ನವದೆಹಲಿ: ಷೇರು ಮಾರುಕಟ್ಟೆಯಲ್ಲಿ ಇಂದು ಸಹ ಕುಸಿತ ಕಂಡು ಬಂದಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ತಮ್ಮ ಮಾರಾಟ ಮುಂದುವರೆಸಿದ್ದಾರೆ. ಹೀಗಾಗಿ ಭಾರತೀಯ ಷೇರು ಮಾರುಕಟ್ಟೆಗಳು ನಷ್ಟದೊಂದಿಗೆ ದಿನದ ವಹಿವಾಟು ಆರಂಭಿಸಿವೆ.
ನಿಫ್ಟಿ 50 ಸೂಚ್ಯಂಕವು 42 ಪಾಯಿಂಟ್‌ಗಳ ಅಲ್ಪ ಕುಸಿತದೊಂದಿಗೆ 23,338.70ರಲ್ಲಿ ವಹಿವಾಟು ನಡೆಸುತ್ತಿದ್ದರೆ, ಬಿಎಸ್‌ಇ ಸೆನ್ಸೆಕ್ಸ್ 114 ಪಾಯಿಂಟ್ ಗಳಷ್ಟು ಕುಸಿತ ಕಂಡು 77,196.86 ರೊಂದಿಗೆ ವ್ಯವಹಾರ ನಿರತವಾಗಿದೆ. ಎಫ್‌ಐಐಗಳ ನಿರಂತರ ಮಾರಾಟವೇ ಕುಸಿತಕ್ಕೆ ಕಾರಣ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ. ಆದಾಗ್ಯೂ ಈ ಕುಸಿತವು ದೀರ್ಘಾವಧಿಯ ಹೂಡಿಕೆದಾರರಿಗೆ ಲಾರ್ಜ್ ಕ್ಯಾಪ್ ಸ್ಟಾಕ್‌ಗಳನ್ನು ಖರೀದಿಸಲು ಇದು ಉತ್ತಮ ಅವಕಾಶ ಮಾಡಿಕೊಟ್ಟಿದೆ ಎನ್ನುತ್ತಿದ್ದಾರೆ ನುರಿತ ಮಾರುಕಟ್ಟೆ ತಜ್ಞರು.
ಹೂಡಿಕೆದಾರರು ತಾಳ್ಮೆ ಕಳೆದುಕೊಳ್ಳದಂತೆ ತಜ್ಞರ ಸಲಹೆ: ವಿದೇಶಿ ಹೂಡಿಕೆದಾರರು ಭಾರತದಲ್ಲಿ ಖರೀದಿದಾರರ ಭಾವನೆಗಳನ್ನು ಕೆರಳಿಸಿ, ಮಾರಾಟದಲ್ಲಿ ತೊಡಗಿದಾಗ, ಫಂಡಮೆಂಟಲಿ ಸ್ಟ್ರಾಂಗ್ ಆಗಿರುವ ಲಾರ್ಜ್ ಕ್ಯಾಪ್ ಸ್ಟಾಕ್ ಗಳನ್ನು ಖರೀದಿಸುತ್ತಾರೆ. ಹೂಡಿಕೆದಾರರು ಇಂತಹ ಸಂದರ್ಭದಲ್ಲಿ ತಾಳ್ಮೆಯನ್ನು ಕಳೆದುಕೊಳ್ಳದೇ ಶಾಂತವಾಗಿದ್ದು, ಉತ್ತಮ ಅವಕಾಶಕ್ಕಾಗಿ ಕಾಯಬೇಕಿದೆ ಎಂದು ಜಿಯೋಜಿತ್ ಫೈನಾನ್ಷಿಯಲ್ ಸರ್ವೀಸಸ್‌ನ ಮುಖ್ಯ ಹೂಡಿಕೆ ತಂತ್ರಜ್ಞ ವಿ ಕೆ ವಿಜಯಕುಮಾರ್ ಹೇಳಿದ್ದಾರೆ.
ಲಾರ್ಜ್ ಕ್ಯಾಪ್‌ಗಳಲ್ಲಿ ವಿದೇಶಿ ಹೂಡಿಕೆದಾರರು ನಿರಂತರ ಮಾರಾಟ ಮಾಡುತ್ತಿರುವುದರಿಂದ ಕೆಲವು ಸ್ಟಾಕ್ ಗಳು ನ್ಯಾಯಯುತ ಮೌಲ್ಯಕ್ಕೆ ಬಂದು ನಿಂತಿವೆ.ಡಾಲರ್ ಸೂಚ್ಯಂಕ ದುರ್ಬಲಗೊಂಡಿರುವುದರಿಂದ ವಿದೇಶಿ ಹೂಡಿಕೆದಾರರು ಮಾರಾಟ ಮಾಡಿ ಲಾಭಮಾಡಿಕೊಳ್ಳಲು ಮುಂದಾಗಿದ್ದಾರೆ ಎಂದು ತಜ್ಞರು ಹೇಳಿದ್ದಾರೆ.
ಬಹುತೇಕ ವಲಯಗಳ ಷೇರುಗಳಲ್ಲಿ ನಷ್ಟ: ನಿಫ್ಟಿಯಲ್ಲಿ ಇಂದು ಬಹುತೇಕ ವಲಯಗಳು ರೆಡ್ ಮಾರ್ಕ್ ನಲ್ಲೇ ವಹಿವಾಟು ನಡೆಸುತ್ತಿವೆ. ನಿಫ್ಟಿ ಬ್ಯಾಂಕ್, ನಿಫ್ಟಿ ಆಟೋ, ಮತ್ತು ನಿಫ್ಟಿ ಮೀಡಿಯಾ ಕುಸಿತ ಕಂಡಿದ್ದು, ನಿಫ್ಟಿ ಮೀಡಿಯಾ ಶೇ.1.72ರಷ್ಟು ಕುಸಿದಿದೆ. ಇತರ ವಲಯಗಳಾದ ಫಾರ್ಮಾ, ಪಿಎಸ್‌ಯು ಬ್ಯಾಂಕ್‌ಗಳು ಮತ್ತು ರಿಯಾಲ್ಟಿ ಕೂಡ ಒತ್ತಡದಲ್ಲಿದೆ, ನಿಫ್ಟಿ ರಿಯಾಲ್ಟಿ ಶೇಕಡಾ 2 ರಷ್ಟು ಕುಸಿತ ಕಂಡಿದೆ.
ವೈಯಕ್ತಿಕ ಸ್ಟಾಕ್‌ಗಳಲ್ಲಿ ಅದಾನಿ ಎಂಟರ್‌ಪ್ರೈಸಸ್ ಟಾಪ್ ಗೇನರ್ ಆಗಿ ಹೊರಹೊಮ್ಮಿದೆ. ಇದು ಶೇಕಡಾ 2 ಕ್ಕಿಂತ ಹೆಚ್ಚು ಏರಿಕೆ ಕಂಡಿದೆ. ಆದರೆ, ಐಷರ್ ಮೋಟಾರ್ಸ್ ಅತಿದೊಡ್ಡ ನಷ್ಟ ಅನುಭವಿಸಿದೆ. ಈ ಷೇರು ಶೇಕಡಾ 5 ಕ್ಕಿಂತ ಹೆಚ್ಚು ಕುಸಿತ ಕಾಣುವ ಮೂಲಕ ಹೂಡಿಕೆದಾರರಲ್ಲಿ ಭೀತಿ ಹುಟ್ಟುಹಾಕಿದೆ.
ಇದನ್ನು ಓದಿ:ಈ ರಾಜ್ಯವೇ ಈಗ ಮಸಾಲೆಗಳ ಕಣಜ: ಉತ್ಪಾದನೆ ಹೆಚ್ಚಿದ್ದರೂ ಸಿಗುತ್ತಿಲ್ಲ ರೈತರಿಗೆ ಸೂಕ್ತ ಬೆಲೆ: ಬೇಕಿದೆ ಮನ್ನಣೆ
ಏರುತ್ತಲೇ ಇದೆ ಚಿನ್ನದ ಬೆಲೆ: ಇಂದು ಕರ್ನಾಟಕದಲ್ಲಿ ಎಷ್ಟಿದೆ ಬಂಗಾರದ ದರ?; ಸಂಪೂರ್ಣ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ