ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಕಾರ್ಯಕ್ರಮದಲ್ಲಿ ಮಹತ್ವದ ಘಟನೆಯೊಂದು ನಡೆದಿದೆ. ಮಧ್ಯರಾತ್ರಿ ಓರ್ವ ಸ್ಪರ್ಧಿಯನ್ನು ಮನೆಯಿಂದ ಹೊರ ಕಳುಹಿಸಲಾಗಿದ್ದು, ಸ್ಪರ್ಧಿಗಳಿಗೆ ಶಾಕ್ ಆಗಿದೆ. ಇದರ ಸಂಪೂರ್ಣ ಸಂಚಿಕೆ ವೀಕ್ಷಿಸಲು ಅಪಾರ ಸಂಖ್ಯೆಯ ಪ್ರೇಕ್ಷಕರು ಕಾತರರಾಗಿದ್ದಾರೆ.
ಪ್ರತೀ ಸ್ಪರ್ಧಿಗಳು ತಮ್ಮದೇ ಆದ ಅಭಿಮಾನಿ ಬಳಗ ಹೊಂದಿರೋ ಹಿನ್ನೆಲೆ, ಕಡೆ ಕ್ಷಣದಲ್ಲಿ ಯಾರೇ ಹೊರ ಹೋದರೂ ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ಬೇಸರ ತರಿಸಲಿದೆ. ಈ ವಾರ ಮಿಡ್ ವೀಕ್ ಎಲಿಮಿನೇಷನ್ ಇರಲಿದ್ದು, ಟಾಸ್ಕ್ ಗೆಲ್ಲುವ ಸ್ಪರ್ಧಿ ಎಲಿಮಿನೇಷನ್ ತೂಗುಗತ್ತಿಯಿಂದ ಪಾರಾಗಲಿದ್ದಾರೆ ಎಂದು ವಾರ ಆರಂಭವಾಗುತ್ತಿದ್ದಂತೆ ಬಿಗ್ ಬಾಸ್ ತಿಳಿಸಿದ್ದರು. ಅದರಂತೆ, ಎಲಿಮಿನೇಷನ್ ನಡೆದಿದ್ದು, ಇಂದಿನ ಸಂಚಿಕೆಯಲ್ಲಿ ಯಾರೆಂಬುದು ತಿಳಿಯಲಿದೆ.
''ನಡುರಾತ್ರಿ ತೆರೆದ ಬಾಗಿಲನ್ನು ದಾಟೋರು ಯಾರು?'' ಬಿಗ್ ಬಾಸ್ ಕನ್ನಡ ಸೀಸನ್ 11, ಸೋಮ - ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್ನಡಿ ಪ್ರೋಮೋ ಅನಾವರಣಗೊಂಡಿದೆ. ಮಿಡ್ವೀಕ್ ಎಲಿಮಿನೇಷನ್ ಪ್ರಕ್ರಿಯೆ ನಡುರಾತ್ರಿ ನಡೆಯಲಿದೆ. ಮುಖ್ಯದ್ವಾರ ತೆರೆಯಲಾಗಿದ್ದು, ಓರ್ವರು ಮನೆಯಿಂದ ಹೊರಹೋಗಲಿದ್ದಾರೆ. ತ್ರಿವಿಕ್ರಮ್, ಭವ್ಯಾ, ಮೋಕ್ಷಿತಾ, ಮಂಜು ಮತ್ತು ಗೌತಮಿ ಅವರ ಪೈಕಿ ಬಿಗ್ ಬಾಸ್ನಲ್ಲಿ ಓರ್ವರಿಗಿದು ಕಟ್ಟ ಕಡೆಯ ದಿನವಾಗಲಿದೆ.
ಈ ಮುಖ್ಯದ್ವಾರ ಇಂದು ರಾತ್ರಿ ಯಾರಿಗಾಗಿ ತೆರೆಯಲಿದೆ ಎಂದು ತಿಳಿದುಕೊಳ್ಳುವ ಸಮಯ ಎಂದು ಮಿಡ್ ವೀಕ್ ಎಲಿಮಿನೇಷನ್ ಪ್ರಕ್ರಿಯೆ ಪ್ರಾರಂಭಿಸಿದ್ದಾರೆ. ಇದರಲ್ಲಿ ಸ್ಪರ್ಧಿಗಳು ಒಬ್ಬ ಸ್ಪರ್ಧಿಯ ಹೆಸರನ್ನು ಸೂಚಿಸಿ, ಕಾರಣಗಳನ್ನು ಕೊಟ್ಟಿದ್ದಾರೆ. ಫೈನಲಿ ಯಾರು ಹೊರ ಹೋಗಲಿದ್ದಾರೆ ಅನ್ನೋದು ರಾತ್ರಿ ಪ್ರಸಾರ ಕಾಣಲಿರುವ ಸಂಚಿಕೆಯಲ್ಲಿ ತಿಳಿಯಲಿದೆ.
ಗೌತಮಿ ಜಾಧವ್ ಅವರು, ತ್ರಿವಿಕ್ರಮ್ ಅವರ ಹೆಸರು ತೆಗೆದುಕೊಂಡಿದ್ದಾರೆ. ಟಾಸ್ಕ್ ಬಿಟ್ಟು ಬೇರೆಲ್ಲಾದರು ಕಾಣಿಸಿಕೊಳ್ತಾರಾ ಅನ್ನೋದನ್ನು ನೋಡಲು ಕಾದೆವು. ಆದ್ರೆ ಅವರು ತುಂಬಾ ಮೌನಿ. ಅವ್ರುನ್ನ ಅವರು ಪ್ರೂವ್ ಮಾಡಿಕೊಳ್ಳಲು ಆಗ್ಲಿಲ್ಲ ಎಂದು ತಮ್ಮ ಕಾರಣಗಳನ್ನು ತಿಳಿಸಿದ್ದಾರೆ.
ಉಗ್ರಂ ಮಂಜು ಅವರ ಹೆಸರು ತೆಗೆದುಕೊಂಡ ಭವ್ಯಾ, ಮಂಜಣ್ಣನ ಮನೆಯವರು ಬಂದು ಹೇಳೋದ್ಮೇಲೆ ಬದಲಾವಣೆ ಆಗ್ತಾರೆ ಅಂತಾ ಅಂದುಕೊಂಡೆವು. ಆದ್ರೆ ಅದು ಉಲ್ಟಾ ಆಯ್ತು ಎಂದು ತಮ್ಮ ಕಾರಣಗಳನ್ನು ಕೊಟ್ಟಿದ್ದಾರೆ.
ಇದನ್ನೂ ಓದಿ: ನಾನು ತುಳುನಾಡಿನವ, ತುಳು ಸಿನಿಮಾ ಮಾಡುತ್ತಿರುವುದು ಹೆಮ್ಮೆಯ ಕ್ಷಣ: ಜೈ ಶೂಟಿಂಗ್ ಆರಂಭಿಸಿದ ಸುನೀಲ್ ಶೆಟ್ಟಿ
ಭವ್ಯಾ ಅವರ ಹೆಸರು ತೆಗೆದುಕೊಂಡ ಮಂಜು, ಭವ್ಯಾ ಅವರು ನಡೆದುಕೊಳ್ಳುವ ರೀತಿ ಮನೆಯಲ್ಲಿ ಕೆಲವರಿಗೆ ಇಷ್ಟ ಆಗೋದಿಲ್ಲ ಎಂದು ತಿಳಿಸಿದ್ದಾರೆ. ಭವ್ಯಾ ಕಣ್ಣೀರಿಟ್ಟಿದ್ದಾರೆ.
ಇದನ್ನೂ ಓದಿ: ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ನಟ ಸರಿಗಮ ವಿಜಯ್ ನಿಧನ: 250ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ
ನಂತರ ಬಿಗ್ ಬಾಸ್ ಮಾತನಾಡಿ, ಈ ರಾತ್ರಿ, ಈ ಮನೆಯಲ್ಲಿ ನಿಮ್ಮ ಕಡೆಯ ರಾತ್ರಿ ಎಂದು ಬಿಗ್ ಬಾಸ್ ತಿಳಿಸಿದ್ದಾರೆ. ಮುಖ್ಯದ್ವಾರ ತೆರೆದಿದ್ದಾರೆ. ಭವ್ಯಾ ಕಣ್ಣೀರಿಟ್ಟಿದ್ದರೆ, ಗೌತಮಿ ಶಾಕಿಂಗ್ ರಿಯಾಕ್ಷನ್ ಕೊಟ್ಟಿದ್ದಾರೆ. ಹಾಗಾದ್ರೆ ಮನೆಯಿಂದ ಯಾರು ಹೊರಹೋಗಿರಬಹುದು. ಈ ಕುತೂಹಲ ಪ್ರೇಕ್ಷಕರಲ್ಲಿ ದೊಡ್ಡ ಮಟ್ಟದಲ್ಲೇ ಇದೆ.