PM Modi Speech in AI Summit, Paris: ಕೃತಕ ಬುದ್ಧಿಮತ್ತೆ (ಎಐ)ಯಿಂದ ಉದ್ಯೋಗ ನಷ್ಟವಾಗುತ್ತದೆ ಎಂಬುದು ಭ್ರಮೆ. ಇದು ಈ ಶತಮಾನದಲ್ಲಿ ಇಡೀ ಮಾನವತೆಗೆ ಕೋಡ್ ಬರೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದರು.
ಪ್ಯಾರಿಸ್‌ನಲ್ಲಿಂದು ಎಐ ಕ್ರಿಯಾ ಶೃಂಗಸಭೆ ಉದ್ದೇಶಿಸಿ ಅವರು ಮಾತನಾಡಿದರು. ತಮ್ಮ ಭಾಷಣದಲ್ಲಿ ಕೃತಕ ಬುದ್ಧಿಮತ್ತೆಯ ಪಾರದರ್ಶಕ ಮತ್ತು ಜವಾಬ್ದಾರಿಯುತ ಅಭಿವೃದ್ಧಿಯ ಕುರಿತು ಮಾತನಾಡಿದರು.
#WATCH | During the AI Action Summit at the Grand Palais in Paris, Prime Minister Narendra Modi says " india is building its own large language model considering our diversity. we also have a unique public-private partnership model for pooling resources like compute power. it is… pic.twitter.com/6owlKf9Tyz
— ANI (@ANI) February 11, 2025
ಪ್ಯಾರಿಸ್‌ನ ಗ್ರ್ಯಾಂಡ್ ಪ್ಯಾಲೇಸ್‌ನಲ್ಲಿ ನಡೆದ ಶೃಂಗಸಭೆಯಲ್ಲಿ ಮೋದಿ, ಇಂದು ಎಐ ನಮ್ಮ ಜೀವನದಲ್ಲಿ ಬಹಳ ಮುಖ್ಯವಾದ ಸ್ಥಾನ ಪಡೆದುಕೊಂಡಿದೆ. ನೀವು ನಿಮ್ಮ ವೈದ್ಯಕೀಯ ವರದಿಯನ್ನು ಎಐ ಅಪ್ಲಿಕೇಶನ್‌ಗೆ ಅಪ್‌ಲೋಡ್ ಮಾಡಿದರೆ, ಅದು ಅದರ ಅರ್ಥವನ್ನು ಸರಳ ಭಾಷೆಯಲ್ಲಿ ವಿವರಿಸುತ್ತದೆ. ಇದು ಎಐನ ಸಕಾರಾತ್ಮಕ ಸಾಮರ್ಥ್ಯ ಎಂದರು.
ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಕಾರ್ಯಕ್ರಮದ ಸಹ-ಅಧ್ಯಕ್ಷತೆ ವಹಿಸಿದ್ದ ಮೋದಿ, ನಾವು ಮಾನವೀಯತೆಯ ಹಾದಿಯನ್ನು ಉಳಿಸುವ ಎಐ ಯುಗದ ಆರಂಭದಲ್ಲಿದ್ದೇವೆ. ಯಂತ್ರಗಳು ಮನುಷ್ಯರಿಗಿಂತ ಉತ್ತಮವಾಗುತ್ತಿವೆ ಎಂದು ಕೆಲವರು ಚಿಂತಿಸುತ್ತಿದ್ದಾರೆ. ಆದರೆ ನಮ್ಮ ಸಾಮೂಹಿಕ ಭವಿಷ್ಯದ ಕೀಲಿಕೈಗಳು ಮತ್ತು ಹಣೆಬರಹವನ್ನು ಹಂಚಿಕೊಳ್ಳುವವರು ಮನುಷ್ಯರಾದ ನಮ್ಮನ್ನು ಹೊರತುಪಡಿಸಿ ಬೇರಾರೂ ಅಲ್ಲ. ಈ ಜವಾಬ್ದಾರಿಯ ಪ್ರಜ್ಞೆಯನ್ನು ನಾವು ಅರ್ಥಮಾಡಿಕೊಳ್ಳಬೇಕು. ಎಐ ಬಗ್ಗೆ ಹಲವು ಪೂರ್ವಾಗ್ರಹಗಳಿದ್ದು, ನಾವು ಎಚ್ಚರಿಕೆಯಿಂದ ಯೋಚಿಸಬೇಕಾಗಿದೆ ಎಂದು ಹೇಳಿದರು.
#WATCH | " we are at the dawn of the ai age that will shape the course of humanity," says pm modi at the ai action summit in paris.
— ANI (@ANI) February 11, 2025
(source: dd) pic.twitter.com/MOevbFZXm8
ಈ ಶೃಂಗಸಭೆಯನ್ನು ಆಯೋಜಿಸಿದ್ದಕ್ಕಾಗಿ ಮತ್ತು ಅದರಲ್ಲಿ ಭಾಗವಹಿಸಲು ನನ್ನನ್ನು ಆಹ್ವಾನಿಸಿದ್ದಕ್ಕಾಗಿ ನನ್ನ ಸ್ನೇಹಿತ ಅಧ್ಯಕ್ಷ ಮ್ಯಾಕ್ರನ್‌ಗೆ ನಾನು ಕೃತಜ್ಞ. ಎಐ ನಮ್ಮ ಆರ್ಥಿಕತೆ, ಭದ್ರತೆ ಮತ್ತು ನಮ್ಮ ಸಮಾಜವನ್ನು ಪುನರ್‌ರೂಪಿಸುತ್ತಿದೆ ಎಂದು ಮೋದಿ ತಿಳಿಸಿದರು.
21ನೇ ಶತಮಾನದಲ್ಲಿ ಎಐ ಇಡೀ ಮಾನವೀಯತೆಗೆ ಕೋಡ್ ಬರೆಯುತ್ತಿದೆ. ಎಐ ತಂತ್ರಜ್ಞಾನವನ್ನು ಮುಕ್ತ ಮೂಲ ವ್ಯವಸ್ಥೆಯ ಮೂಲಕ ಅಭಿವೃದ್ಧಿಪಡಿಸಬೇಕು. ಇದು ಅದರ ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ ಮತ್ತು ಎಲ್ಲಾ ದೇಶಗಳು ಅದರಿಂದ ಸಮಾನ ಪ್ರಯೋಜನವನ್ನು ಪಡೆಯುತ್ತವೆ. ಎಐ ಅಭಿವೃದ್ಧಿಯಲ್ಲಿ ನೈತಿಕತೆ ಮತ್ತು ಜವಾಬ್ದಾರಿಯನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ ಎಂದು ಮೋದಿ ಹೇಳಿದರು.
ಮುಕ್ತ AI ವ್ಯವಸ್ಥೆಗೆ ಮೋದಿ ಒತ್ತು: ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿ, ಮುಕ್ತ AI ವ್ಯವಸ್ಥೆಯನ್ನು ಉತ್ತೇಜಿಸುವ ಕುರಿತು ಮಾತನಾಡಿದರು. ಇದು ತಂತ್ರಜ್ಞಾನದ ಪಾರದರ್ಶಕತೆಯನ್ನು ಹೆಚ್ಚಿಸುವುದಲ್ಲದೆ, ಎಐ ಅಭಿವೃದ್ಧಿಯು ಜಾಗತಿಕ ಸಮುದಾಯದ ಹಿತಾಸಕ್ತಿಯಲ್ಲಿದೆ ಎಂದು ಖಚಿತಪಡಿಸುತ್ತದೆ. ಈ ದಿಕ್ಕಿನಲ್ಲಿ ಭಾರತ ಬಲವಾದ ಹೆಜ್ಜೆಗಳನ್ನಿಡುತ್ತಿದೆ ಮತ್ತು ಮುಂಬರುವ ವರ್ಷಗಳಲ್ಲಿ ಎಐನ ನೈತಿಕ ಮತ್ತು ಪಾರದರ್ಶಕ ಬಳಕೆಯ ಮೇಲೆ ಕೆಲಸ ಮಾಡುತ್ತದೆ ಎಂದರು.
#WATCH | During the AI Action Summit at the Grand Palais in Paris, Prime Minister Narendra Modi says " governance is also about ensuring access to all, especially in the global south. it is where the capabilities are most lacking be it power, talent, or data for the financial… pic.twitter.com/HXd3bAdEXI
— ANI (@ANI) February 11, 2025
ಎಐ ಕುರಿತು ಜಾಗತಿಕ ಸಹಕಾರ ಅಗತ್ಯ: ಶೃಂಗಸಭೆಯ ವೇದಿಕೆಯಿಂದ ಜಾಗತಿಕ ಸಹಕಾರದ ಅಗತ್ಯತೆಯನ್ನೂ ಮೋದಿ ಹೇಳಿದರು. ಕೃತಕ ಬುದ್ಧಿಮತ್ತೆ ಕೇವಲ ಒಂದು ದೇಶ ಅಥವಾ ಕಂಪೆನಿಗೆ ಸೀಮಿತವಾಗಿರಬಾರದು. ಅದರ ಪ್ರಯೋಜನಗಳು ಎಲ್ಲಾ ದೇಶಗಳು ಮತ್ತು ಸಮಾಜದ ಎಲ್ಲಾ ವರ್ಗಗಳನ್ನೂ ತಲುಪಬೇಕು. ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಮುಕ್ತವಾಗಿ ಹಂಚಲು ಸಹಕರಿಸಬೇಕೆಂದು ಅವರು ಒತ್ತಾಯಿಸಿದರು.
ಎಐ ಅಭಿವೃದ್ಧಿಯಲ್ಲಿ ಭಾರತದ ಪಾತ್ರ: ಭಾರತವು ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ತ್ವರಿತ ಪ್ರಗತಿ ಸಾಧಿಸುತ್ತಿದೆ. ಈ ತಂತ್ರಜ್ಞಾನವನ್ನು ಶಿಕ್ಷಣ, ಆರೋಗ್ಯ ಮತ್ತು ಕೃಷಿಯಂತಹ ಕ್ಷೇತ್ರಗಳಲ್ಲಿ ಬಳಸಲಾಗುತ್ತಿದೆ. ಎಐ ಸಂಶೋಧನೆಯನ್ನು ಉತ್ತೇಜಿಸಲು ಭಾರತ ಜಾಗತಿಕ ಪಾಲುದಾರಿಕೆಗೆ ಒತ್ತು ನೀಡುತ್ತಿದೆ ಎಂದು ಮೋದಿ ಹೇಳಿದರು.
ನೈತಿಕತೆ, AI ಸುರಕ್ಷತೆಯ ಬಗ್ಗೆ ಮೋದಿ ಕಾಳಜಿ: ಇದೇ ವೇಳೆ, ಕೃತಕ ಬುದ್ಧಿಮತ್ತೆಯ ದುರುಪಯೋಗದ ಬಗ್ಗೆಯೂ ಮೋದಿ ಕಳವಳ ವ್ಯಕ್ತಪಡಿಸಿದರು. ಯಾವುದೇ ನಿಯಮಗಳು ಮತ್ತು ನಿಬಂಧನೆಗಳಿಲ್ಲದೆ ಎಐ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದರೆ ಅದು ಸಮಾಜಕ್ಕೆ ಅಪಾಯಕಾರಿ ಎಂದರು. ಎಐ ಸುರಕ್ಷತಾ ಮಾನದಂಡಗಳನ್ನು ಬಲಪಡಿಸುವ ಮತ್ತು ಅದನ್ನು ನೈತಿಕತೆಯ ವ್ಯಾಪ್ತಿಯಲ್ಲಿಡುವ ಅಗತ್ಯವನ್ನು ಮೋದಿ ಒತ್ತಿ ಹೇಳಿದರು.
#WATCH | PM Modi and French President Emmanuel Macron arrive for AI Action Summit at Grand Palais in Paris
— ANI (@ANI) February 11, 2025
(Source: DD ) pic.twitter.com/UHAHiRBRd6
ಮೋದಿ-ಮ್ಯಾಕ್ರನ್ ನಡುವೆ ದ್ವಿಪಕ್ಷೀಯ ಮಾತುಕತೆ: ಎಐ ಕ್ರಿಯಾ ಶೃಂಗಸಭೆಯ ನಂತರ ಪ್ರಧಾನಿ ಮೋದಿ ಮತ್ತು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯಲಿದೆ. ಈ ವೇಳೆ ಉಭಯ ನಾಯಕರು ಭಾರತ-ಫ್ರಾನ್ಸ್ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಬಗ್ಗೆ ಚರ್ಚಿಸಲಿದ್ದಾರೆ. ರಕ್ಷಣೆ, ವ್ಯಾಪಾರ, ಇಂಧನ ಮತ್ತು ಡಿಜಿಟಲ್ ತಂತ್ರಜ್ಞಾನದಂತಹ ಪ್ರಮುಖ ವಿಷಯಗಳು ಇದರಲ್ಲಿ ಸೇರಿವೆ.
ಮಾರ್ಸಿಲ್ಲೆಯಲ್ಲಿ ಭಾರತೀಯ ಕಾನ್ಸೋಲೇಟ್ ಉದ್ಘಾಟನೆ: ಫ್ರಾನ್ಸ್ ಭೇಟಿಯ ವೇಳೆ ಪ್ರಧಾನಿ ಮೋದಿ ಮಾರ್ಸಿಲ್ಲೆಗೂ ಭೇಟಿ ನೀಡಲಿದ್ದು, ಅಲ್ಲಿ ಭಾರತೀಯ ಕಾನ್ಸೋಲೇಟ್ ಉದ್ಘಾಟಿಸಲಿದ್ದಾರೆ. ಇದು ಫ್ರಾನ್ಸ್‌ನಲ್ಲಿ ಭಾರತದ ಎರಡನೇ ರಾಜತಾಂತ್ರಿಕ ಕಾರ್ಯಾಚರಣೆಯಾಗಿದ್ದು, ಎರಡೂ ದೇಶಗಳ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತದೆ. ಇದಲ್ಲದೆ, ಅವರು ಮೊದಲ ಮಹಾಯುದ್ಧದಲ್ಲಿ ಹುತಾತ್ಮರಾದ ಭಾರತೀಯ ಸೈನಿಕರಿಗೆ ಗೌರವ ಸಲ್ಲಿಸಲಿದ್ದಾರೆ.
ಇದನ್ನೂ ಓದಿ: ಇಂದು ವಿಜ್ಞಾನದಲ್ಲಿ ಮಹಿಳೆಯರು & ಬಾಲಕಿಯರ ವಿಶೇಷ ದಿನ: ಭಾರತೀಯ ಮಹಿಳಾ ವಿಜ್ಞಾನಿಗಳಿಗೊಂದು ಸೆಲ್ಯೂಟ್!