Health Benefits Of Lemon Water In The Morningನಿಂಬೆ ರಸವು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದು ನಮ್ಮ ರೋಗನಿರೋಧಕ ಶಕ್ತಿಯನ್ನು ವೃದ್ದಿಸುವುದಲ್ಲದೇ ಹಲವು ಪ್ರಯೋಜನಗಳನ್ನು ನೀಡುತ್ತದೆ. ಜೀರ್ಣಕ್ರಿಯೆ ಸರಿಯಾಗಿ ಆಗಲು ನಿಂಬೆ ರಸ ಭಾರಿ ಉಪಯುಕ್ತವಾದ ಔಷಧವಾಗಿದೆ. ಅದಕ್ಕಾಗಿಯೇ ಪೌಷ್ಟಿಕತಜ್ಞರು ನಿಂಬೆ ರಸವನ್ನು ದೈನಂದಿನ ದಿನಚರಿಯ ಭಾಗವಾಗಿ ಮಾಡಿಕೊಳ್ಳಲು ಸಲಹೆ ನೀಡುತ್ತಾರೆ. ಅದರಲ್ಲೂ ಬೆಳಗ್ಗೆ ನಿಂಬೆ ರಸ ಕುಡಿಯುವುದು ದೇಹಕ್ಕೆ ಹಾಗೂ ಹೊಟ್ಟೆಗೆ ಭಾರಿ ಒಳ್ಳೆಯದು.
ಪ್ರತಿರಕ್ಷಣಾ ವ್ಯವಸ್ಥೆ ಬಲಪಡಿಸುವಿಕೆಗೆ ಸಹಕಾರಿ: ನಿಂಬೆಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ವಿಟಮಿನ್ ಸಿ ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ನಿಯಮಿತವಾಗಿ ನಿಂಬೆ ರಸವನ್ನು ಕುಡಿಯುವುದು ಶೀತ ಮತ್ತು ಇತರ ಸೋಂಕುಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಇದು ವರ್ಷವಿಡೀ ನಮ್ಮನ್ನು ಆರೋಗ್ಯವಾಗಿರಿಸುತ್ತದೆ. ವಿಟಮಿನ್ ಸಿ ಶಕ್ತಿಯುತವಾದ ಉತ್ಕರ್ಷಣ ನಿರೋಧಕವಾಗಿದೆ. ಇದು ನಮ್ಮ ದೇಹದ ಜೀವಕೋಶಗಳಿಗೆ ಹಾನಿಯಾಗದಂತೆ ರಕ್ಷಿಸುತ್ತದೆ.
ಜೀರ್ಣಕ್ರಿಯೆಗೆ ಒಳ್ಳೆಯದು: ನಿಂಬೆ ರಸವು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿಡಲು ಸಹಕಾರಿ ಆಗಿದೆ. ಇದು ನಮ್ಮ ಹೊಟ್ಟೆಯಲ್ಲಿ ಆಮ್ಲದ ಉತ್ಪಾದನೆಗೆ ಸಹಾಯ ಮಾಡುತ್ತದೆ ಮತ್ತು ಪಿತ್ತರಸದ ಸ್ರವಿಸುವಿಕೆಯನ್ನು ಉತ್ತೇಜಿಸುತ್ತದೆ. ಪರಿಣಾಮವಾಗಿ, ಜೀರ್ಣಕ್ರಿಯೆಯು ಸರಿಯಾಗಿ ನಡೆಯುತ್ತದೆ. ಕರುಳಿನ ಚಲನೆ ಸುಧಾರಿಸುತ್ತದೆ. ಉಬ್ಬುವುದು ಮತ್ತು ಎದೆಯುರಿ ಮುಂತಾದ ಅಜೀರ್ಣದ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ.
ದೇಹವನ್ನ ಹೈಡ್ರೇಟ್ ಆಗಿರುವಂತೆ ನೋಡಿಕೊಳ್ಳುತ್ತದೆ:ನಮ್ಮ ದೇಹವು ಹೈಡ್ರೇಟ್ ಆಗಿದ್ದರೆ ಆರೋಗ್ಯವಾಗಿರಬಹುದು. ನಿಂಬೆ ರಸವನ್ನು ಕುಡಿಯುವುದರಿಂದ ದೇಹವು ತೇವಾಂಶದಿಂದ ಕೂಡಿರುತ್ತದೆ. ಚರ್ಮವೂ ತೇವಾಂಶದಿಂದ ಕೂಡಿರುವಂತೆ ನೋಡಿಕೊಳ್ಳುತ್ತದೆ . ಅಂದರೆ ನಿಂಬೆ ರಸ ಕೂಡ ನಮ್ಮ ಚರ್ಮದ ಸೌಂದರ್ಯವನ್ನು ಸುಧಾರಿಸುತ್ತದೆ.
ತೂಕ ನಷ್ಟಕ್ಕೆ ಸಹಕಾರಿ: ತೂಕ ಇಳಿಸಿಕೊಳ್ಳಲು ಬಯಸುವವರು ನಿಂಬೆ ರಸವನ್ನು ಕುಡಿಯಬೇಕು. ಮೊದಲಿಗೆ ಇದು ನಮ್ಮ ಚಯಾಪಚಯ ಕ್ರಿಯೆಯನ್ನು ನಿಯಂತ್ರಿಸುತ್ತದೆ. ನಿಂಬೆ ರಸವನ್ನು ಕುಡಿದ ಬಳಿಕ ಪ್ರತಿದಿನ ಸ್ವಲ್ಪ ಸಮಯ ಲಘು ವ್ಯಾಯಾಮಕ್ಕೆ ಮೀಸಲಿಡುವುದು ಉತ್ತಮ. ಹೀಗೆ ಮಾಡುವುದರಿಂದ ನಮ್ಮ ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳಬಹುದು.
ಚರ್ಮದ ಆರೋಗ್ಯ: ನಿಂಬೆ ರಸದಲ್ಲಿರುವ ವಿಟಮಿನ್ ಸಿ ನಮ್ಮ ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ. ಚರ್ಮದ ಮೇಲಿನ ಸುಕ್ಕುಗಳು ಮತ್ತು ಕಲೆಗಳು ಕಡಿಮೆಯಾಗುತ್ತವೆ. ನಿಂಬೆ ರಸ ಕುಡಿದರೆ ನಮ್ಮ ದೇಹದಿಂದ ವಿಷಕಾರಿ ಅಂಶಗಳು ಹೊರ ಹೋಗುತ್ತವೆ. ಅಂತಿಮವಾಗಿ ನಾವು ಹೊಳೆಯುವ ಚರ್ಮವನ್ನು ಪಡೆಯುತ್ತೇವೆ. ನಿಂಬೆ ರಸವನ್ನು ಕುಡಿಯುವುದರಿಂದ ಚರ್ಮವು ತೇವ ಮತ್ತು ಮೃದುವಾಗಿರುವಂತೆ ಮಾಡುತ್ತದೆ.