Hypochondriasis Disorder Symptoms: ಕೆಲವರಿಗೆ ಯಾವುದೇ ಕಾಯಿಲೆ ಇಲ್ಲದಿದ್ದರೂ ಕೂಡ ಅವರು ಯಾವುದೋ ಕಾಯಿಲೆಯಿಂದ ಬಳಲುತ್ತಿದ್ದೇವೆ ಎಂದು ಅಂದುಕೊಳ್ಳುತ್ತಾರೆ. ಅವರು ಆಸ್ಪತ್ರೆಗಳಿಗೆ ತೆರಳಿ ಹೋಗಿ ಎಲ್ಲ ರೀತಿಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳುತ್ತಾರೆ. ವರದಿಗಳು ಸಾಮಾನ್ಯವಾಗಿದ್ದರೂ ವೈದ್ಯರು ಅವರ ಅನಾರೋಗ್ಯವನ್ನು ಪತ್ತೆಹಚ್ಚಲು ಸಾಧ್ಯವಿಲ್ಲ ಎಂದು ತಾವೇ ಭಾವಿಸುತ್ತಾರೆ. ಇದರಿಂದಾಗಿ ಅವರು ಪದೇ ಪದೇ ಆಸ್ಪತ್ರೆಗಳು ಹಾಗೂ ವೈದ್ಯರನ್ನು ಬದಲಾಯಿಸುತ್ತಾರೆ. ಈ ರೀತಿ ಏಕೆ ಆಗುತ್ತದೆ? ಇದಕ್ಕೆ ಪ್ರಮುಖ ಕಾರಣಗಳೇನು ಎಂಬುದನ್ನು ತಿಳಿದುಕೊಳ್ಳೋಣ.
ಸಂಶೋಧನೆ ಹೀಗೆ ತಿಳಿಸುತ್ತೆ: ನಮ್ಮಲ್ಲಿ ಹಿಂದಿನದಕ್ಕೆ ಹೋಲಿಸಿದರೆ ನಮ್ಮ ಸಮಾಜದಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ತುಂಬಾ ಹೆಚ್ಚಾಗಿದೆ. ಟಿವಿ ಹಾಗೂ ನಿಯತಕಾಲಿಕೆಗಳಲ್ಲಿ ಆರೋಗ್ಯ ಲೇಖನಗಳನ್ನು ಓದುವುದು ಮಾತ್ರವಲ್ಲದೇ, ಅವುಗಳನ್ನು ಉಳಿಸುವವರೂ ಅನೇಕರು ಇದ್ದಾರೆ. ಈ ಹಿನ್ನೆಲೆಯಲ್ಲಿಯೇ ಅವರು ಓದುವ ಪ್ರತಿಯೊಂದು ಅನುಮಾನಾಸ್ಪದ ಗುಣಲಕ್ಷಣಗಳನ್ನು ತಮ್ಮ ಮೇಲೆ ಆಗುತ್ತವೆಯೇ ಎಂಬ ಬಗ್ಗೆ ಅವರಿಗೆ ಅನುಮಾನವಿರುತ್ತದೆ.
ಪರಿಣಾಮವಾಗಿ ಜನರು ಯಾವುದೇ ರೀತಿಯ ಕಾಯಿಲೆ ಇಲ್ಲದಿದ್ದರೂ ಸಹ ಯಾವುದೋ ರೀತಿಯ ಕಾಯಿಲೆ ಇರುವ ಕುರಿತು ಯೋಚಿಸುತ್ತಾರೆ. ಈ ರೀತಿಯ ಮಾನಸಿಕ ಸ್ಥಿತಿಯನ್ನು ಹೈಪೋಕಾಂಡ್ರಿಯಾ ಎಂದು ತಿಳಿಸುಲಾಗುತ್ತದೆ ಎನ್ನುತ್ತಾರೆ ತಜ್ಞರು. 2018ರಲ್ಲಿ ಜರ್ನಲ್ ಆಫ್ ಕ್ಲಿನಿಕಲ್ ಸೈಕಾಲಜಿಯಲ್ಲಿ ಪ್ರಕಟವಾದ (Journal of Clinical Psychology) 'ಹೈಪೋಕಾಂಡ್ರಿಯಾಸಿಸ್: ಎ ರಿವ್ಯೂ ಆಫ್ ದಿ ಲಿಟರೇಚರ್' (Hypochondriasis: A Review of the Literature) ಎಂಬ ಅಧ್ಯಯನ ತಿಳಿಸುತ್ತದೆ (ಸಂಶೋಧನಾ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ).
ಖಿನ್ನತೆಗೆ ಒಳಗಾಗುತ್ತಾರೆ: ಕುಟುಂಬದಲ್ಲಿ ಯಾರಾದರೂ ಕ್ಯಾನ್ಸರ್‌ನಂತಹ ಅಪಾಯಕಾರಿ ಕಾಯಿಲೆಯಿಂದ ಸತ್ತಾಗ, ತಮಗೂ ಅದೇ ಕಾಯಿಲೆಗಳು ಬರುತ್ತವೆ ಎಂದು ಅವರು ಭಯಪಡುತ್ತಾರೆ. ಅವರು ತಮ್ಮ ದೇಹದಲ್ಲಿ ಕಾಣುವ ಪ್ರತಿಯೊಂದು ಸಣ್ಣ ದೋಷದ ಬಗ್ಗೆಯೂ ಹೆಚ್ಚು ಚಿಂತಿಸುತ್ತಾರೆ. ಅವರು ತಜ್ಞ ವೈದ್ಯರನ್ನು ಭೇಟಿ ಮಾಡಲು ಹೋಗುತ್ತಾರೆ. ಈ ಅನುಮಾನಗಳನ್ನು ನಿವಾರಿಸಲು ದುಬಾರಿ ಪರೀಕ್ಷೆಗಳಿಗೆ ಕೂಡ ಒಳಗಾಗುತ್ತಾರೆ. ಅವರು ಖಿನ್ನತೆಗೆ ಒಳಗಾಗುತ್ತಾರೆ ಹಾಗೂ ತಮ್ಮನ್ನು ಮಾತ್ರವಲ್ಲದೇ ತಮ್ಮ ಕುಟುಂಬ ಸದಸ್ಯರಿಗೂ ನೋವುಂಟು ಮಾಡುತ್ತಾರೆ.
ತಜ್ಞರು ಹೇಳೋದೇನು?: ತಜ್ಞರು ತಿಳಿಸುವ ಪ್ರಕಾರ, ನಿಜವಾಗಿಯೂ ಕಾಯಿಲೆಗಳಿಲ್ಲದಿದ್ದರೂ ಅವರು ತಮಗೆ ಇವೆ ಎಂದು ದೃಢವಾಗಿ ನಂಬುವ ಮನಸ್ಥಿತಿಯಿಂದಾಗಿ ಇತರ ಸಮಸ್ಯೆಗಳು ಉದ್ಭವಿಸುತ್ತವೆ. ಈ ಕಾಯಿಲೆಯ ಬಗ್ಗೆ ಭಯದಿಂದ ರಕ್ತದೊತ್ತಡ ಹೆಚ್ಚಾಗುತ್ತದೆ. ಕೆಲವು ಜನರು ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯನ್ನು ನೋಡಿದಾಗ ಅವರ ರಕ್ತದೊತ್ತಡ ಬೇಗನೆ ಏರುತ್ತದೆ. ಅವರು ಆಗಾಗ್ಗೆ ತೀವ್ರ ಒತ್ತಡದಿಂದಾಗಿ ಖಿನ್ನತೆಗೆ ಒಳಗಾಗುತ್ತಾರೆ. ವೈದ್ಯರು ಕೂಡ ಅವರಿಗೆ ಎಂತಹ ಯಾವರೀತಿಯ ಕಾಯಿಲೆ ಇದೆ ಎಂದು ಚಿಂತಿತರಾಗುತ್ತಾರೆ.
ಎಕ್ಸ್‌ಪೋಸರ್ ಥೆರಪಿ: ಓರ್ವ ವ್ಯಕ್ತಿಯಲ್ಲಿ ಅಂತಹ ಲಕ್ಷಣಗಳು ಕಂಡು ಬಂದರೆ, ವಿಳಂಬ ಮಾಡದೇ ತಕ್ಷಣವೇ ಮನೋವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ. ಮಾನಸಿಕ ಅಸ್ವಸ್ಥತೆಗೆ ಪರಿಣಾಮಕಾರಿ ಚಿಕಿತ್ಸೆಗಳು ಲಭ್ಯವಿದೆ. ಇದು ಒಂದು ಕಾಯಿಲೆ ಅಸ್ತಿತ್ವದಲ್ಲಿಲ್ಲದಿದ್ದರೂ ಸಹ ಅಸ್ತಿತ್ವದಲ್ಲಿದೆ ಎಂಬುದು ಭ್ರಮೆಯಾಗಿದೆ. ರೋಗಿಗಳಿಗೆ ಆತಂಕ ಕಡಿಮೆ ಮಾಡಲು ಸಮಾಲೋಚನೆ ಹಾಗೂ ಔಷಧಗಳನ್ನು ನೀಡಲಾಗುವುದು. ಈ ರೋಗವನ್ನು ಹೆಚ್ಚಿನ ಔಷಧಗಳಿಂದ ನಿಯಂತ್ರಿಸಬಹುದು. ಔಷಧಗಳ ಜೊತೆಗೆ, ಕೆಲವು ಜನರಿಗೆ ಎಕ್ಸ್‌ಪೋಸರ್ ಥೆರಪಿ ಕೂಡ ನೀಡಲಾಗುವುದು. ಇದರ ಭಾಗಿವಾಗಿ ರೋಗಿಯು ಶಂಕಿಸುವ ಕಾಯಿಲೆಯಿಂದ ನಿಜವಾಗಿಯೂ ಬಳಲುತ್ತಿರುವ ಬಗ್ಗೆ ಮನವರಿಕೆ ಮಾಡಿಕೊಳ್ಳಲಾಗುತ್ತದೆ. ಆ ಲಕ್ಷಣಗಳನ್ನು ಗಮನಿಸಿದ ಬಳಿಕ ತಮಗೆ ಆ ಕಾಯಿಲೆ ಇಲ್ಲ ಹಾಗೂ ಅಸ್ವಸ್ಥತೆ ಕಡಿಮೆಯಾಗುತ್ತದೆ ಎಂಬ ವಿಶ್ವಾಸ ಅವರಲ್ಲಿ ಬರುತ್ತದೆ ಎಂದು ತಿಳಿಸುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ಗಳನ್ನು ವೀಕ್ಷಿಸಬಹುದು:
ಓದುಗರಿಗೆ ಪ್ರಮುಖ ಸೂಚನೆ: ಈ ಲೇಖನದಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ, ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತ ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಉತ್ತಮ.