ಕರ್ನಾಟಕ

karnataka

ETV Bharat / entertainment

ಶಾಹಿದ್ ​-ಕೃತಿ ಅಭಿನಯದ 'ತೇರಿ ಬಾತೋ ಮೇ ಐಸಾ ಉಲ್ಜಾ ಜಿಯಾ' ಎಕ್ಸ್ ವಿಮರ್ಶೆ ಇಲ್ಲಿದೆ - ಶಾಹಿದ್ ಕಪೂರ್

'ತೇರಿ ಬಾತೋ ಮೇ ಐಸಾ ಉಲ್ಜಾ ಜಿಯಾ' ಸಿನಿಮಾಗೆ ಬಹುತೇಕ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿದೆ.

Teri Baaton Mein Aisa Uljha Jiya
'ತೇರಿ ಬಾತೋ ಮೇ ಐಸಾ ಉಲ್ಜಾ ಜಿಯಾ'

By ETV Bharat Karnataka Team

Published : Feb 9, 2024, 2:26 PM IST

ಬಾಲಿವುಡ್​ನ ಶಾಹಿದ್ ಕಪೂರ್ ಹಾಗೂ ಕೃತಿ ಸನೋನ್ ಮುಖ್ಯಭೂಮಿಕೆಯ ''ತೇರಿ ಬಾತೋ ಮೇ ಐಸಾ ಉಲ್ಜಾ ಜಿಯಾ'' (Teri Baaton Mein Aisa Uljha Jiya) ಸಿನಿಮಾ ಇಂದು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ತೆರೆಕಂಡಿದೆ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕೊನೆಯದಾಗಿ ಒಟಿಟಿ ಪ್ರಾಜೆಕ್ಟ್‌ಗಳಾದ ಫಾರ್ಝಿ ಮತ್ತು ಬ್ಲಡಿ ಡ್ಯಾಡಿ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದ ಬಾಲಿವುಡ್ ಸೂಪರ್​​ ಸ್ಟಾರ್ ಶಾಹಿದ್ ಕಪೂರ್ ಇದೀಗ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕೃತಿ ಸನೋನ್​​​​ ಜೊತೆ ಚಿತ್ರಮಂದಿರ ಪ್ರವೇಶಿಸಿದ್ದಾರೆ. ದಿನೇಶ್ ವಿಜನ್ ಅವರ ಮ್ಯಾಡಾಕ್ ಫಿಲ್ಮ್ಸ್ ಮತ್ತು ಜಿಯೋ ಸ್ಟುಡಿಯೋಸ್ ನಿರ್ಮಾಣದ ಈ ಚಿತ್ರದಲ್ಲಿ ಕೃತಿ ಸನೋನ್ ಹ್ಯೂಮನ್​ ರೋಬೋಟ್​​ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅಮಿತ್ ಜೋಶಿ ಮತ್ತು ಆರಾಧನಾ ಸಾಹ್ ಈ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳಿದ್ದು, ಇವರ ನಿರ್ದೇಶನದ ಚೊಚ್ಚಲ ಚಿತ್ರವಿದು.

'ಟಿಬಿಎಂಎಯುಜೆ' ಸೈನ್ಸ್ ಫಿಕ್ಷನ್​​ ರೊಮ್ಯಾನ್ಸ್ ಕಾಮಿಡಿ ಸಿನಿಮಾ ಎಂದು ಬಿಂಬಿಸಲಾಗಿದೆ. ಕೃತಿ ಸನೋನ್ ಸಿಫ್ರಾ ( SIFRA - ಸೂಪರ್ ಇಂಟೆಲಿಜೆಂಟ್ ಫೀಮೇಲ್ ರೋಬೋಟ್ ಆಟೊಮೇಷನ್) ಹೆಸರಿನ ಹ್ಯೂಮನ್​​ ರೋಬೋಟ್ ಆಗಿ ನಟಿಸಿದ್ದಾರೆ. ಶಾಹಿದ್ ಕಪೂರ್ ಅವರು ಆರ್ಯನ್ ಎಂಬ ವಿಜ್ಞಾನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರು ಪ್ರೀತಿಸಿ ಮದುವೆಯಾಗುತ್ತಾರೆ. ಸಿನಿಮಾದ ಟ್ರೇಲರ್​​, ಮ್ಯೂಸಿಕ್​ಗೆ ಫಿದಾ ಆಗಿದ್ದ ಪ್ರೇಕ್ಷಕರೀಗ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಸಿನಿಮಾ ನೋಡಿದವರು ಸೋಷಿಯಲ್​​ ಮೀಡಿಯಾ ಪ್ಲಾಟ್​ಫಾರ್ಮ್ ಎಕ್ಸ್​​ (ಟ್ವಿಟರ್) ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಎಕ್ಸ್​ ಬಳಕೆದಾರರೊಬ್ಬರು, ''ತೇರಿ ಬಾತೋ ಮೇ ಐಸಾ ಉಲ್ಜಾ ಜಿಯಾ - ಹಾನಿರಹಿತ ಮತ್ತು ಸ್ವೀಟ್​​ ರೊಮ್ಯಾಂಟಿಕ್​ ಕಾಮಿಡಿ ವಿತ್​​ ಸೈನ್ಸ್ ಫಿಕ್ಷನ್​​ ಸಿನಿಮಾ. ಇದೊಂದು ಮೋಡಿ ಹಾಗೂ ಹಾಸ್ಯದೊಂದಿಗೆ ಮಾಡಿದ ಪ್ರೇಮಕಥೆ. ಕಾಮಿಕ್ ಪಾತ್ರದಲ್ಲಿ ಶಾಹಿದ್​ ಕಪೂರ್ ಅವರನ್ನು ನೋಡಲು ಸಂತಸವಾಗಿದೆ. ಕೃತಿ ಸನೋನ್​​ ರೋಬೋಟ್​ ಆಗಿ ಇಂಪ್ರೆಸ್​ ಮಾಡಿದ್ದಾರೆ. ವ್ಯಾಲೆಂಟೆನ್ಸ್​ ಡೇಗಿದು ಪರ್ಫೆಕ್ಟ್​​​ ಸಿನಿಮಾ (3.5/5)'' ಎಂದು ಬರೆದಿದ್ದಾರೆ.

ಇದನ್ನೂ ಓದಿ:ಶಾಹಿದ್ ಕಪೂರ್, ಕೃತಿ ಸನೋನ್ ಅಭಿನಯದ 'ಟಿಬಿಎಂಎಯುಜೆ' ಬಿಡುಗಡೆ

ಮತ್ತೊಬ್ಬರು ಟ್ವೀಟ್ ಮಾಡಿ, "ಟಿಬಿಎಂಎಯುಜೆ ಒಂದು ಸಂತೋಷಕರ ರೊಮ್ಯಾಂಟಿಕ್​ ಕಾಮಿಡಿ ಸಿನಿಮಾ ಆಗಿದ್ದು, ಮೋಡಿ ಮತ್ತು ಬುದ್ಧಿವಂತಿಕೆಯೊಂದಿಗೆ ಪ್ರೀತಿಯ ಸಾರವನ್ನು ಸೆರೆ ಹಿಡಿದಿದೆ. ಪ್ರೀತಿಯ ಪಾತ್ರಗಳು ಮತ್ತು ಹೃದಯಸ್ಪರ್ಶಿ ಕಥಾಹಂದರ ಮನಮುಟ್ಟಿದೆ" ಎಂದು ಬರೆದಿದ್ದಾರೆ.

ಇದನ್ನೂ ಓದಿ:ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮಣಿಕಂದನ್ ನಿವಾಸದಲ್ಲಿ ದರೋಡೆ

ಸಿನಿಮಾಗೆ ಮೆಚ್ಚುಗೆ ವ್ಯಕ್ತಪಡಿಸಿದ ಮತ್ತೋರ್ವ ಸೋಷಿಯಲ್​ ಮೀಡಿಯಾ ಬಳಕೆದಾರ, 'ಟಿಬಿಎಂಎಯುಜೆ' ಒಂದು ಲವ್ಲಿ ಫ್ಯಾಮಿಲಿ ಎಂಟರ್​​ಟೈನ್ಮೆಂಟ್​ ಸಿನಿಮಾ. ಈ ಚಿತ್ರ "ಜಬ್ ವಿ ಮೆಟ್" ಹಾದಿಯಲ್ಲಿ ಮುನ್ನಡೆಯುತ್ತದೆ. ಸುಲಭವಾಗಿ 150 ಕೋಟಿ ರೂ. ಕಲೆಕ್ಷನ್​​ ಮಾಡಲಿದೆ. ಶಾಹಿದ್ ಕಪೂರ್ ಅವರು ಡೈಮಂಡ್​​. ಸಣ್ಣ ಪಾತ್ರಗಳಲ್ಲಿ ದೊಡ್ಡ ಮಟ್ಟಿಗೆ ಮಿಂಚಿದ್ದಾರೆ. ಕೃತಿ ಸನೋನ್​​ ಸಾಮರ್ಥ್ಯ ಬಹಿರಂಗವಾಗಿದೆ. ಸಿನಿಮಾದ ಸೀಕ್ವೆಲ್​​​ಗಾಗಿ ಎದುರು ನೋಡುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಹೀಗೆ ಸಿನಿಮಾ ನಾನಾ ತರನಾದ ಪ್ರತಿಕ್ರಿಯೆ ಸ್ವೀಕರಿಸುತ್ತಿದೆ.

ABOUT THE AUTHOR

...view details