ETV Bharat / entertainment

ಮೈಸೂರು: ಆಸ್ಪತ್ರೆಗೆ ಬಂದ ದರ್ಶನ್​​; ವೈದ್ಯರು ಕೊಟ್ಟ ಮಾಹಿತಿಯಿದು - ನಟನ ವಿಡಿಯೋ ಇಲ್ಲಿದೆ - DARSHAN

ಬೆನ್ನು ನೋವು ಹಿನ್ನೆಲೆ, ನಟ ದರ್ಶನ್​ ಅವರಿಂದು ಮೈಸೂರಿನ ಡಾ.ಅಜಯ್‌ ಹೆಗ್ಡೆ ಅವರನ್ನು ಭೇಟಿಯಾದರು.

Actor Darshan Thoogudeepa
ನಟ ದರ್ಶನ್‌ (Photo: ETV Bharat)
author img

By ETV Bharat Entertainment Team

Published : Jan 15, 2025, 4:00 PM IST

ಮೈಸೂರು: ಬೆನ್ನು ನೋವು ಹಿನ್ನೆಲೆ ನಟ ದರ್ಶನ್‌ ವೈದ್ಯರ ಸಲಹೆ ಪಡೆಯಲು ತಮ್ಮ ತೋಟದ ಮನೆಯಿಂದ ಖಾಸಗಿ ಆಸ್ಪತ್ರೆಗೆ ಆಗಮಿಸಿದ್ದರು. ತಮ್ಮ ಬೆನ್ನು ನೋವಿನ ಸಮಸ್ಯೆಗೆ ಸಲಹೆ ಕೊಡುತ್ತಿದ್ದ, ವೈದ್ಯರನ್ನು ಭೇಟಿಯಾಗಿದ್ದಾರೆ. ವೈದ್ಯಕೀಯ ಪರೀಕ್ಷೆಗೆ ಒಳಗಾಗಿ ಪುನಃ ತೋಟದ ಮನೆಗೆ ವಾಪಸ್​ ಆಗಿದ್ದಾರೆ.

ನಟ ದರ್ಶನ್‌ ಮಂಗಳವಾರದಂದು ತಮ್ಮ ತೋಟದ ಮನೆಯಲ್ಲಿ ಸಂಕ್ರಾಂತಿ ಹಬ್ಬವನ್ನು ಆಚರಿಸಿದ್ದಾರೆ. ಇಂದು ನಗರದ ಮಣಿಪಾಲ ಆಸ್ಪತ್ರೆಗೆ ಆಗಮಿಸಿ, ತಾವು ಹಿಂದಿನಿಂದಲೂ ಚಿಕಿತ್ಸೆ ಹಾಗೂ ಸಲಹೆ ಪಡೆಯುತ್ತಿದ್ದ ಡಾ.ಅಜಯ್‌ ಹೆಗ್ಡೆ ಅವರನ್ನು ಭೇಟಿಯಾದರು. ಬಳಿಕ ಅವರಿಂದ ಕೆಲ ಸಲಹೆ ಸೂಚನೆ ಪಡೆದು ವಾಪಸ್​ ಆಗಿದ್ದಾರೆ.

ಆಸ್ಪತ್ರೆಗೆ ಬಂದ ದರ್ಶನ್​​ (ETV Bharat)

ವೈದ್ಯರು ಹೇಳಿದ್ದೇನು? ಈ ಬಗ್ಗೆ ಡಾ.ಅಜಯ್‌ ಹೆಗ್ಡೆ ಅವರನ್ನು ಸಂಪರ್ಕಿಸಿದಾಗ, ದರ್ಶನ್‌ ತಮ್ಮ ಬೆನ್ನು ನೋವಿನ ಬಗ್ಗೆ ಚರ್ಚಿಸಲು ಬಂದಿದ್ದರಷ್ಟೇ. ಮತ್ತೇನೂ ಇಲ್ಲ ಎಂದು ದೂರವಾಣಿಯಲ್ಲಿ ಈಟಿವಿ ಭಾರತ್​ಗೆ ವೈದ್ಯರು ಮಾಹಿತಿ ನೀಡಿದರು

ದರ್ಶನ್​ ಪೋಸ್ಟ್​: ಕಳೆದ ದಿನ ಭಾರತ ಮಕರ ಸಂಕ್ರಾಂತಿಯನ್ನು ಬಹಳ ಅದ್ಧೂರಿಯಾಗಿ ಆಚರಿಸಿದೆ. ದರ್ಶನ್​ ಕೂಡಾ ತಮ್ಮ ತೋಟದ ಮನೆಯಲ್ಲಿ ಹಬ್ಬವನ್ನು ಆಚರಿಸಿದ್ದಾರೆ. ಕುದುರೆ ಜೊತೆಗಿನ ತಮ್ಮ ಫೋಟೋ ಹಂಚಿಕೊಂಡ ನಟ, ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು. ನಿಮ್ಮ ಜೀವನದಲ್ಲಿ ಸಂತೋಷವೆಂಬ ಗಾಳಿಪಟಗಳು ಎತ್ತರಕ್ಕೆ ಹಾರಲಿ, ಸಮೃದ್ಧಿ ಮತ್ತು ಸಂತೋಷವನ್ನು ತರಲಿ. ಎಳ್ಳು ಬೆಲ್ಲ ಹಂಚಿ ಹೊಸ ಭರವಸೆಯೊಂದಿಗೆ ಮಕರ ಸಂಕ್ರಾಂತಿಯನ್ನು ಬರಮಾಡಿಕೊಳ್ಳೋಣ ಎಂದು ಬರೆದುಕೊಂಡಿದ್ದರು.

ದರ್ಶನ್ ಪ್ರಕರಣ: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿದ ನಟ ದರ್ಶನ್​​ ಕೆಲ ಸಮಯದವರೆಗೆ ಜೈಲುವಾಸ ಅನುಭವಿಸಿ ಬಂದಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್‌ 11ರಂದು ದರ್ಶನ್‌ ಸೇರಿ ಹಲವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದರು. ಜೂನ್‌ 22ರಿಂದ ನ್ಯಾಯಾಂಗ ಬಂಧನದಲ್ಲಿದ್ದರು. 2024ರ ಡಿಸೆಂಬರ್​ 13ರಂದು ಪ್ರಕರಣದ ಆರೋಪಿಗಳಾದ ನಟ ದರ್ಶನ್‌, ಪವಿತ್ರಾ ಗೌಡ ಸೇರಿದಂತೆ ಏಳು ಮಂದಿಗೆ ಹೈಕೋರ್ಟ್ ಜಾಮೀನು ನೀಡಿದೆ.

ಇದನ್ನೂ ಓದಿ: ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ನಟ ಸರಿಗಮ ವಿಜಯ್​ ನಿಧನ: 250ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ

12.1.2025 ರಿಂದ 16.1.2025ರ ವರೆಗೆ ಮಾತ್ರ ಮೈಸೂರಿನಲ್ಲಿರಲು ನಟ ದರ್ಶನ್ ಅವರಿಗೆ ಕೋರ್ಟ್ ಅನುಮತಿ ನೀಡಿದೆ. ಜನವರಿ 10ರಂದು, ಮೈಸೂರಿಗೆ ತೆರಳಲು ನಟನಿಗೆ 57ನೇ ಸಿಸಿಹೆಚ್ ನ್ಯಾಯಾಲಯ ಅನುಮತಿ ನೀಡಿತ್ತು. ಇಂದು ಆಸ್ಪತ್ರೆ ಭೇಟಿ ವೇಳೆ ದರ್ಶನ್ ಅವರಿಗೆ ನಟ ಧನ್ವೀರ್ ಸಾಥ್ ನೀಡಿದ್ದಾರೆ.

ಇದನ್ನೂ ಓದಿ: ನಾನು ತುಳುನಾಡಿನವ, ತುಳು ಸಿನಿಮಾ ಮಾಡುತ್ತಿರುವುದು ಹೆಮ್ಮೆಯ ಕ್ಷಣ: ಜೈ ಶೂಟಿಂಗ್​ ಆರಂಭಿಸಿದ ಸುನೀಲ್​ ಶೆಟ್ಟಿ

ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ದರ್ಶನ್ ಜೊತೆ ಅವರ ಆಪ್ತ ಸ್ನೇಹಿತ, ನಟ ಧನ್ವೀರ್ ಜೊತೆ ಕಾರಿನಲ್ಲಿ ನ್ಯಾಯಾಲಯಕ್ಕೆ ಆಗಮಿಸಿದ್ದರು. ನ್ಯಾಯಾಲಯ, ಆಸ್ಪತ್ರೆ ಸೇರಿದಂತೆ ಹಲವು ಬಾರಿ ದರ್ಶನ್​ ಜೊತೆ ನಟ ಧನ್ವೀರ್ ಕಾಣಿಸಿಕೊಂಡಿದ್ದಾರೆ. ಅದರಂತೆ ಇಂದೂ ಕೂಡ ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.