ಕರ್ನಾಟಕ

karnataka

ETV Bharat / entertainment

ವಿಜಯ್​ ರಾಘವೇಂದ್ರ 'ಗ್ರೇ ಗೇಮ್ಸ್'ಗೆ ಅಶ್ವಿನಿ ಪುನೀತ್ ರಾಜ್​​​ಕುಮಾರ್, ಶ್ರೀಮುರಳಿ ಸಾಥ್: ಟ್ರೇಲರ್ ರಿಲೀಸ್​ - Grey Games Trailer - GREY GAMES TRAILER

ಚಿನ್ನಾರಿ ಮುತ್ತ ವಿಜಯ್​ ರಾಘವೇಂದ್ರ ನಟನೆಯ 'ಗ್ರೇ ಗೇಮ್ಸ್' ಸಿನಿಮಾದ ಅಧಿಕೃತ ಟ್ರೇಲರ್ ಅನಾವರಣಗೊಂಡಿದೆ.

Grey Games Team
'ಗ್ರೇ ಗೇಮ್ಸ್' ಚಿತ್ರತಂಡ (ETV Bharat)

By ETV Bharat Karnataka Team

Published : May 4, 2024, 7:09 PM IST

ಕನ್ನಡ ಚಿತ್ರರಂಗದಲ್ಲಿ ಚಿನ್ನಾರಿ ಮುತ್ತನಾಗಿ ಸಿನಿಪ್ರೇಮಿಗಳ ಹೃದಯ ಗೆದ್ದಿರುವ ನಟ ವಿಜಯ್​ ರಾಘವೇಂದ್ರ. ಸದ್ಯ ರಿಯಾಲಿಟಿ ಶೋಗಳ ಜೊತೆ ಜೊತೆಗೆ ಕಂಟೆಂಟ್ ಆಧಾರಿತ ಸಿನಿಮಾಗಳನ್ನೂ ಮಾಡುತ್ತಿದ್ದಾರೆ. ಎಂದಿನಂತೆ ಇದೀಗ ಮತ್ತೊಂದು ವಿಭಿನ್ನ ಕಥೆಯ ಚಿತ್ರದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಆಯನ ಚಿತ್ರ ಖ್ಯಾತಿಯ ಗಂಗಾಧರ್ ಸಾಲಿಮಠ ನಿರ್ದೇಶನದ 'ಗ್ರೇ ಗೇಮ್ಸ್' ಸಿನಿಮಾ ರಿಲೀಸ್​ಗೆ ರೆಡಿಯಾಗಿದ್ದು, ಟ್ರೇಲರ್.

ಗ್ರೇ ಗೇಮ್ಸ್ ಅಧಿಕೃತ ಟ್ರೇಲರ್​ ಅನ್ನು ಎಸ್.ಎ ಚಿನ್ನೇಗೌಡ, ಅಶ್ವಿನಿ ಪುನೀತ್ ರಾಜ್​​ಕುಮಾರ್, ಶ್ರೀಮುರಳಿ ಬಿಡುಗಡೆ ಮಾಡುವ ಮೂಲಕ ಚಿತ್ರಕ್ಕೆ ಸಾಥ್ ನೀಡಿದರು. ವಿಜಯ್​​ ರಾಘವೇಂದ್ರ, ಶ್ರೀಮುರಳಿ ಸೋದರಳಿಯ, ಅಕ್ಕನ ಮಗ ಜೈ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರೋದು ಮತ್ತೊಂದು ವಿಶೇಷ.

'ಗ್ರೇ ಗೇಮ್ಸ್' ಟ್ರೇಲರ್ ರಿಲೀಸ್​ ಈವೆಂಟ್​​ (ETV Bharat)

ನಟ ಶ್ರೀಮುರಳಿ ಮಾತನಾಡಿ, ಚಿತ್ರದ ಟ್ರೇಲರ್ ತುಂಬಾ ಚೆನ್ನಾಗಿದೆ. ಅಣ್ಣ ರಾಘು ತುಂಬಾ ಸ್ಮಾರ್ಟ್ ಆಗಿ ಕಾಣುತ್ತಿದ್ದಾನೆ‌. ನಾವು ಆಡಿ ಬೆಳೆಸಿದ ಅಕ್ಕನ ಮಗ ಜೈ ಕೂಡ ಈ ಚಿತ್ರದಲ್ಲಿ ನಟಿಸಿರುವುದು ಖುಷಿಯಾಗಿದೆ. ಚಿತ್ರ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ನಂತರ ವಿಜಯ್​ ರಾಘವೇಂದ್ರ ಮಾತನಾಡಿ, ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ಟ್ರೇಲರ್ ಅನ್ನು ನಾನು ಕೂಡಾ ಇಂದೇ ನೋಡಿದ್ದು. ಬಹಳ ಚೆನ್ನಾಗಿದೆ. ಈ ಸಮಯದಲ್ಲಿ ನಾನು ಪುನೀತ್ ರಾಜ್​​ಕುಮಾರ್ ಹಾಗೂ ನನ್ನ ಪತ್ನಿ ಸ್ಪಂದನ ಅವರನ್ನು ಸ್ಮರಿಸಿಕೊಳ್ಳುತ್ತೇನೆ. ನನ್ನ ಅಕ್ಕನ ಮಗ ಜೈ ಅಂದ್ರೆ ಸ್ಪಂದನಗೆ ಬಹಳ ಪ್ರೀತಿ ಇತ್ತು‌.‌ ಇಂದು ಸ್ಪಂದನ ಇದಿದ್ದರೆ ಬಹಳ ಖುಷಿ ಪಡುತ್ತಿದ್ದರು. ಮೇ 10ರಂದು ತೆರೆಗೆ ಬರುತ್ತಿರುವ ನಮ್ಮ ಚಿತ್ರವನ್ನು ನೀವೆಲ್ಲಾ ನೋಡಿ, ಪ್ರೋತ್ಸಾಹಿಸಿ ಎಂದು ಕೇಳಿಕೊಂಡರು.

'ಗ್ರೇ ಗೇಮ್ಸ್' ಚಿತ್ರತಂಡ (ETV Bharat)

ಇದನ್ನೂ ಓದಿ:ಯಶ್​​​ ನಟನೆಯ 'ಟಾಕ್ಸಿಕ್​​'ನ ಕರೀನಾ ಕಪೂರ್ ಪಾತ್ರಕ್ಕೆ ನಯನತಾರ - Yash Toxic

ಇದೊಂದು ಮೈಂಡ್ ಗೇಮ್ ಕುರಿತಾದ ಚಿತ್ರ ಎಂದು ಮಾತು ಆರಂಭಿಸಿದ ನಿರ್ದೇಶಕ ಗಂಗಾಧರ್ ಸಾಲಿಮಠ, ಕನ್ನಡದಲ್ಲಿ ಇದು ಅಪರೂಪ ಕಥೆ ಎನ್ನಬಹುದು. ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡು ಮೆಚ್ಚುಗೆ ಪಡೆದುಕೊಂಡಿದೆ. ಈ ಚಿತ್ರ ಉತ್ತಮವಾಗಿ ಬರುವಲ್ಲಿ ಎಲ್ಲಾ ಕಲಾವಿದರ ಹಾಗೂ ತಂತ್ರಜ್ಞರ ಶ್ರಮವಿದೆ ಎಂದು ತಿಳಿಸಿದರು.

ಇದನ್ನೂ ಓದಿ:ತ್ರಿಶಾ ಬರ್ತ್​ಡೇ: ಮಕ್ಕಳಿಗೆ ಆಹಾರ ಹಂಚಿದ ಅಭಿಮಾನಿಗಳು - ವಿಡಿಯೋ ನೋಡಿ - Trisha Krishnan

ವಿಜಯ್ ರಾಘವೇಂದ್ರ ಜೊತೆ ಶೃತಿ ಪ್ರಕಾಶ್, ಭಾವನ ರಾವ್, ಇಶಿತಾ, ರವಿ ಭಟ್, ಅಪರ್ಣ ವಸ್ತಾರೆ, ರವಿ ಭಟ್, ಜೈ ಸೇರಿದಂತೆ ಮುಂತಾದವರು ತಾರಾಬಳಗದಲ್ಲಿದ್ದಾರೆ. ಆನಂದ್ ಆಡಿಯೋ ಯೂ ಟ್ಯೂಬ್​ನಲ್ಲಿ ಬಿಡುಗಡೆ ಆಗಿರುವ ಗ್ರೇ ಗ್ರೇಮ್ಸ್ ಚಿತ್ರವನ್ನು ಆನಂದ್ ಮುಗದ್ ನಿರ್ಮಾಣ ಮಾಡಿದ್ದಾರೆ. ಸದ್ಯ ಟ್ರೈಲರ್​​ನಿಂದ ಕುತೂಹಲ ಹುಟ್ಟಿಸಿರೋ ಈ ಚಿತ್ರ ಮೇ 10ರಂದು ರಾಜ್ಯಾದ್ಯಾಂತೆ ತೆರೆ ಕಾಣಲಿದೆ.

ABOUT THE AUTHOR

...view details