ನಾವು 2025ನ್ನು ಭರ್ಜರಿಯಾಗಿ ಸ್ವಾಗತಿಸಿದ್ದೇವೆ. ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರರಂಗದಾದ್ಯಂತ ಅಸಂಖ್ಯಾತ ಬಿಡುಗಡೆಗಳೊಂದಿಗೆ ಭಾರತೀಯ ಚಿತ್ರರಂಗ ಅತ್ಯಾಕರ್ಷಕ ವರ್ಷವನ್ನು ಆಚರಿಸಲು ಸಜ್ಜಾಗಿದೆ. ಫಿಲ್ಮ್ ಮೇಕರ್ಸ್ ಮತ್ತು ಪ್ರೇಕ್ಷಕರು ಆ್ಯಕ್ಷನ್ - ಪ್ಯಾಕ್ಡ್, ಪೀರಿಯಾಡಿಕಲ್ ಮತ್ತು ಸ್ಟಾರ್-ಸ್ಟಡ್ ಎಂಟರ್‌ಟೈನ್ಮೆಂಟ್ ಕಂಟೆಂಟ್ ಮೇಲೆ ಭಾರಿ ಭರವಸೆ ಹೊಂದಿದ್ದಾರೆ. 2025ರ ಬಹು ನಿರೀಕ್ಷಿತ ಚಿತ್ರಗಳ ಒಂದು ನೋಟ ಇಲ್ಲಿದೆ.
ಟಾಕ್ಸಿಕ್ (ಏಪ್ರಿಲ್ 10): 'ಕೆಜಿಎಫ್' ಎಂಬ ಬ್ಲಾಕ್ಬಸ್ಟರ್ ಸರಣಿ ಸಿನಿಮಾಗಳ ಮೂಲಕ ವಿಶ್ವಾದ್ಯಂತ ಜನಪ್ರಿಯರಾಗಿರುವ ರಾಕಿಂಗ್ ಸ್ಟಾರ್ ಯಶ್ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಚಿತ್ರ ಟಾಕ್ಸಿಕ್. ಮಲಯಾಳಂನ ಸ್ಟಾರ್ ಲೇಡಿ ಡೈರೆಕ್ಟರ್ ಗೀತು ಮೋಹನ್ದಾಸ್ ನಿರ್ದೇಶನದ ಸಿನಿಮಾ ಸೆಟ್ಟೇರಿದ ದಿನದಿಂದಲೂ ಸಾಕಷ್ಟು ಸದ್ದು ಮಾಡುತ್ತಾ ಬಂದಿದೆ. ದಕ್ಷಿಣ ಚಿತ್ರರಂಗದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಕೆವಿಎನ್ ನಿರ್ಮಾಣ ಮಾಡುತ್ತಿರುವ ಬಿಗ್ ಬಜೆಟ್ ಪ್ರಾಜೆಕ್ಟ್ ಏಪ್ರಿಲ್ 10ರಂದು ತೆರೆಕಾಣಲಿದೆ.
ಕಾಂತಾರ ಪ್ರೀಕ್ವೆಲ್ (ಅಕ್ಟೋಬರ್ 2): ಕನ್ನಡ ಚಿತ್ರರಂಗದ ಡಿವೈನ್ ಸ್ಟಾರ್ ಖ್ಯಾತಿಯ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ ಬಹುನಿರೀಕ್ಷಿತ ಚಿತ್ರ ಕಾಂತಾ ಪ್ರೀಕ್ವೆಲ್ ಅಕ್ಟೋಬರ್ 2ರಂದು ತೆರೆಗಪ್ಪಳಿಸಲಿದೆ. 2022ರ ಸೆಪ್ಟೆಂಬರ್ 30ರಂದು ತೆರೆಕಂಡ ಕಾಂತಾರ ಚಿತ್ರದ ಪ್ರೀಕ್ವೆಲ್ ಇದಾಗಿದ್ದು, ದಕ್ಷಿಣ ಚಿತ್ರರಂಗದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ನಿರ್ಮಿಸುತ್ತಿದೆ.
ಸಂಜು ವೆಡ್ಸ್ ಗೀತಾ 2 (ಜನವರಿ 10): ಸ್ಯಾಂಡಲ್ವುಡ್ ಸೂಪರ್ ಸ್ಟಾರ್ಗಳಾದ ಶ್ರೀನಗರ ಕಿಟ್ಟಿ ಹಾಗೂ ರಚಿತಾ ರಾಮ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಸಂಜು ವೆಡ್ಸ್ ಗೀತಾ 2 ಜನವರಿ 10ರಂದು ಪ್ರಪಂಚದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಶಿಡ್ಲಘಟ್ಟದ ರೇಷ್ಮೆ ಬೆಳೆಗಾರರ ವಿಷಯದೊಂದಿಗೆ, ನವಿರಾದ ಪ್ರೇಮಕಥೆಯನ್ನೊಳಗೊಂಡಿರುವ ಸಿನಿಮಾಗ ನಾಗಶೇಖರ್ ಆ್ಯಕ್ಷನ್ ಕಟ್ ಹೇಳಿದ್ದಾರೆ ಮತ್ತು ಪವಿತ್ರ ಇಂಟರ್ನ್ಯಾಷನಲ್ ಮೂವೀಮೇಕರ್ಸ್ ಅಡಿ ಛಲವಾದಿ ಕುಮಾರ್ ನಿರ್ಮಾಣ ಮಾಡಿದ್ದಾರೆ.
ರಿಚರ್ಡ್ ಆಂಥೋನಿ (ಮಾರ್ಚ್ 14): ರಕ್ಷಿತ್ ಶೆಟ್ಟಿ ಸಾರಥ್ಯದ ರಿಚರ್ಡ್ ಆಂಥೋನಿ ಮಾರ್ಚ್ 14ರಂದು ಬಿಡುಗಡೆ ಆಗಲಿದೆ ಎಂಬ ಮಾಹಿತಿಯಿದೆ. ದಕ್ಷಿಣ ಚಿತ್ರರಂಗದ ಕ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಹೊಂಬಾಳೆ ಫಿಲ್ಮ್ಸ್ ಈ ಸಿನಿಮಾವನ್ನು ನಿರ್ಮಿಸುತ್ತಿದೆ.
'ಕೆಡಿ - ದಿ ಡೆವಿಲ್': ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮುಖ್ಯಭೂಮಿಕೆಯ ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಣಗೊಳ್ಳುತ್ತಿದ್ದು, ಪ್ರೇಮ್ ನಿರ್ದೇಶನವಿದೆ. ಧ್ರುವ ಸರ್ಜಾ ಜೊತೆ ಬಾಲಿವುಡ್ ಕಲಾವಿದರಾದ ಸಂಜಯ್ ದತ್, ನಟಿ ಶಿಲ್ಪಾ ಶೆಟ್ಟಿ, ರವಿಚಂದ್ರನ್, ರಮೇಶ್ ಅರವಿಂದ್, ರೀಷ್ಮಾ ನಾಣಯ್ಯ ಸೇರಿದಂತೆ ಹಲವು ಬಿಗ್ ಸ್ಟಾರ್ಸ್ ನಟಿಸಿದ್ದು, ಕೆ.ವಿ.ಎನ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿದೆ. ಈ ವರ್ಷ ತೆರೆಕಾಣಲಿರುವ ಚಿತ್ರದ ಬಿಡುಗಡೆ ದಿನಾಂಕ ಇನ್ನಷ್ಟೇ ಘೋಷಣೆಯಾಗಬೇಕಿದೆ.
2025ರಲ್ಲಿ ಬಿಡುಗಡೆಯಾಗಲಿರುವ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರಗಳು
- ಫತೇಹ್ (ಬಿಡುಗಡೆ ದಿನಾಂಕ: ಜನವರಿ 10).
- ಎಮರ್ಜೆನ್ಸಿ (ಬಿಡುಗಡೆ ದಿನಾಂಕ: ಜನವರಿ 17).
- ಆಜಾದ್ (ಬಿಡುಗಡೆ ದಿನಾಂಕ: ಜನವರಿ 17).
- ಸ್ಕೈ ಫೋರ್ಸ್ (ಬಿಡುಗಡೆ ದಿನಾಂಕ: ಜನವರಿ 24).
- ದೇವ (ಬಿಡುಗಡೆ ದಿನಾಂಕ: ಜನವರಿ 31).
- ಛಾವಾ (ಬಿಡುಗಡೆ ದಿನಾಂಕ: ಫೆಬ್ರವರಿ 14).
- ಸಿಕಂದರ್ (ಬಿಡುಗಡೆ ದಿನಾಂಕ: ಈದ್ 2025).
- ವಾರ್ 2 (ಬಿಡುಗಡೆ ದಿನಾಂಕ: ಆಗಸ್ಟ್ 14).
- ಆಲ್ಫಾ (ಬಿಡುಗಡೆ ದಿನಾಂಕ: ಕ್ರಿಸ್ಮಸ್ 2025).
- ಹೌಸ್‌ಫುಲ್ 5 (ಬಿಡುಗಡೆ ದಿನಾಂಕ: ಜೂನ್ 2025).
- ಮೆಟ್ರೋ... ಇನ್ ದಿನೋ (ಬಿಡುಗಡೆ ದಿನಾಂಕಘೋಷಣೆಯಾಗಬೇಕಷ್ಟೇ).
- ಜಾಲಿ ಎಲ್ಎಲ್ಬಿ 3 (ಬಿಡುಗಡೆ ದಿನಾಂಕ: ಏಪ್ರಿಲ್ 10).
- ಬಾಘಿ 4 (ಬಿಡುಗಡೆ ದಿನಾಂಕ: ಸೆಪ್ಟೆಂಬರ್ 5).
- ಕೂಲಿ (ಬಿಡುಗಡೆ ದಿನಾಂಕ: ಮೇ 1).
- ಥಗ್ ಲೈಫ್ (ಬಿಡುಗಡೆ ದಿನಾಂಕ: ಜೂನ್ 5).
- ದಳಪತಿ 69 (ಬಿಡುಗಡೆ ದಿನಾಂಕ: ಅಕ್ಟೋಬರ್ 2025).
- ರೆಟ್ರೋ (ಬಿಡುಗಡೆ ದಿನಾಂಕ: ಘೋಷಿಸಲಾಗುವುದು).
- ಡ್ರ್ಯಾಗನ್ (ಬಿಡುಗಡೆ ದಿನಾಂಕ: ಫೆಬ್ರವರಿ 2025).
- ಲವ್ ಇನ್ಶೂರೆನ್ಸ್ ಕಂಪನಿ (ಬಿಡುಗಡೆ ದಿನಾಂಕ: ಘೋಷಿಸಲಾಗುವುದು).
- ಗೇಮ್ ಚೇಂಜರ್ (ಬಿಡುಗಡೆ ದಿನಾಂಕ: ಜನವರಿ 10).
- ದಿ ರಾಜಾ ಸಾಬ್ (ಬಿಡುಗಡೆ ದಿನಾಂಕ: ಏಪ್ರಿಲ್ 10).
- ಅಖಂಡ 2 (ಬಿಡುಗಡೆ ದಿನಾಂಕ: ಸೆಪ್ಟೆಂಬರ್ 25).
- ಹರಿ ಹರ ವೀರ ಮಲ್ಲು (ಬಿಡುಗಡೆ ದಿನಾಂಕ: ಮಾರ್ಚ್ 28).
- ದಿ ಪ್ಯಾರಡೈಸ್ (ಬಿಡುಗಡೆ ದಿನಾಂಕ: ಏಪ್ರಿಲ್ 14).
- ಬಜೂಕ (ಬಿಡುಗಡೆ ದಿನಾಂಕ: ಜನವರಿ 18).
- ಎಂಪುರಾನ್ (ಬಿಡುಗಡೆ ದಿನಾಂಕ: ಮಾರ್ಚ್ 27).
- ಕಥನಾರ್ (ಬಿಡುಗಡೆ ದಿನಾಂಕ ಘೋಷಣೆಯಾಬೇಕಿದೆ).
ಇದನ್ನೂ ಓದಿ: ವಾರದ ದಿನಗಳಲ್ಲೂ ಉತ್ತಮ ಕಲೆಕ್ಷನ್: ಈವರೆಗೆ ಸುದೀಪ್ 'ಮ್ಯಾಕ್ಸ್', ಉಪೇಂದ್ರ 'ಯುಐ' ಗಳಿಸಿದ್ದೆಷ್ಟು?
ಇದನ್ನೂ ಓದಿ: 'ಪಿನಾಕ' ಶೂಟಿಂಗ್ ಯಾವಾಗ? ಗಣೇಶ್ ಬಳಿಕ ಶ್ರೀಮುರಳಿ, ಶಿವಣ್ಣ, ಧ್ರುವ ಸರ್ಜಾರತ್ತ ಟಾಲಿವುಡ್ ಪ್ರೊಡಕ್ಷನ್ ಹೌಸ್ ಗಮನ