2025ರಲ್ಲಿ ಅದ್ಧೂರಿಯಾಗಿ ತೆರೆಕಾಣಲು ಹಲವು ಹೈ-ಪ್ರೊಫೈಲ್ ಪ್ರಾಜೆಕ್ಟ್ಗಳು ಸಾಲುಗಟ್ಟಿ ನಿಂತಿವೆ. ಇದೀಗ ಇಂಟರ್ನೆಟ್ ಮೂವಿ ಡಾಟಾಬೇಸ್ (IMDb) ಈ ವರ್ಷ ಪ್ರೀಮಿಯರ್ ಆಗುವ 20 ಬಹುನಿರೀಕ್ಷಿತ ಚಿತ್ರಗಳ ಪಟ್ಟಿಯನ್ನು ಅನಾವರಣಗೊಳಿಸಿದೆ. ಈ ಲಿಸ್ಟ್ ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂನಂತಹ ವಿವಿಧ ಭಾಷೆಯ ಸೂಪರ್ ಸ್ಟಾರ್‌ಗಳ ಸಿನಿಮಾಗಳನ್ನು ಒಳಗೊಂಡಿದೆ. ಬಹುಬೇಡಿಕೆ ತಾರೆಯ ಸಿನಿಮಾ, ಬಿಗ್ ಬಜೆಟ್ ಹೈ ಆ್ಯಕ್ಷನ್ ಎಂಟರ್‌ಟೈನರ್‌ಗಳಿಂದ ರೊಮ್ಯಾಂಟಿಕ್ ಸಿನಿಮಾಗಳವರೆಗೆ... ಸಿನಿಪ್ರಿಯರು ಈ ಕೆಳಗೆ ತಿಳಿಸಲಾಗಿರುವ ಸಿನಿಮಾಗಳ ಬಿಡುಗಡೆಗಾಗಿ ಎದುರು ನೋಡುತ್ತಿದ್ದಾರೆ.
ಯಶ್ ಮುಖ್ಯಭೂಮಿಕೆಯ ಟಾಕ್ಸಿಕ್, ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಸಾರಥ್ಯದ ಕಾಂತಾರ ಚಾಪ್ಟರ್ 1, ಹೃತಿಕ್ ರೋಷನ್ ಮತ್ತು ಜೂನಿಯರ್ ಎನ್‌ಟಿಆರ್ ತೆರೆ ಹಂಚಿಕೊಂಡಿರುವ ವಾರ್ 2, ರಜನಿಕಾಂತ್ ಅಭಿನಯದ ಕೂಲಿ, ಸಲ್ಮಾನ್ ಖಾನ್ ಅಭಿನಯದ ಸಿಕಂದರ್, ಅಕ್ಷಯ್ ಕುಮಾರ್ ನಟನೆಯ ಹೌಸ್‌ಫುಲ್ 5, ಪ್ರಭಾಸ್ ಅವರ ದಿ ರಾಜಾ ಸಾಬ್ ಸೇರಿದಂತೆ ಹಲವು ಚಲನಚಿತ್ರಗಳು ಇಂದು ಬಿಡುಗಡೆ ಆಗಲಿದ್ದು, ಇಂಟರ್ನೆಟ್ ಮೂವಿ ಡಾಟಾಬೇಸ್ (IMDb)ನ ಪಟ್ಟಿಯಲ್ಲಿ ಯಾವ ಸಿನಿಮಾ ಅಗ್ರಸ್ಥಾನದಲ್ಲಿದೆ ಎಂಬುದನ್ನು ನೋಡೋಣ ಬನ್ನಿ..
- ಸಿಕಂದರ್
- ಟಾಕ್ಸಿಕ್
- ಕೂಲಿ
- ಹೌಸ್‌ಫುಲ್ 5
- ಬಾಘಿ 4
- ದಿ ರಾಜಾ ಸಾಬ್
- ವಾರ್ 2
- ಎಂಪುರಾನ್
- ದೇವ
- ಛಾವಾ
- ಕಣ್ಣಪ್ಪ
- ರೆಟ್ರೋ
- ಥಗ್ ಲೈಫ್
- ಜಾತ್
- ಸ್ಕೈ ಫೋರ್ಸ್
- ಸಿತಾರೆ ಝಮೀನ್ ಪರ್
- ಥಮಾ
- ಕಾಂತಾರ ಎ ಲೆಜೆಂಡ್: ಚಾಪ್ಟರ್ 1
- ಆಲ್ಫಾ
- ಥಂಡೆಲ್..
ಸಿಕಂದರ್: ಐಎಂಡಿಬಿಯ ರ‍್ಯಾಂಕಿಂಗ್ಸ್ ಪ್ರಕಾರ, ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮತ್ತು ಕನ್ನಡತಿ ರಶ್ಮಿಕಾ ಮಂದಣ್ಣ ಅಭಿನಯದ ಸಿಕಂದರ್ ಅಗ್ರಸ್ಥಾನದಲ್ಲಿದೆ. ಅಂದಾಜು 400 ಕೋಟಿ ರೂಪಾಯಿಗಳ ಬಜೆಟ್‌ನಲ್ಲಿ ನಿರ್ಮಿಸಲಾದ ಈ ಚಿತ್ರಕ್ಕೆ ಎಆರ್ ಮುರುಗದಾಸ್ ಅವರ ನಿರ್ದೇಶನವಿದೆ. ಇದು ಬಾಲಿವುಡ್‌ನಲ್ಲಿ ಆ್ಯಕ್ಷನ್ ಜಾನರ್ನನ್ನು ಮರುಪರಿಚಯಿಸಲು ಸಜ್ಜಾಗಿದೆ. ಅಲ್ಲದೇ 2008ರಲ್ಲಿ ಅಮೀರ್ ಖಾನ್ ಮತ್ತು ಆಸಿನ್ ನಾಯಕರಾಗಿ ನಟಿಸಿದ್ದ ಗಜಿನಿ ಚಿತ್ರದ ನಂತರ ಅಂದರೆ 17 ವರ್ಷಗಳ ಬಳಿಕ ಎಆರ್ ಮುರುಗದಾಸ್ ಬಾಲಿವುಡ್‌ಗೆ ಮರಳುತ್ತಿದ್ದಾರೆ. ಈಗಾಗಲೇ ಸಾಕಷ್ಟು ಸದ್ದು ಮಾಡಿರೋ ಸಿನಿಮಾ ಮಾರ್ಚ್ ಕೊನೆಗೆ ತೆರೆಕಾಣಲಿದೆ.
ಟಾಕ್ಸಿಕ್: ಕೆಜಿಎಫ್ ಮೂಲಕ ಅಭೂತಪೂರ್ವ ಯಶಸ್ಸು ಗಳಿಸಿದ ಕನ್ನಡ ಚಿತ್ರರಂಗದ ಬಹುಬೇಡಿಕೆ ನಟ ಯಶ್ ಅವರ ಮುಂದಿನ ಬಹುನಿರೀಕ್ಷಿತ ಚಿತ್ರ ಟಾಕ್ಸಿಕ್ ಈ ಲಿಸ್ಟ್ನಲ್ಲಿ 2ನೇ ಸ್ಥಾನವನ್ನು ಗಳಿಸಿದೆ. ಇದೊಂದು ಹೈ ಆ್ಯಕ್ಷನ್ ಡ್ರಾಮಾ ಎಂದು ಈಗಾಗಲೇ ಅನಾವರಣಗೊಂಡಿರುವ ಗ್ಲಿಂಪ್ಸ್ ತಿಳಿಸಿದೆ. ಯಶ್ ಅವರ ಹಿಂದಿನ ಅಭಿನಯಕ್ಕೆ ಸವಾಲೆಸೆಯುವ ಭರವಸೆಯ ಚಿತ್ರವಾಗಿ ಟಾಕ್ಸಿಕ್ ಮೂಡಿ ಬರುತ್ತಿದ್ದು, ಅದ್ಭುತ ಸಿನಿಮೀಯ ಅನುಭವಕ್ಕಾಗಿ ಅಪಾರ ಸಂಖ್ಯೆಯ ಅಭಿಮಾನಿಗಳು ಕಾತರರಾಗಿದ್ದಾರೆ. ಏಪ್ರಿಲ್ 10ಕ್ಕೆ ಬಿಡುಗಡೆ ಎಂದು ಚಿತ್ರತಂಡ ಈ ಹಿಂದೆ ತಿಳಿಸಿತ್ತು.
ಕಾಂತಾರ ಪ್ರೀಕ್ವೆಲ್: ಡಿವೈನ್ ಸ್ಟಾರ್ ಖ್ಯಾತಿಯ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ ಕಾಂತಾರ ಎ ಲೆಜೆಂಡ್: ಚಾಪ್ಟರ್ 1 ಅಕ್ಟೋಬರ್ 2ರಂದು ತೆರೆಗಪ್ಪಳಿಸಲಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಚಿತ್ರ ಇಂಟರ್ನೆಟ್ ಮೂವಿ ಡೇಟಾಬೇಸ್ ಲಿಸ್ಟ್ನಲ್ಲಿ 18ನೇ ಸ್ಥಾನದಲ್ಲಿದೆ.
ಕೂಲಿ: ಐಎಂಡಿಬಿ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಕೂಲಿ ಪಡೆದುಕೊಂಡಿದೆ. ಚಿತ್ರದಲ್ಲಿ ತಲೈವಾ ರಜನಿಕಾಂತ್ ನಾಯಕನಾಗಿ ನಟಿಸಿದ್ದಾರೆ.ಲೋಕೇಶ್ ಕನಕರಾಜ್ ನಿರ್ದೆಶನದ ಆ್ಯಕ್ಷನ್ ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಸೇರಿದಂತೆ ಹಲವರು ಪ್ರಮುಖ ಪಾತ್ರ ವಹಿಸಿದ್ದಾರೆ.
ಇದನ್ನೂ ಓದಿ: ನಾನು ತುಳುನಾಡಿನವ, ತುಳು ಸಿನಿಮಾ ಮಾಡುತ್ತಿರುವುದು ಹೆಮ್ಮೆಯ ಕ್ಷಣ: ಜೈ ಶೂಟಿಂಗ್ ಆರಂಭಿಸಿದ ಸುನೀಲ್ ಶೆಟ್ಟಿ
ಹೌಸ್‌ಫುಲ್ 5: ಹೌಸ್‌ಫುಲ್ ತನ್ನ ಐದನೇ ಭಾಗ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್, ಸಂಜಯ್ ದತ್ ಮತ್ತು ಅಭಿಷೇಕ್ ಬಚ್ಚನ್ ಸೇರಿದಂತೆ ದೊಡ್ಡ ತಾರಾ ಬಳಗವಿದೆ. ಈ ಚಿತ್ರವು ಐಎಂಡಿಬಿ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಕಾಮಿಡಿ ಸಿನಿಮಾ ಈ ವರ್ಷಾಂತ್ಯ ತೆರೆಗಪ್ಪಳಿಸಲಿದೆ.
ಇದನ್ನೂ ಓದಿ: ಬಿಗ್ ಬಾಸ್ನಲ್ಲಿ ಬಿಗ್ ಶಾಕ್: ನಡುರಾತ್ರಿ ಮನೆಯಿಂದ ಹೊರಹೋದ್ರು ಸ್ಪರ್ಧಿ!
ಬಾಘಿ 4: ಬಾಲಿವುಡ್ ನಟ ಟೈಗರ್ ಶ್ರಾಫ್ ನಟನೆಯ ಬಾಘಿ 4, ಟಾಪ್ 20 ಬಹುನಿರೀಕ್ಷಿತ ಚಿತ್ರಗಳ ಲಿಸ್ಟ್ನಲ್ಲಿ ಐದನೇ ಸ್ಥಾನದಲ್ಲಿದೆ. ಬಾಘಿ ಫ್ರಾಂಚೈಸ್ ಪ್ರಾರಂಭದಿಂದಲೂ ಶ್ರಾಫ್ ನಾಯಕತ್ವದಲ್ಲಿ ಮೂಡಿಬರುತ್ತಿದ್ದು, ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದೆ.