ETV Bharat / bharat

ಛತ್ತೀಸ್​ಗಢ ದಾಳಿ: ಸಾವನ್ನಪ್ಪಿದ 8 ಪೊಲೀಸರಲ್ಲಿ ಐವರು ನಕ್ಸಲಿಸಂ​ ತೊರೆದು ಶರಣಾದವರು! - POLICEMEN KILLED IN BIJAPUR BLAST

ಛತ್ತೀಸ್‌ಗಢದ ಬಸ್ತಾರ್​​ ಪ್ರದೇಶದ ಸ್ಥಳೀಯರು ಮತ್ತು ಶರಣಾದ ನಕ್ಸಲರನ್ನು ಡಿಆರ್​ಜಿಗೆ ನೇಮಿಸಲಾಗುತ್ತದೆ. ಹೀಗೆ ಸೇರಿದವರನ್ನು ಇಲ್ಲಿ 'ಮಣ್ಣಿನ ಮಕ್ಕಳು' ಎಂದು ಕರೆಯಲಾಗುತ್ತದೆ.

5-out-of-8-policemen-killed-in-bijapur-blast-were-former-naxalites
ಸಂಗ್ರಹ ಚಿತ್ರ (ANI)
author img

By ETV Bharat Karnataka Team

Published : 17 hours ago

Updated : 17 hours ago

ರಾಯ್​​ಪುರ: ಛತ್ತೀಸ್​ಗಢದ ಬಿಜಾಪುರ್​ನಲ್ಲಿ ಸೋಮವಾರ ನಕ್ಸಲರು ನಡೆಸಿದ ಭೀಕರ ದಾಳಿಯಲ್ಲಿ ಸಾವನ್ನಪ್ಪಿದ 8 ಮಂದಿಯಲ್ಲಿ ಐವರು ನಕ್ಸಲಿಸಂ ತೊರೆದು ಪೊಲೀಸ್​ ಪಡೆಗೆ ಸೇರಿದವರಾಗಿದ್ದರು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲಾ ರಿಸರ್ವ್ ಗಾರ್ಡ್‌ ಕಾನ್ಸ್‌ಟೇಬಲ್​ಗಳಾದ ಬುಧ್ರಾಮ್ ಕೊರ್ಸಾ, ಕಾನ್‌ಸ್ಟೆಬಲ್‌ಗಳಾದ ಡುಮ್ಮಾ ಮರ್ಕಮ್, ಪಂಡರು ರಾಮ್, ಬಮನ್ ಸೋಧಿ ಮತ್ತು ಬಸ್ತಾರ್ ಫೈಟರ್‌ನ ಸೋಮ್ದು ಎಂಬವರು ದಾಳಿಯಲ್ಲಿ ಮೃತಪಟ್ಟಿದ್ದರು. ಇವರೆಲ್ಲಾ ಈ ಹಿಂದೆ ನಕ್ಸಲರಾಗಿದ್ದು ಬಳಿಕ ಶರಣಾಗಿ ಪೊಲೀಸ್​ ಇಲಾಖೆ ಸೇರಿದ್ದರು ಎಂದು ಬಸ್ತರ್​​ ವ್ಯಾಪ್ತಿಯ ಐಜಿಪಿ ಸುಂದರರಾಜ್​ ಪಿ ಹೇಳಿದರು.

ಕೊರ್ಸಾ ಮತ್ತು ಸೋಧಿ ಎಂಬವರು ಬಿಜಾಪುರ್​​ ಜಿಲ್ಲೆಯ ನಿವಾಸಿಗಳಾಗಿದ್ದು, ಇನ್ನು ಮೂವರು ದಂಥೇವಾಡ ಜಿಲ್ಲೆಯರಾಗಿದ್ದಾರೆ.

ಕಳೆದ ವರ್ಷ ಏಳು ಜಿಲ್ಲೆಗಳನ್ನು ಒಳಗೊಂಡಿರುವ ಬಸ್ತಾರ್​ ಪ್ರದೇಶದಲ್ಲಿ 792 ನಕ್ಸಲರು ಪೊಲೀಸರಿಗೆ ಶರಣಾಗಿದ್ದರು.

ನಕ್ಸಲರಿಂದ ಭೀಕರ ದಾಳಿ: ಕುಟ್ರು ಪೊಲೀಸ್ ಠಾಣಾ ವ್ಯಾಪ್ತಿಯ ಅಂಬೇಲಿ ಗ್ರಾಮದ ಬಳಿ ಭದ್ರತಾ ಸಿಬ್ಬಂದಿ ಸಾಗುತ್ತಿದ್ದ ವಾಹನವನ್ನು ಸೋಮವಾರ ನಕ್ಸಲರು ಸ್ಪೋಟಿಸಿದ್ದರು. ಎಂಟು ಭದ್ರತಾ ಸಿಬ್ಬಂದಿ ಹಾಗೂ ಡಿಆರ್‌ಜಿ ಮತ್ತು ಬಸ್ತಾರ್ ಫೈಟರ್ಸ್‌ನ ರಾಜ್ಯ ಪೊಲೀಸರ ಎರಡೂ ಘಟಕದಲ್ಲಿನ ಕ್ರಮವಾಗಿ ನಾಲ್ವರು ಹಾಗೂ ಒಬ್ಬ ಚಾಲಕ ಸಾವನ್ನಪ್ಪಿದ್ದರು. ಕಳೆದೆರಡು ವರ್ಷಗಳಿಂದ ಛತ್ತೀಸ್​ಗಢದಲ್ಲಿ ನಕ್ಸಲಿಯರು ಭದ್ರತಾ ಸಿಬ್ಬಂದಿಯ ಮೇಲೆ ನಡೆಸಿದ ಅತಿದೊಡ್ಡ ದಾಳಿ ಇದಾಗಿದೆ.

ಬಸ್ತಾರ್​​ ಪ್ರದೇಶದಲ್ಲಿನ ಸ್ಥಳೀಯರು ಮತ್ತು ಶರಣಾದ ನಕ್ಸಲರನ್ನು ಡಿಆರ್​ಜಿಗೆ ನೇಮಿಸಲಾಗುತ್ತದೆ. ಇವರನ್ನು ಮಣ್ಣಿನ ಮಕ್ಕಳು ಎಂದು ಕರೆಯಲಾಗುತ್ತದೆ. ಇವರನ್ನು ರಾಜ್ಯದಲ್ಲಿ ನಕ್ಸಲ್​ ವಿರೋಧಿ ಶಕ್ತಿಯ ಮುಂಚೂಣಿ ಪಡೆ ಎಂದು ಪರಿಗಣಿಸಲಾಗಿದೆ.

ಬಸ್ತಾರ್​ ಪ್ರದೇಶದಲ್ಲಿ ಹರಡಿರುವ ಏಳು ಜಿಲ್ಲೆಗಳಲ್ಲಿ 40,000 ಚ.ಕಿ.ಮೀ ಪ್ರದೇಶದಲ್ಲಿ ಡಿಆರ್​ಜಿಯನ್ನು ಸ್ಥಾಪಿಸಲಾಗಿದೆ. ಇವರು ಕಳೆದು ನಾಲ್ಕು ದಶಕಗಳಿಂದ ನಡೆಯುತ್ತಿರುವ ಎಡಪಂಥೀಯ ಉಗ್ರವಾದ ವಿರುದ್ದ ಹೋರಾಡುತ್ತಾರೆ.

ಇದನ್ನೂ ಓದಿ: ಭದ್ರತಾ ವಾಹನ ಸ್ಫೋಟಿಸಿದ ನಕ್ಸಲರು: 9 ಯೋಧರು ಹುತಾತ್ಮ - IED BLAST IN CHHATTISGARH

ಇದನ್ನೂ ಓದಿ: ಆರು ಜನ ನಕ್ಸಲರು ನಾಳೆ ಸಮಾಜದ ಮುಖ್ಯ ವಾಹಿನಿಗೆ ಬರಲು ಸಜ್ಜು ; ಚಿಕ್ಕಮಗಳೂರಲ್ಲಿ ವೇದಿಕೆ ಸಿದ್ಧ - NAXALS MAIN STREAM

Last Updated : 17 hours ago
ETV Bharat Logo

Copyright © 2025 Ushodaya Enterprises Pvt. Ltd., All Rights Reserved.