ETV Bharat / international

ಬ್ರಿಟನ್​ ರಾಜಾ ಚಾರ್ಲ್ಸ್​ 2025ರ ಗೌರವ ಪಟ್ಟಿ; 30 ಮಂದಿ ಭಾರತೀಯ ಮೂಲದವರಿಗೆ ಸ್ಥಾನ - KING CHARLES 2025

2025ರ ಗೌರವ ಪಟ್ಟಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿನ ಸುಮಾರು 1,200 ಮಂದಿಯ ಹೆಸರು ಪಟ್ಟಿಯಲ್ಲಿದೆ. ಕ್ರೀಡೆ, ಆರೋಗ್ಯ ಸೇವೆ, ಶೈಕ್ಷಣಿಕ ಮತ್ತು ಸ್ವಯಂ ಸೇವಕರಿಗೆ ಮಾನ್ಯತೆ ನೀಡಲಾಗಿದೆ.

indian-origin-unsung-heroes-on-king-charles-2025-new-year-honours-list
ಕಿಂಗ್​ ಚಾರ್ಲ್ಸ್​ (ಐಎಎನ್​ಎಸ್​)
author img

By PTI

Published : Dec 31, 2024, 5:12 PM IST

ಲಂಡನ್​: ಕಿಂಗ್​ ಚಾರ್ಲ್ಸ್​ 2025ರ ಹೊಸ ವರ್ಷದ ಗೌರವ ಪಟ್ಟಿಯಲ್ಲಿ ಈ ಬಾರಿ 30 ಭಾರತೀಯ ಮೂಲದ ಸಮುದಾಯ ನಾಯಕರು, ಪ್ರಚಾರಕರು ಮತ್ತು ವೈದ್ಯಕೀಯ ವೃತ್ತಿಪರರು ಸೇರಿದಂತೆ ಹಲವರು ಸೇರಿದ್ದಾರೆ.

ಶುಕ್ರವಾರ ಲಂಡನ್​ನಲ್ಲಿ ಈ ಗೌರವ ನಡೆಯಲಿದ್ದು, ಶ್ರೀಲಂಕಾ ಮತ್ತು ಭಾರತೀಯ ಪರಂಪರೆಯ ಸಂಸತ್​​​ನ ಕನ್ಸರ್ವೆಟಿವ್​ ಸದಸ್ಯರಾದ ರಾನಿಲ್​ ಮಲಕೊಲಮ್​​ ಮತ್ತು ಇತ್ತೀಚಿಗೆ ಇಂಗ್ಲೆಂಡ್​ ಫುಟ್ಬಾಲ್​ ತಂಡದ ಮ್ಯಾನೇಜರ್​ ಹುದ್ದೆಗೆ ರಾಜೀನಾಮೆ ನೀಡಿದ ಗರೆತ್​ ಸೌತ್​ಗೇಟ್​​ ಕೂಡ ಇದ್ದಾರೆ.

2025 ಗೌರವ ಪಟ್ಟಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿನ ಸುಮಾರು 1,200 ಮಂದಿಯ ಹೆಸರುಗಳು ಈ ಪಟ್ಟಿಯಲ್ಲಿವೆ. ಕ್ರೀಡೆ, ಆರೋಗ್ಯ ಸೇವೆ, ಶೈಕ್ಷಣಿಕ ಮತ್ತು ಸ್ವಯಂ ಸೇವಕರಿಗೆ ಮಾನ್ಯತೆ ನೀಡಲಾಗಿದೆ.

ಪ್ರತಿ ದಿನ ಸಾಮಾನ್ಯ ಜನರು ಹೊರ ಹೋಗಿ, ತಮ್ಮ ಸಮುದಾಯದವರಿಗೆ ಅದ್ಭುತ ಕೆಲಸವನ್ನು ಮಾಡುತ್ತಿದ್ದಾರೆ. ಅವರು ಯುಕೆಯನ್ನು ಪ್ರತಿನಿಧಿಸಿ ಉತ್ತಮ ಕೆಲಸ ಮಾಡುತ್ತಿದ್ದು, ಅವರ ಸೇವೆ ಮೌಲ್ಯಯುತವಾಗಿದೆ. ಹೊಸ ವರ್ಷದ ಗೌರವಾರ್ಥ ಪಟ್ಟಿಯು ಈ ಅದ್ಬುತ ಹೀರೋಗಳ ಆಚರಣೆಗಿಂತ ಮಿಗಿಲಾಗಿದೆ. ಅವರ ಅಮೋಘ ಕೊಡುಗೆಗೆ ನಾನು ಧನ್ಯವಾದ ತಿಳಿಸುತ್ತೇನೆ ಎಂದು ಯುಕೆ ಪ್ರಧಾನಿ ಕೀರ್​ ಸ್ಟಾರ್ಮರ್​ ಹೇಳಿದರು.

ಬ್ರಿಟಿಷ್​ ರಾಜನ ಹೆಸರಿನಲ್ಲಿ ಕ್ಯಾಬಿನೆಟ್​ ಕಚೇರಿಯಿಂದ ಈ ವಾರ್ಷಿಕ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು​. ಈ ಪಟ್ಟಿಯಲ್ಲಿರುವ ಭಾರತೀಯ ಮೂಲದವರೆಂದರೆ ಸಿಬಿಇಯ ಶಿಕ್ಷಣ ಸೇವೆಗಾಗಿ ಸತ್ವಂತ್​ ಕೌರ್​ ಡಿಯೋಲ್​, ಕಾನೂನು ಸೇವೆಯಲ್ಲಿ ಚಾರ್ಲ್ಸ್​​ ಪ್ರೀತಂ ಸಿಂಗ್​ ಧನೊವಾ, ಆರೋಗ್ಯ ಸೇವೆಯಲ್ಲಿ ಸರ್ಜನ್​ ಸ್ನೆಹ್​ ಖೆಮ್ಕಾ, ಗ್ರಾಹಕ ವಲಯದಲ್ಲಿ ಲೀನಾ ನಾಯರ್​, ತಂತ್ರಜ್ಞಾನದಲ್ಲಿ ಬ್ರಿಟಿಷ್​ ಕಂಪ್ಯೂಟಿಂಗ್​ ಸೊಸೈಟಿ ಅಧ್ಯಕ್ಷ ಮಯಾಂಕ್​ ಪ್ರಕಾಶ್​​, ಶಿಕ್ಷಣದಲ್ಲಿ ನ್ಯಾಷನಲ್​ ಡೇ ನರ್ಸರೀಸ್​ ಅಸೋಸಿಯೇಷನ್​ನ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಪೂರ್ಣಿಮಾ ಮೂರ್ತಿ ತನುಕು ಇದ್ದಾರೆ.

ಹೃದ್ರೋಗ ತಜ್ಞ ಸಂಜಯ್​ ಆರ್ಯಾ, ಆಕ್ಸ್​ಫರ್ಡ್​ ಯುನಿವರ್ಸಿಟಿಯ ನಂದಿನಿ ದಾಸ್​, ಚಿಲ್ಲರೆ ಮತ್ತು ಸೇವೆಯಲ್ಲಿ ತರ್ಸೆಲ್​ ಸಿಂಗ್​ ಧಲಿವಾಲ್​, ಸಂಗೀತದಲ್ಲಿ ಜಸ್ಮೈನ್ ದೊತಿವಾಲಾ ಸೇರಿದಂತೆ ಹಲವರು ಈ ಪಟ್ಟಿಯಲ್ಲಿದ್ದಾರೆ.

ಇದನ್ನೂ ಓದಿ: ಕಾರ್ಟರ್​​​​​​ಪುರಿಯಲ್ಲಿ ’ಕಾರ್ಟರ್‘​​ ನೆನಪು: ಈ ಗ್ರಾಮಕ್ಕೆ ಇದೇ ಹೆಸರು ಬರಲು ಕಾರಣವೇನು?, ಇಲ್ಲಿದೆ ಇಂಟ್ರೆಸ್ಟಿಂಗ್​ ಕಹಾನಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.