ETV Bharat / technology

ಕೊನೆಗೂ ದೇಶಿ ಮಾರುಕಟ್ಟೆಗೆ ಲಗ್ಗೆಯಿಟ್ಟ ಒನ್​ಪ್ಲಸ್​ 13​: ಸೂಪರ್​ ಫೀಚರ್ಸ್​! - ONEPLUS 13 SERIES LAUNCHED

Oneplus 13 Series Launched: ಒನ್​ಪ್ಲಸ್​ ಕಾಯುವಿಕೆಯ ನಂತರ OnePlus 13 ಮತ್ತು OnePlus 13R ಮೊಬೈಲ್ ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಪ್ರೀಮಿಯಂ ಶ್ರೇಣಿಯಲ್ಲಿ ಬಿಡುಗಡೆಯಾದ ಈ ಸ್ಮಾರ್ಟ್‌ಫೋನ್‌ಗಳಲ್ಲಿ ಹಲವು ವೈಶಿಷ್ಟ್ಯಗಳನ್ನು ಅಪ್‌ಗ್ರೇಡ್ ಮಾಡಲಾಗಿದೆ.

ONEPLUS 13 SERIES PRICE  ONEPLUS 13 SERIES FEATURES  ONEPLUS 13 SERIES LAUNCHED IN INDIA  ONEPLUS 13 AND ONEPLUS 13 R
ಒನ್​ಪ್ಲಸ್​ 13, 13ಆರ್ ಬಿಡುಗಡೆ (Image Credit - OnePlus India)
author img

By ETV Bharat Tech Team

Published : Jan 8, 2025, 8:39 AM IST

Updated : Jan 8, 2025, 8:52 AM IST

Oneplus 13 Series Launched: ಕೊನೆಗೂ ಒನ್​ಪ್ಲಸ್​ ತನ್ನ ಹೊಸ ಮಾಡೆಲ್​ಗಳಾದ OnePlus 13 ಮತ್ತು OnePlus 13R ರಿಲೀಸ್ ಮಾಡಿದೆ. ಕಂಪನಿ ಅನೇಕ ವಿನ್ಯಾಸ ಮತ್ತು ವೈಶಿಷ್ಟ್ಯಗಳಲ್ಲಿ ಅಪ್‌ಡೇಟ್​ನೊಂದಿಗೆ ಈ ಪ್ರೀಮಿಯಂ ರೇಂಜ್​ ಅನ್ನು ಪ್ರಾರಂಭಿಸಿದೆ.

ಹೊಸ ಸೀರಿಸ್​ನಲ್ಲಿ ಕರ್ವ್ಡ್​ ಡಿಸ್​ಪ್ಲೇ ಅನ್ನು ಫ್ಲಾಟ್ ಡಿಸ್​ಪ್ಲೇ ಆಗಿ ಬದಲಾಯಿಸಲಾಗಿದೆ. ಕ್ಯಾಮೆರಾ ಬಂಪ್​ನ ವಿನ್ಯಾಸವೂ ಸ್ವಲ್ಪಮಟ್ಟಿಗೆ ಬದಲಾಗಿದೆ. ಎಕ್ಸ್‌ಚೇಂಜ್ ಬೋನಸ್, ಇನ್‌ಸ್ಟಂಟ್ ಬ್ಯಾಂಕ್ ಡಿಸ್ಕೌಂಟ್, ನೋ ಕಾಸ್ಟ್ ಇಎಂಐ, ಫ್ರೀ ಪ್ರೊಟೆಕ್ಷನ್ ಪ್ಲಾನ್, ಲೈಫ್​ಟೈಂ ವಾರಂಟಿ ಮತ್ತು ಸದಸ್ಯತ್ವದ ವಿಶೇಷ ಪ್ರಯೋಜನಗಳನ್ನು ಮಾರಾಟದಲ್ಲಿ ನೀಡುತ್ತಿದೆ.

OnePlus 13 ವಿಶೇಷತೆಗಳು: 6.82 ಇಂಚಿನ BOE X2 2K+ AMOLED ಡಿಸ್‌ಪ್ಲೇ ಹೊಂದಿದೆ. 4,500 ನಿಟ್ಸ್ ಗರಿಷ್ಠ ಬ್ರೈಟ್​ನೆಸ್​ ಸಪೋರ್ಟ್​ ಮಾಡುತ್ತದೆ. ಇದರರ್ಥ ನೀವು ಸ್ಕ್ರೀನ್​ ವೀಕ್ಷಿಸಲು ಡಾರ್ಕ್​ ಸ್ಥಳಗಳು ಬೇಕಾಗಿಲ್ಲ. ಸ್ಕ್ರೀನ್ ಅನ್ನು​ ಸೂರ್ಯನ ಬೆಳಕಿನಲ್ಲಿಯೂ ಸುಲಭವಾಗಿ ನೋಡಬಹುದಾಗಿದೆ. ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್ ಹೊಂದಿದೆ. ಈ ಸಾಧನವನ್ನು 24GB LPDDR5X RAM ಮತ್ತು 1TB UFS 4.0 ಸ್ಟೋರೇಜ್​ನೊಂದಿಗೆ ಪ್ರಾರಂಭಿಸಲಾಗಿದೆ.

ಕ್ಯಾಮೆರಾ ಮತ್ತು ಬ್ಯಾಟರಿ: OnePlus 13 ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. 50MP ಸೋನಿ LYT-808 ಪ್ರಾಥಮಿಕ ಸೆನ್ಸಾರ್​, 50MP ಟೆಲಿಫೋಟೋ ಲೆನ್ಸ್ ಮತ್ತು 50MP ಅಲ್ಟ್ರಾ-ವೈಡ್ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 32MP ಫ್ರಂಟ್​ ಕ್ಯಾಮೆರಾ ಹೊಂದಿದೆ. ಪ್ರೀಮಿಯಂ ಸ್ಮಾರ್ಟ್‌ಫೋನ್ ವಾಟರ್​ ಮತ್ತು ಡಸ್ಟ್​ ರೆಸಿಸ್ಟೆನ್ಸ್​ ಹೊಂದಿದೆ. 6,000mAh ಬ್ಯಾಟರಿ ಇದರಲ್ಲಿದೆ. 100W SuperVOOC ಸ್ಪೀಡ್​ ಚಾರ್ಜಿಂಗ್ ಸಪೋರ್ಟ್​ ಮಾಡುತ್ತದೆ.

OnePlus 13R ವಿಶೇಷತೆಗಳು: OnePlus 13R ಈ ಸೀರಿಸ್​ನ ಕೈಗೆಟುಕುವ ರೂಪಾಂತರವಾಗಿದೆ. 6.7 ಇಂಚಿನ 8T LTPO AMOLED ಡಿಸ್​ಪ್ಲೇಯೊಂದಿಗೆ ಬಿಡುಗಡೆ ಮಾಡಲಾಗಿದೆ. ಇದು 4,500 ನಿಟ್ಸ್ ಬ್ರೈಟ್‌ನೆಸ್​ ನೀಡುತ್ತದೆ. ಇದು ಪ್ರೊಟೆಕ್ಷನ್​ಗಾಗಿ​ ಒಪ್ಪೊ ಕ್ರಿಸ್ಟಲ್ ಶೀಲ್ಡ್ ಗ್ಲಾಸ್​ ಪ್ರೊಟೆಕ್ಷನ್​ ಹೊಂದಿದೆ. ಇದು Qualcomm Snapdragon 8 Gen 3 ಪ್ರೊಸೆಸರ್ ಹೊಂದಿದೆ. ಈ ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಸಹ ಹೊಂದಿದೆ. ಇದರಲ್ಲಿ 50MP ಪ್ರಾಥಮಿಕ ಸೆನ್ಸಾರ್​ ಇದೆ.

OnePlus 13, OnePlus 13R ಬೆಲೆ: OnePlus 13ನ 12GB RAM + 256GB ರೂಪಾಂತರದ ಬೆಲೆ 69,999 ರೂ. ಇದೆ. ಅದರ 16GB RAM + 512GB ಮತ್ತು 24GB RAM + 1TB ರೂಪಾಂತರಗಳ ಬೆಲೆ ಕ್ರಮವಾಗಿ ರೂ 76,999 ಮತ್ತು ರೂ 89,999 ಆಗಿದೆ. ಐಸಿಐಸಿಐ ಬ್ಯಾಂಕ್ ಕಾರ್ಡ್ ಮೇಲೆ 5,000 ರೂ.ಗಳ ರಿಯಾಯಿತಿ ಲಭ್ಯವಿರುತ್ತದೆ. ಇದಲ್ಲದೇ ರೂ.5,000 ಎಕ್ಸ್‌ಚೇಂಜ್ ಆಫರ್ ದೊರೆಯಲಿದೆ. OnePlus 13ರ ಮಾರಾಟವು ಜನವರಿ 10, 2025ರಂದು ಇ-ಕಾಮರ್ಸ್ ವೆಬ್‌ಸೈಟ್ Amazon ಮತ್ತು OnePlus ನ ಅಧಿಕೃತ ರಿಟೈಲ್​ ಶಾಪ್​ಗಳಲ್ಲಿ ನಡೆಯಲಿದೆ.

OnePlus 13Rನ 12GB RAM + 256GB ರೂಪಾಂತರದ ಆರಂಭಿಕ ಬೆಲೆ 42,999 ರೂ. ಆಗಿದೆ. ಆದರೆ, ಅದರ ಟಾಪ್ 16GB RAM + 512GB ರೂಪಾಂತರದ ಬೆಲೆ 49,999 ರೂ. ಕಂಪನಿಯು ತನ್ನ ಖರೀದಿಯ ಮೇಲೆ 3,000 ರೂಪಾಯಿಗಳ ಬ್ಯಾಂಕ್ ರಿಯಾಯಿತಿ ಮತ್ತು 4,000 ರೂಪಾಯಿಗಳ ವಿನಿಮಯ ಬೋನಸ್ ನೀಡುತ್ತಿದೆ. OnePlus 13Rನ ಮೊದಲ ಮಾರಾಟವು ಇ-ಕಾಮರ್ಸ್ ವೆಬ್‌ಸೈಟ್ Amazon ನಲ್ಲಿ ಜನವರಿ 13, 2025ರಿಂದ ಪ್ರಾರಂಭವಾಗಲಿದೆ.

ಮ್ಯಾಗ್ನೆಟಿಕ್ ಚಾರ್ಜರ್, OnePlus ಬಡ್ಸ್ ಪ್ರೊ 3 ಬಿಡುಗಡೆ: OnePlus ಈ ಸೀರಿಸ್​ನೊಂದಿಗೆ OnePlus 50W AIRVOOC ಮ್ಯಾಗ್ನೆಟಿಕ್ ಚಾರ್ಜರ್ ಸಹ ಬಿಡುಗಡೆ ಮಾಡಿದೆ. ಇದರ ಬೆಲೆ 5,999 ರೂಪಾಯಿ. ಇದರೊಂದಿಗೆ, ಕಂಪನಿ ಮ್ಯಾಗ್ನೆಟಿಕ್ ಕೇಸ್ ಅನ್ನು ಸಹ ಪರಿಚಯಿಸಿದೆ. ಇದರಲ್ಲಿ ಸ್ಯಾಂಡ್‌ಸ್ಟೋನ್ ರೂಪಾಂತರದ ಬೆಲೆ ರೂ 1,299 ಮತ್ತು ಅದರ ವುಡ್ ಗ್ರೇನ್ ರೂಪಾಂತರದ ಬೆಲೆ ರೂ 2,299 ಆಗಿದೆ. ಅಲ್ಲದೆ, OnePlus Buds Pro 3 ನ ನೀಲಿ ರೂಪಾಂತರವನ್ನು ಸಹ ಪರಿಚಯಿಸಲಾಗಿದೆ, ಇದರ ಬೆಲೆ 11,999 ರೂ. ಆಗಿದೆ.

ಇದನ್ನೂ ಓದಿ: ಸ್ಯಾಮ್​ಸಂಗ್​ ಗ್ಯಾಲಕ್ಸಿ ಅನ್ಪ್ಯಾಕ್ಡ್ ಈವೆಂಟ್​ಗೆ ದಿನಗಣನೆ ಶುರು: ಯಾವಾಗ, ಎಲ್ಲಿ?

ಇದನ್ನೂ ಓದಿ: ರೆಡ್​ಮಿ 14ಸಿ 5ಜಿ ಸ್ಮಾರ್ಟ್‌ಫೋನ್: ಅಬ್ಬಬ್ಬಾ! ಕೈಗೆಟುಕುವ ದರದಲ್ಲಿ ಇಷ್ಟೊಂದು ಫೀಚರ್ಸ್ - REDMI 14C 5G PRICE IN INDIA

Last Updated : Jan 8, 2025, 8:52 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.