ETV Bharat / state

ರಾಜ್ಯದ ವಿವಿಧೆಡೆ 8 ಸರ್ಕಾರಿ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; ದಾಖಲೆಗಳ ಪರಿಶೀಲನೆ - LOKAYUKTA RAID

ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ಪೊಲೀಸರು ಸರ್ಕಾರಿ ಅಧಿಕಾರಿಗಳ ಮನೆಗಳು ಮತ್ತು ಅವರಿಗೆ ಸೇರಿದ ಇತರೆ ಸ್ಥಳಗಳ ಮೇಲೆ ದಾಳಿ ನಡೆಸಿದ್ದು, ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಲೋಕಾಯುಕ್ತ
ಲೋಕಾಯುಕ್ತ ಮುಖ್ಯ ಕಚೇರಿ, ಬೆಂಗಳೂರು (ETV Bharat)
author img

By ETV Bharat Karnataka Team

Published : 17 hours ago

Updated : 15 hours ago

ಬೆಂಗಳೂರು: ರಾಜ್ಯದ ವಿವಿಧೆಡೆ ಇಂದು 8 ಮಂದಿ ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಅಸಮತೋಲಿತ ಆಸ್ತಿ ಸಂಗ್ರಹದ ಆರೋಪದಡಿ ಬೆಂಗಳೂರು, ಚಿಕ್ಕಮಗಳೂರು, ಬೀದರ್, ಬೆಳಗಾವಿ, ತುಮಕೂರು, ಗದಗ, ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಶೋಧ ಕಾರ್ಯ ನಡೆಯುತ್ತಿದೆ.

ಬಳ್ಳಾರಿಯ ಬಿಸಿಎಂ ತಾಲೂಕು ಅಧಿಕಾರಿ ಮನೆ ಮೇಲೆ ದಾಳಿ: ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಬಳ್ಳಾರಿ ತಾಲೂಕು ಬಿಸಿಎಂ ಅಧಿಕಾರಿ ಲೋಕೇಶ್ ನಿವಾಸದ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ರಾಮಾಂಜನೇಯ ನಗರದಲ್ಲಿರುವ ನಿವಾಸ, ಸಂಬಂಧಿಕರು ಹಾಗೂ ಸ್ನೇಹಿತರ ನಿವಾಸದ ಮೇಲೂ ಏಕಕಾಲಕ್ಕೆ ದಾಳಿ ಮಾಡಲಾಗಿದ್ದು ಚಿನ್ನಾಭರಣ, ನಗದು ಮತ್ತು ಆಸ್ತಿ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಖಾನಾಪುರ ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ: ಅಕ್ರಮ‌ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಖಾನಾಪುರ ತಹಶೀಲ್ದಾರ್​ ಪ್ರಕಾಶ ಗಾಯಕವಾಡ ಅವರ ಮನೆ ಮತ್ತು ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.‌ ಬೆಳಗಾವಿಯ ಗಣೇಶಪುರದ ಮನೆ, ನಿಪ್ಪಾಣಿಯಲ್ಲಿರುವ ಮನೆ ಹಾಗೂ ಖಾನಾಪುರದ ಕಚೇರಿ ‌ಮೇಲೆ ದಾಳಿ ನಡೆಸಿದ್ದಾರೆ.

ಬೆಳಗಾವಿ ಲೋಕಾಯುಕ್ತ ಎಸ್​ಪಿ ಹಣಮಂತರಾಯ್ ನೇತೃತ್ವದಲ್ಲಿ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಲೋಕಾಯುಕ್ತ ಡಿವೈಎಸ್‌ಪಿ ಪುಷ್ಪಲತಾ, ಪಿಐ ನಿರಂಜನ್ ಪಾಟೀಲ ಈ ದಾಳಿಯಲ್ಲಿ ಭಾಗಿಯಾಗಿದ್ದಾರೆ.

ದಾಳಿಗೊಳಗಾದ ಅಧಿಕಾರಿಗಳ ವಿವರ:

ಅಧಿಕಾರಿಯ ಹೆಸರುಹುದ್ದೆಸ್ಥಳ
ಶೋಭಾಸಾರಿಗೆ ಇಲಾಖೆ ಜಂಟಿ ಆಯುಕ್ತೆಬೆಂಗಳೂರು
ಡಾ.ಎಸ್.ಎನ್.ಉಮೇಶ್ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಚಿಕ್ಕಮಗಳೂರು ಜಿಲ್ಲೆ ಕಡೂರು
ರವೀಂದ್ರ ಇನ್ಸ್‌ಪೆಕ್ಟರ್ - ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಉಪವಿಭಾಗಬೀದರ್ ಜಿಲ್ಲೆ ಬಸವ ಕಲ್ಯಾಣ
ಪ್ರಕಾಶ್ ಶ್ರೀಧರ್​​ ಗಾಯಕ್ವಾಡ್ ತಹಶೀಲ್ದಾರ್ಬೆಳಗಾವಿ ಜಿಲ್ಲೆ ಖಾನಾಪುರ
ಎಸ್.ರಾಜುಪ್ರಾದೇಶಿಕ ಸಾರಿಗೆ ಅಧಿಕಾರಿ (ನಿವೃತ್ತ), ಪ್ರಾದೇಶಿಕ ಸಾರಿಗೆ ಇಲಾಖೆತುಮಕೂರು
ಹುಚ್ಚೇಶ್ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ಇನ್ ಚಾರ್ಜ್), ಗದಗ - ಬೆಟಗೇರಿ ಪುರಸಭೆಗದಗ
ಆರ್.ಎಚ್.ಲೋಕೇಶ್ಹಿಂದುಳಿದ ವರ್ಗಗಳ ಇಲಾಖೆ ಕಲ್ಯಾಣಾಧಿಕಾರಿ ಬಳ್ಳಾರಿ
ಹುಲಿರಾಜಗಿಲ್ಲೇಸುಗೂರು ಘಟಕದ ಕಿರಿಯ ಇಂಜಿನಿಯರ್ರಾಯಚೂರು
ಲೋಕೇಶ್ ಬಳ್ಳಾರಿ ತಾಲೂಕು ಬಿಸಿಎಂ ಅಧಿಕಾರಿಬಳ್ಳಾರಿ

ಇದನ್ನೂ ಓದಿ: ಶಿಕ್ಷಕಿಯ ವರ್ಗಾವಣೆಗೆ ಲಂಚ: ಡಿಡಿಪಿಐ, ಕಚೇರಿ ಅಧೀಕ್ಷಕ ಲೋಕಾಯುಕ್ತ ಬಲೆಗೆ

Last Updated : 15 hours ago
ETV Bharat Logo

Copyright © 2025 Ushodaya Enterprises Pvt. Ltd., All Rights Reserved.