ಡಿವೈನ್ ಸ್ಟಾರ್ ಖ್ಯಾತಿಯ ರಿಷಬ್ ಶೆಟ್ಟಿ ಓರ್ವ ಜನಪ್ರಿಯ ನಟ, ನಿರ್ದೇಶಕ, ನಿರ್ಮಾಪಕ ಮಾತ್ರವಲ್ಲ ಪಕ್ಕಾ ಫ್ಯಾಮಿಲಿ ಮ್ಯಾನ್ ಕೂಡಾ ಹೌದು. ಸದಾ ಸಿನಿಮಾ ಜಪ ಮಾಡುವ ಕಿರಿಕ್ ಪಾರ್ಟಿ ನಿರ್ದೇಶಕರು ತಮ್ಮ ಕುಟುಂಬಕ್ಕೂ ಸಮಯ ಮೀಸಲಿಡುತ್ತಾರೆ. ಪ್ರೀತಿಯ ಪತ್ನಿ ಪ್ರಗತಿ, ಮುದ್ದಿನ ಮಕ್ಕಳಾದ ರಾಧ್ಯ ಹಾಗೂ ರನ್ವಿತ್ ಮೇಲಿನ ಪ್ರೀತಿಯನ್ನು ಆಗಾಗ್ಗೆ ವ್ಯಕ್ತಪಡಿಸುತ್ತಿರುತ್ತಾರೆ. ಇದೀಗ ಶೇರ್ ಮಾಡಿರುವ ಸ್ಪೆಷಲ್ ವಿಡಿಯೋ ಅವರ ಅಭಿಮಾನಿಗಳ ಗಮನ ಸೆಳೆದಿದೆ.
'ಎಂಥಾ ಚೆಂದಾನೆ ಇವಳು'..... ರಿಷಬ್ ಶೆಟ್ಟಿ ನಿರ್ಮಾಣದ ಮುಂದಿನ ಬಹುನಿರೀಕ್ಷಿತ ಚಿತ್ರ ಲಾಫಿಂಗ್ ಬುದ್ಧ. ಮನರಂಜನೆಯ ಮಹಾಪೂರವೇ ಇರುವ ಈ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಹಿನ್ನೆಲೆ ಚಿತ್ರದ ಪ್ರಚಾರ ಜೋರಾಗೇ ನಡೆಯುತ್ತಿದೆ. ಇತ್ತೀಚೆಗಷ್ಟೇ 'ಎಂಥಾ ಚೆಂದಾನೆ ಇವಳು' ಶೀರ್ಷಿಕೆಯ ಹಾಡು ಅನಾವರಣಗೊಂಡಿತ್ತು. ಇದೀಗ ಈ ಹಾಡಿನ ಪ್ರಮೋಶನ್ನಲ್ಲಿ ನಿರ್ಮಾಪಕರು ಬ್ಯಸಿಯಾಗಿದ್ದಾರೆ.
ಡಿವೈನ್ ಸ್ಟಾರ್ ಇನ್ಸ್ಟಾಗ್ರಾಮ್ ಪೋಸ್ಟ್:ಹೌದು, ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಮಗಳು ರಾಧ್ಯಾ ಅವಳನ್ನೊಳಗೊಂಡ ಸುಂದರ ವಿಡಿಯೋ ಹಂಚಿಕೊಳ್ಳಲಾಗಿದೆ. ಹಿನ್ನೆಲೆಯಲ್ಲಿ, ಇತ್ತೀಚೆಗಷ್ಟೇ ಅನಾವರಣಗೊಂಡಿರುವ 'ಎಂಥಾ ಚೆಂದಾನೆ ಇವಳು' ಹಾಡು ಕೇಳಿಬರುತ್ತಿದೆ. ಮುದ್ದು ರಾಧ್ಯಾಳ ಮುದ್ದಾದ ಕ್ಷಣಗಳನ್ನು ಈ ವಿಡಿಯೋ ಒಳಗೊಂಡಿದೆ. ಬ್ಯೂಟಿಫುಲ್ ವಿಡಿಯೋ ಶೇರ್ ಮಾಡಿದ ಡಿವೈನ್ ಸ್ಟಾರ್, ''ಎಂಥಾ ಚೆಂದನೇ ಇವಳು, ಸಾವಿರ ಹಬ್ಬಗಳ ಮಗಳು'' ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಇದನ್ನೂ ಓದಿ:'ನಿಮ್ಮ ಮನೆಮನಗಳಿಗೆ ಬರುತ್ತಿರುವ ಅಣ್ಣಯ್ಯನಿಗೆ ಶುಭವಾಗಲಿ': ಪ್ರಮೋದ್ ನಿರ್ಮಾಣದ ಧಾರವಾಹಿಗೆ ರಿಷಬ್ ಶೆಟ್ಟಿ ಸಾಥ್ - Annayya Serial
ಟ್ರೇಲರ್ ಬಿಡುಗಡೆಗೆ ಮುಹೂರ್ತ ಫಿಕ್ಸ್:ಇದೇ ಆಗಸ್ಟ್ 7ರಂದು 'ಲಾಫಿಂಗ್ ಬುದ್ಧ' ಚಿತ್ರದ ಮೊದಲ ಗೀತೆ ಅನಾವರನಗೊಂಡಿತ್ತು. ಆಗಸ್ಟ್ 30ರಂದು ಸಿನಿಮಾ ಬಿಡುಗಡೆ ಆಗಲಿದೆ. ಬಹುನಿರೀಕ್ಷಿತ ಟ್ರೇಲರ್ ಅನಾವರಣಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಕಳೆದ ದಿನವಷ್ಟೇ ಪೋಸ್ಟರ್ ಹಂಚಿಕೊಂಡ ನಿರ್ಮಾಪಕರು, 'ಲಾಫಿಂಗ್ ಬುದ್ಧ 14ರ ಮಿಡ್ನೈಟ್ ಡ್ಯೂಟಿಗೆ ಬರಲಿದ್ದಾನೆ' ಎಂದು ತಿಳಿಸಿದ್ದರು.
ಇದನ್ನೂ ಓದಿ:'ಲಾಫಿಂಗ್ ಬುದ್ಧ' ಟ್ರೇಲರ್ ರಿಲೀಸ್ಗೆ ದಿನ ನಿಗದಿ: ರಿಷಬ್ ನಿರ್ಮಾಣದ ಚಿತ್ರದಲ್ಲಿ ಮೋಡಿ ಮಾಡಲು ರೆಡಿಯಾದ ಪ್ರಮೋದ್ - Laughing Buddha Trailer
ಭರತ್ ರಾಜ್ ಆ್ಯಕ್ಷನ್ ಕಟ್ ಹೇಳಿರುವ ಈ ಸಿನಿಮಾ ಪೊಲೀಸರ ಕುಟುಂಬದ ಸುತ್ತ ಸಾಗುತ್ತದೆ. ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಾ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಬೇಡಿಕೆ ಹೊಂದಿರುವ ನಟ ಪ್ರಮೋದ್ ಶೆಟ್ಟಿ ಅವರು ಯಕ ನಟನಾಗಿ ಕಾಣಿಸಿಕೊಳ್ಳುತ್ತಿರುವ ಮೊದಲ ಚಿತ್ರವಿದು. ಪ್ರಮೋದ್ ಶೆಟ್ಟಿ ಗೋವರ್ಧನ ಎಂಬ ಪೊಲೀಸ್ ಕಾನ್ಸ್ಟೇಬಲ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ತೇಜು ಬೆಳವಾಡಿ ಸತ್ಯವತಿ ಪಾತ್ರ ನಿರ್ವಹಿಸಿದ್ದಾರೆ. ದಿಗಂತ್ ಮಂಚಾಲೆ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಭದ್ರಾವತಿ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದ್ದು, ಕೆ.ಎಸ್.ಚಂದ್ರಶೇಖರ್ ಛಾಯಾಗ್ರಹಣ ನಿರ್ವಹಿಸಿದ್ದಾರೆ. ಕೆ.ಎಂ.ಪ್ರಕಾಶ್ ಅವರು ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ಆಗಸ್ಟ್ 30ರಂದು ಸಿನಿಮಾ ಬಿಡುಗಡೆ ಆಗಲಿದೆ. ನಾಳೆ ಟ್ರೇಲರ್ ರಿವೀಲ್ ಆಗಲಿದ್ದು, ಪ್ರೇಕ್ಷಕರು ಕಾತರರಾಗಿದ್ದಾರೆ.