ಮೈಸೂರು: "ಮೈಸೂರು ಲೋಕಾಯುಕ್ತರು ಮುಡಾ 50:50 ಹಗರಣದ ಎಲ್ಲಾ ಪ್ರಕರಣಗಳನ್ನು ತನಿಖೆ ನಡೆಸಬೇಕೆಂದು" ಎಂದು ದೂರುದಾರ ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ಮತ್ತೊಂದು ಮನವಿ ಸಲ್ಲಿಸಿದರು.
ಇಂದು ಲೋಕಾಯುಕ್ತ ಕಚೇರಿಗೆ ಆಗಮಿಸಿದ ಸ್ನೇಹಮಯಿ ಕೃಷ್ಣ, "ಮೈಸೂರಿನ ಲೋಕಾಯುಕ್ತರು 50:50 ಅನುಪಾತದ ಹಗರಣದ ಸಂಪೂರ್ಣ ತನಿಖೆ ಮಾಡದೇ, ಕೇವಲ ಸಿದ್ದರಾಮಯ್ಯ ಅವರ ಕುಟುಂಬಕ್ಕೆ ಸೇರಿದ 14 ಸೈಟ್ಗಳ ಬಗ್ಗೆ ಮಾತ್ರ ತನಿಖೆ ಮಾಡುತ್ತಿದ್ದು, ಇದರಿಂದ ಮುಡಾ ಹಗರಣದ ಆರೋಪಿಗಳು ತಪ್ಪಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಎಲ್ಲ ಪ್ರಕರಣಗಳನ್ನು ಅಧಿಕಾರಿಗಳು ತನಿಖೆ ನಡೆಸಬೇಕೆಂದು" ಎಂದು ದೂರುದಾರ ಸ್ನೇಹಮಯಿ ಲೋಕಾಯುಕ್ತಕ್ಕೆ ಮತ್ತೊಂದು ಮನವಿ ಸಲ್ಲಿಸಿದರು.
ಇಂದು ಲೋಕಾಯುಕ್ತ ಕಚೇರಿಗೆ ಆಗಮಿಸಿದ ಸ್ನೇಹಮಯಿ ಕೃಷ್ಣ, "ಮುಡಾದಲ್ಲಿ 50:50 ಅನುಪಾತದ ನಿವೇಶ ಹಂಚಿಕೆಯಲ್ಲಿ ಭಾರಿ ಅವ್ಯವಹಾರವಾಗಿದ್ದು, ಇದರಲ್ಲಿ ಮುಡಾದ ಅಧಿಕಾರಿಗಳು, ಪ್ರಭಾವಿಗಳು, ಹಾಗೂ ಬಿಲ್ಡರ್ಗಳು ಭಾಗಿಯಾಗಿದ್ದು, ಕೋಟ್ಯಂತರ ರೂಪಾಯಿ ಅಕ್ರಮದ ಹಣದ ವಹಿವಾಟು ಆಗಿದೆ. ಈ ಬಗ್ಗೆ ಲೋಕಾಯುಕ್ತರು ಸಮಗ್ರ ತನಿಖೆ ನಡೆಸಬೇಕು, ಕೇವಲ ಸಿದ್ದರಾಮಯ್ಯ ಕುಟುಂಬದ 14 ಸೈಟ್ಗಳ ಬಗ್ಗೆ ಮಾತ್ರ ತನಿಖೆ ನಡೆಸುತ್ತಿದ್ದು, ಇದರಿಂದ ಇತರ ಆರೋಪಿಗಳು ತಪ್ಪಿಸಿಕೊಳ್ಳುತ್ತಿದ್ದಾರೆ. ಕೂಡಲೇ ಲೋಕಾಯುಕ್ತರು ಈ ಪ್ರಕರಣದಲ್ಲಿ 50:50 ಅನುಪಾತದಲ್ಲಿ ಭಾರೀ ಅಕ್ರಮಗಳ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು" ಆಗ್ರಹಿಸಿದರು.
ಮಾಜಿ ಮುಡಾ ಆಯುಕ್ತ ನಟೇಶ್ ತಮ್ಮ ಹೆಂಡತಿ ಸೋದರ ಮಾವ ಹಾಗೂ ಹೆಂಡತಿ ಹೆಸರಿನಲ್ಲಿ ಕಾನೂನು ಉಲ್ಲಂಘನೆ ಮಾಡಿ, ಮುಡಾ ದಿಂದ ಸೈಟ್ ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಲೋಕಾಯುಕ್ತಕ್ಕೆ ದಾಖಲೆ ನೀಡಿದ್ದೇನೆ" ಎಂದು ಇದೇ ಸಂದರ್ಭದಲ್ಲಿ ಸ್ನೇಹಮಯಿ ಕೃಷ್ಣ ಹೇಳಿಕೆ ನೀಡಿದರು.
ಇದನ್ನೂ ಓದಿ: ಮುಡಾ ಹಗರಣ : ದಾಖಲೆ ಪಡೆಯಲು ಲೋಕಾಯುಕ್ತ ಪೊಲೀಸರಿಗೆ ಹೈಕೋರ್ಟ್ ಸೂಚನೆ