಾಹರಣೆಗೆ, ಜಿಯೋ, 84 ದಿನಗಳ ಅವಧಿಗೆ 458 ರೂಪಾಯಿ, ವಾರ್ಷಿಕ ಯೋಜನೆಗೆ 1,958 ರೂಪಾಯಿ ದರ ನಿಗದಿ ಮಾಡಿದೆ. ಎರಡೂ ಯೋಜನೆಗಳು ಅನಿಯಮಿತ ಧ್ವನಿ ಕರೆ, ಉಚಿತ SMS ಮತ್ತು ಜಿಯೋ ಅಪ್ಲಿಕೇಶನ್‌ಗಳ ಉಚಿತ ಬಳಕೆ ಹೊಂದಿವೆ. ಏರ್‌ಟೆಲ್ ಕೂಡ ಧ್ವನಿ ಕರೆ ಯೋಜನೆಗಳನ್ನು ಪರಿಷ್ಕರಿಸಿದೆ. 84 ದಿನಗಳ ಅವಧಿಗೆ 499 ರೂಪಾಯಿ, ವಾರ್ಷಿಕ ಪ್ಯಾಕೇಜ್‌ಗಳಿಗೆ ₹40-70 ರಷ್ಟು ಕಡಿಮೆ ಮಾಡಿದೆ.
ಓದಿ: Jio ಗ್ರಾಹಕರಿಗೆ ಸೂಪರ್ ಅಪ್‌ಡೇಟ್: ಮನೆಯಲ್ಲೇ ಕುಳಿತು SIM ಆ್ಯಕ್ಟಿವೇಟ್ ಮಾಡಿ! - JIO iActivate Service