ಗಾಜಾ: ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ದಾಳಿಯಿಂದ ಪ್ರತಿನಿತ್ಯ 37 ತಾಯಂದಿರು ಬಲಿಯಾಗುತ್ತಿದ್ದಾರೆ ಎಂದು ಪ್ಯಾಲೆಸ್ತೇನಿಯನ್ ರೆಡ್ ಕ್ರೆಸೆಂಟ್ ಸೊಸೈಟಿ ತಿಳಿಸಿದೆ. ಪ್ಯಾಲೆಸ್ತೇನಿಯನ್ ಲಿಬರೇಶನ್ ಆರ್ಗನೈಸೇಶನ್‌ನಲ್ಲಿ ಡಿಟೈನಿಸ್ ಮತ್ತು ಪ್ಯಾಲೆಸ್ತೇನಿಯನ್ ಪ್ರಿಸನರ್ಸ್ ಕ್ಲಬ್ ಅಸೋಸಿಯೇಷನ್ ತಾಯಂದಿರ ದಿನದ ಹಿನ್ನೆಲೆಯಲ್ಲಿ ಈ ಕುರಿತು ಜಂಟಿ ಹೇಳಿಕೆ ಬಿಡುಗಡೆ ಮಾಡಿದೆ. ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ದಾಳಿ ಭಾರೀ ಪ್ರಮಾಣದಲ್ಲಿ ಪ್ಯಾಲೆಸ್ತೇನಿಯನ್ ತಾಯಂದಿರು ಮತ್ತು ಮಕ್ಕಳ ಸಾವಿಗೆ ಕಾರಣವಾಗುತ್ತಿದೆ ಎಂದು ತಿಳಿಸಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಹಮಾಸ್ ವಿರುದ್ಧ ಅಕ್ಟೋಬರ್ನಲ್ಲಿ ಇಸ್ರೇಲ್ ಯುದ್ಧ ಆರಂಭಿಸಿದಾಗಿನಿಂದ ಇಸ್ರೇಲ್ ಸೇನೆ ಪ್ಯಾಲೆಸ್ತೇನಿಯನ್ ಮಹಿಳೆಯರನ್ನು ಸಾಮೂಹಿಕ ಬಂಧಿಸುತ್ತಿದೆ ಎಂದು ಇದೇ ವೇಳೆ ತಿಳಿಸಿದೆ. 2023ರ ಅಕ್ಟೋಬರ್ 7ರ ಬಳಿಕ ಪ್ಯಾಲೆಸ್ತೇನಿಯನ್ ಮಹಿಳೆಯರು, ಕೈದಿಗಳ ಹಕ್ಕುಗಳ ಉಲ್ಲಂಘನೆ ನಡೆಯುತ್ತಿದೆ. ಹಮಾಸ್ ಮತ್ತು ಪ್ಯಾಲೆಸ್ತೇನಿಯನ್ ಪುರುಷರು ಮತ್ತು ಗಂಡು ಮಕ್ಕಳನ್ನು ಬೆದರಿಸಲು ಅವರು ಮಹಿಳೆಯರನ್ನು ಒತ್ತೆಯಾಳುವಾಗಿರಿಸಿಕೊಂಡಿದ್ದಾರೆ ಎಂದು ದೂರಲಾಗಿದೆ. ಮಹಿಳೆಯರ ವಿರುದ್ಧ ನಡೆಯುತ್ತಿರುವ ಅಪಾರಾಧ ಮತ್ತು ಮಹಿಳೆಯರನ್ನು ವಶಕ್ಕೆ ಪಡೆದಿರುವ ಇಸ್ರೇಲ್ ಕ್ರಮಕ್ಕೆ ಅಂತಾರಾಷ್ಟ್ರೀಯ ಮಹಿಳಾ ಸಂಘಟನೆಗಳು ಧ್ವನಿ ಎತ್ತಿವೆ.