ಕರ್ನಾಟಕ

karnataka

ETV Bharat / international

ದಕ್ಷಿಣ ಕೊರಿಯಾ ಭೀಕರ ವಿಮಾನ ದುರಂತ: 181 ಜನರಲ್ಲಿ 179 ಮಂದಿ ಸಾವು - SOUTH KOREA PLANE CRASH

ಬ್ಯಾಂಕಾಕ್‌ನಿಂದ ದಕ್ಷಿಣ ಕೊರಿಯಾಕ್ಕೆ ಆಗಮಿಸಿದ್ದ ವಿಮಾನ ಲ್ಯಾಂಡಿಂಗ್​ ವೇಳೆ ಅಪಘಾತಕ್ಕೀಡಾಗಿದ್ದು, 179 ಪ್ರಯಾಣಿಕರು ಅಸುನೀಗಿದ್ದಾರೆ. ಇಬ್ಬರು ವಿಮಾನ ಸಿಬ್ಬಂದಿ ಮಾತ್ರ ಬದುಕುಳಿಯುವ ಸಾಧ್ಯತೆ ಇದೆ.

PLANE CAUGHT FIRE  SEOUL  SOUTH KOREAN AIRPORT  MUAN INTERNATIONAL AIRPORT
ಅಪಘಾತಗೊಂಡ ಜೆಜು ಏರ್ ವಿಮಾನ (AP)

By PTI

Published : Dec 29, 2024, 8:00 AM IST

Updated : Dec 29, 2024, 1:42 PM IST

ಸಿಯೋಲ್​(ದಕ್ಷಿಣ ಕೊರಿಯಾ):ದಕ್ಷಿಣ ಕೊರಿಯಾದ ಮುವಾನ್ ವಿಮಾನ ನಿಲ್ದಾಣದಲ್ಲಿ ಇಂದು ಬೆಳಗ್ಗೆ ಭೀಕರ ವಿಮಾನ ದುರಂತ ಸಂಭವಿಸಿದೆ. ವಿಮಾನದಲ್ಲಿದ್ದ 181 ಜನರ ಪೈಕಿ 179 ಜನ ಸಾವನ್ನಪ್ಪಿದ್ದಾರೆ ಎಂದು ಅಗ್ನಿಶಾಮಕ ಇಲಾಖೆ ಹೇಳಿದೆ.

ದುರಂತದಲ್ಲಿ ಜೆಜು ಏರ್ ವಿಮಾನ ಸಂಪೂರ್ಣ ಸುಟ್ಟು ಹೋಗಿದೆ. ವಿಮಾನದಲ್ಲಿದ್ದ ಇಬ್ಬರು ಸಿಬ್ಬಂದಿ ಹೊರತುಪಡಿಸಿ ಎಲ್ಲ 179 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಪಘಾತಗೊಂಡ ಜೆಜು ಏರ್ ವಿಮಾನ (AP)

ಹಕ್ಕಿ ಡಿಕ್ಕಿ ಹಾಗೂ ಪ್ರತಿಕೂಲ ವಾತಾವರಣ ವಿಮಾನ ಅಪಘಾತಕ್ಕೆ ಕಾರಣವಾಗಿರಬಹುದು. ಆದರೆ ತನಿಖೆ ಬಳಿಕವೇ ಸೂಕ್ತ ಕಾರಣ ಗೊತ್ತಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ಆಗಿದ್ದೇಗೆ ?:ದಕ್ಷಿಣ ಕೊರಿಯಾದ ನೈರುತ್ಯದಲ್ಲಿರುವ ಮುವಾನ್ ವಿಮಾನ ನಿಲ್ದಾಣದಲ್ಲಿ ಜೆಜು ಏರ್ ವಿಮಾನದ ಲ್ಯಾಂಡಿಂಗ್ ಗೇರ್ ಫೇಲ್ ಆದ ಪರಿಣಾಮ ಈ ದುರಂತ ನಡೆದಿದೆ ಎಂದು ಆರಂಭದಲ್ಲಿ ಅಧಿಕಾರಿಗಳು ಅಂದಾಜಿಸಿದ್ದರು.

ಏರ್ಪೋ​ರ್ಟ್​ ರನ್​ವೇಯಲ್ಲಿ ವಿಮಾನ ಲ್ಯಾಂಡಿಂಗ್ ವೇಳೆ ರನ್​ವೇಗೆ ಅಪ್ಪಳಿಸಿ ಬಳಿಕ ಕೊನೆಯಲ್ಲಿದ್ದ ಬೇಲಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ವಿಮಾನದಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂದು ತುರ್ತು ಸೇವಾ ಕಚೇರಿ ಮಾಹಿತಿ ನೀಡಿದೆ.

ಈ ವಿಮಾನ ಬ್ಯಾಂಕಾಕ್‌ನಿಂದ ದಕ್ಷಿಣ ಕೊರಿಯಾಕ್ಕೆ ಆಗಮಿಸಿದ ವೇಳೆ ಘಟನೆ ನಡೆದಿದೆ. ಬೆಂಕಿ ನಂದಿಸಲು 32 ಅಗ್ನಿಶಾಮಕ ವಾಹನಗಳು ಮತ್ತು ಹೆಲಿಕಾಪ್ಟರ್​ಗಳನ್ನು ನಿಯೋಜಿಸಲಾಗಿತ್ತು.

ಘಟನೆಯ ಲೈವ್​ ವಿಡಿಯೋವನ್ನು ಅಲ್ಲಿನ ಸ್ಥಳೀಯ ಮಾಧ್ಯಮವೊಂದು ಬಿತ್ತರಿಸಿದೆ. ವಿಡಿಯೋದಲ್ಲಿ ವಿಮಾನ ರನ್​ವೇಗೆ ಅಪ್ಪಳಿಸಿ ಬಳಿಕ ವೇಗದಲ್ಲಿ ಚಲಿಸುತ್ತಿದ್ದು, ಈ ವೇಳೆ ಅದರಲ್ಲಿ ಹೊಗೆ ಕಾಣಿಸಿಕೊಂಡಿದೆ. ಬಳಿಕ ಕೊನೆಯಲ್ಲಿದ್ದ ಗೋಡೆಗೆ ಗುದ್ದಿ ಬೆಂಕಿ ಹೊತ್ತುಕೊಂಡು ಸುಟ್ಟು ಹೋಗಿರುವುದು ವಿಡಿಯೋದಲ್ಲಿ ಗಮನಿಸಬಹುದು.

ರಕ್ಷಣಾ ಕಾರ್ಯಾಚರಣೆಗೆ ಎಲ್ಲ ಸಂಪನ್ಮೂಲಗಳನ್ನು ಬಳಸಿಕೊಂಡು, ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ರಕ್ಷಿಸುವಂತೆ ದಕ್ಷಿಣ ಕೊರಿಯಾ ಉಪ ಪ್ರಧಾನಿ ಚೊಯ್ ಸ್ಯಾಂಗ್ ಮೊಕ್ ಅವರು ಅಧಿಕಾರಿಗಳಿಗೆ ಆದೇಶಿಸಿದ್ದರು.

ಕ್ಷಮೆಯಾಚಿಸಿದ ಜೆಜು ಏರ್:ವಿಮಾನ ಪತನದಿಂದ ಉಂಟಾಗಿರುವ ಪ್ರಾಣಹಾನಿಯ ಬಗ್ಗೆ ಕಳವಳ ವಕ್ತಪಡಿಸಿ ಜೆಜು ಏರ್ ಸಂಸ್ಥೆ ಕ್ಷಮೆಯಾಚಿಸಿದೆ. ಜೊತೆಗೆ ರಕ್ಷಣಾ ಕಾರ್ಯಚರಣೆ ಮತ್ತು ಅಪಘಾತ ಸಂಬಂಧ ಸಾಧ್ಯವಿರುವ ಎಲ್ಲ ಸಹಾಯವನ್ನು ಮಾಡುವುದಾಗಿ ತಿಳಿಸಿದೆ.

ಅಜರ್​ಬೈಜಾನ್​ ವಿಮಾನ ದುರಂತ:ಡಿಸೆಂಬರ್ 25 ರಂದು ಅಜರ್‌ಬೈಜಾನ್‌ನ ರಾಜಧಾನಿ ಬಾಕುದಿಂದ ರಷ್ಯಾದ ಗ್ರೋಜ್ನಿಗೆ ಹಾರುತ್ತಿದ್ದ ಅಜರ್‌ಬೈಜಾನ್ ಏರ್‌ಲೈನ್ಸ್ ಪ್ಯಾಸೆಂಜರ್ ವಿಮಾನ ಕಝಾಕಿಸ್ತಾನ್​ ವಾಯುಪ್ರದೇಶದಲ್ಲಿ ಇಳಿಯಲು ಪ್ರಯತ್ನಿಸುವಾಗ ಅಪಘಾತಕ್ಕೀಡಾಗಿತ್ತು. ಈ ದುರಂತದಲ್ಲಿ38 ಮಂದಿ ಬಲಿಯಾಗಿ ಪವಾಡಸದೃಶ್ಯವಾಗಿ 29 ಮಂದಿ ಬದುಕುಳಿದಿದ್ದರು.

ಇದನ್ನೂ ಓದಿ:ವಿಮಾನ ಪತನ ದುರಂತ: ಅಜರ್​​ಬೈಜಾನ್​ ಅಧ್ಯಕ್ಷರ ಬಳಿ ಕ್ಷಮೆ ಕೋರಿದ ರಷ್ಯಾ ಅಧ್ಯಕ್ಷ ಪುಟಿನ್

Last Updated : Dec 29, 2024, 1:42 PM IST

ABOUT THE AUTHOR

...view details