ಕರ್ನಾಟಕ

karnataka

ETV Bharat / entertainment

ಯಶ್​​ ರಾಧಿಕಾ ಸಾಂಪ್ರದಾಯಿಕ ನೋಟಕ್ಕೆ ಫ್ಯಾನ್ಸ್​ ಫಿದಾ: ನೋಡಿ ವರಮಹಾಲಕ್ಷ್ಮಿ ಹಬ್ಬದಾಚರಣೆಯ ಫೋಟೋಗಳು - Yash Radika - YASH RADIKA

ಶುಕ್ರವಾರದಂದು ರಾಕಿಂಗ್​​​ ಸ್ಟಾರ್​ ಯಶ್​​ ಮನೆಯಲ್ಲಿ ವರಮಹಾಲಕ್ಷ್ಮೀ ಹಬ್ಬವನ್ನು ಬಹಳ ಅದ್ಧೂರಿಯಾಗಿಯೇ ಆಚರಿಸಲಾಗಿದೆ. ಸಂಪೂರ್ಣ ಕುಟುಂಬ ಸಾಂಪ್ರದಾಯಿಕ ಉಡುಗೆಯಲ್ಲಿ ಬಹಳ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ.

Yash Radika
ಯಶ್​ ರಾಧಿಕಾ ದಂಪತಿ (ETV Bharat)

By ETV Bharat Karnataka Team

Published : Aug 17, 2024, 3:09 PM IST

ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ 'ಟಾಕ್ಸಿಕ್​' ಸಲುವಾಗಿ ಸಕತ್​​ ಬ್ಯುಸಿ ಇರುವ ಸ್ಯಾಂಡಲ್​​​​ವುಡ್​ನ ರಾಕಿಂಗ್​​​ ಸ್ಟಾರ್​ ಯಶ್​​ ಮನೆಯಲ್ಲಿ ಶುಕ್ರವಾರದಂದು ವರಮಹಾಲಕ್ಷ್ಮೀ ಹಬ್ಬವನ್ನು ಬಹಳ ಅದ್ಧೂರಿಯಾಗಿಯೇ ಆಚರಿಸಲಾಯಿತು. ಮಾದರಿ ದಂಪತಿ ಸಾಂಪ್ರದಾಯಿಕ ಉಡುಗೆಯಲ್ಲಿ ಬಹಳ ಸುಂದರವಾಗಿ ಕಾಣಿಸಿಕೊಂಡಿದ್ದು, ಫೋಟೋಗಳೀಗ ಸೋಷಿಯಲ್​ ಮೀಡಿಯಾದಲ್ಲಿ ಜಾಗ ಗಿಟ್ಟಿಸಿಕೊಂಡಿವೆ.

ಎಷ್ಟೇ ಆಧುನಿಕತೆಗೆ ಒಗ್ಗಿಕೊಂಡರು ಸಂಪ್ರದಾಯ ಮರೆತಿಲ್ಲ ಕನ್ನಡ ಚಿತ್ರರಂಗದ ಈ ಜೋಡಿ. ಹಬ್ಬಗಳನ್ನು ಬಹಳ ಸಾಂಪ್ರದಾಯಿಕವಾಗಿ ಆಚರಿಸಿ ಗಮನ ಸೆಳೆಯುತ್ತಾರೆ. ವರಮಹಾಲಕ್ಷ್ಮೀ ಹಬ್ಬ ಈ ಜೋಡಿಗೆ ವಿಶೇಷ ಎಂದೇ ಹೇಳಬಹುದು. ಬಹಳ ಅದ್ಧೂರಿಯಾಗಿ ಹಬ್ಬವನ್ನು ಆಚರಿಸಿ ಫೋಟೋಗಳನ್ನು ಸೋಷಿಯಲ್​​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​​​ನಲ್ಲಿ ಆರು ಸುಂದರ ಫೋಟೋಗಳನ್ನು ಹಂಚಿಕೊಂಡಿರುವ ನಟಿ ರಾಧಿಕಾ ಮತ್ತು ನಟ ಯಶ್​​​, ಎಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಭಕ್ತಿ, ಕೃತಜ್ಞತೆ ಮತ್ತು ಕುಟುಂಬದಿಂದ ತುಂಬಿದ ದಿನ. ದೇವಿಯ ಆಶೀರ್ವಾದದಿಂದ ನಿಮ್ಮ ಜೀವನ ಸಂತೋಷ ಮತ್ತು ಸಮೃದ್ಧಿಯಿಂದ ತುಂಬಲಿ. ನಿಮ್ಮೆಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ಎಂಬ ಕ್ಯಾಪ್ಷನ್​ ಕೊಟ್ಟಿದ್ದಾರೆ.

ಪ್ರತಿ ಫೋಟೋಗಳು ಪ್ರೀತಿಯಿಂದ ಕೂಡಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿವೆ. ಯಶ್​​ ರಾಧಿಕಾ ಮತ್ತು ಮಕ್ಕಳಿಬ್ಬರೂ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಜೋಡಿಯ ನೋಟಕ್ಕೆ ಅಭಿಮಾನಿಗಳು ಪ್ರೀತಿಯ ಧಾರೆಯೆರೆದಿದ್ದಾರೆ.

ಕೆಜಿಎಫ್​ 2ಗೆ ರಾಷ್ಟ್ರಪ್ರಶಸ್ತಿ: ಶುಕ್ರವಾರದಂದು 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ವಿಜೇತರ ಹೆಸರುಗಳು ಘೋಷಣೆಯಾಗಿವೆ. ಕನ್ನಡ ಚಿತ್ರರಂಗದ ಮೂರು ಸಿನಿಮಾಗಳು ಆರು ಪ್ರಶಸ್ತಿಗಳನ್ನು ಗೆದ್ದುಕೊಂಡಿವೆ. ಈ ಪೈಕಿ ರಾಕಿಂಗ್​ ಸ್ಟಾರ್​ ಮುಖ್ಯಭೂಮಿಕೆಯ ಕೆಜಿಎಫ್​ 2 ಒಟ್ಟು ಎರಡು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. 2022ರ ಏಪ್ರಿಲ್​​ 14ರಂದು ತೆರೆಕಂಡ 'ಕೆಜಿಎಫ್ ​2'ಗೆ ಅತ್ಯುತ್ತಮ ಕನ್ನಡ ಸಿನಿಮಾ ಮತ್ತು ಅತ್ಯುತ್ತಮ ಆ್ಯಕ್ಷನ್​ ಡೈರೆಕ್ಷನ್​​​ ರಾಷ್ಟ್ರ ಪ್ರಶಸ್ತಿ ಲಭಿಸಿದೆ.

ಇದನ್ನೂ ಓದಿ:ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: 'ಕೆಜಿಎಫ್​ 2' ಅತ್ಯುತ್ತಮ ಕನ್ನಡ ಚಿತ್ರ - KGF2 Best Kannada Film

ಯಶ್ ​ಪೋಸ್ಟ್​:ಪ್ರಶಸ್ತಿ ಘೋಷಣೆ ಬಳಿಕ ನಾಯಕ ನಟ ತಮ್ಮ ಅಫಿಶಿಯಲ್​ ಸೋಷಿಯಲ್​ ಮೀಡಿಯಾ ಪ್ಲ್ಯಾಟ್​ಪಾರ್ಮ್​ಗಳಲ್ಲಿ ಅಭಿನಂದನೆ, ಧನ್ಯವಾದಗಳನ್ನು ತಿಳಿಸಿದ್ದಾರೆ. ರಾಷ್ಟ್ರ ಪ್ರಶಸ್ತಿ ಗೆದ್ದುಕೊಂಡವರಿಗೆ ಶುಭಾಶಯ. ರಿಷಬ್​ ಶೆಟ್ಟಿ, ವಿಜಯ್​ ಕಿರಗಂದೂರು, ಪ್ರಶಾಂತ್​ ನೀಲ್​​​ ಮತ್ತು ಹೊಂಬಾಳೆ ಫಿಲ್ಮ್ಸ್ ತಂಡಕ್ಕೆ ಅಭಿನಂದನೆಗಳು. ಕಾಂತಾರ ಮತ್ತು ಕೆಜಿಎಫ್ 2 ಚಿತ್ರಗಳಿಗೆ ಇದು ಅರ್ಹ ಮನ್ನಣೆ. ಕನ್ನಡ ಚಿತ್ರರಂಗ ಇನ್ನೂ ಉನ್ನತ ಮಟ್ಟಕ್ಕೆ ಏರಲಿದೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:''ರಾಷ್ಟ್ರ ಪ್ರಶಸ್ತಿಯನ್ನು ಕನ್ನಡಿಗರು, ದೈವ ನರ್ತಕರು, ಅಪ್ಪು​​ ಸರ್​​ಗೆ ಅರ್ಪಿಸುತ್ತೇನೆ'': ರಿಷಬ್​ ಶೆಟ್ಟಿ - Rishab Shetty

ಇದೇ ಆಗಸ್ಟ್​​ 8ಕ್ಕೆ ಹೆಸರಾಂತ ನಟನ ಮುಂದಿನ ಬಹುನಿರೀಕ್ಷಿತ ಟಾಕ್ಸಿಕ್​​ ಚಿತ್ರ ಸೆಟ್ಟೇರಿದೆ. ಮುಂಜಾನೆ ಬ್ರಾಹ್ಮೀ ಮುಹೂರ್ತದಲ್ಲಿ ಟಾಕ್ಸಿಕ್​​​​​​ ಮುಹೂರ್ತ ಸಮಾರಂಭ ನೆರವೇರಿತ್ತು. ಚಿತ್ರ ಬರುವ ವರ್ಷ ಏಪ್ರಿಲ್​​​ನಲ್ಲಿ ತೆರೆಕಾಣಲಿದೆ.

ABOUT THE AUTHOR

...view details