ETV Bharat / entertainment

ನಿರ್ದೇಶಕಿಯಾದ 'ಕನ್ನಡತಿ' ರಂಜನಿ ರಾಘವನ್​: ಸಂಗೀತ ಮಾಂತ್ರಿಕ ಇಳಯರಾಜರಿಗೂ ಹಿಡಿಸಿತು ಕಥೆ - KANNADATI MEETS ILAIYARAAJA

ಕನ್ನಡ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಹೆಸರು ಮಾಡಿರುವ ರಂಜನಿ ರಾಘವನ್ ಅವರೀಗ ನಿರ್ದೇಶನಕ್ಕಿಳಿದಿದ್ದಾರೆ. ಸಂಗೀತ ಮಾಂತ್ರಿಕ ಇಳಯರಾಜರಿಗೂ ನಟಿಯ ಕಥೆ ಹಿಡಿಸಿರೋದು ವಿಶೇಷ.

Ranjani Raghavan with Ilaiyaraaja
ಇಳಯರಾಜರೊಂದಿಗೆ ರಂಜನಿ ರಾಘವನ್ (Photo: ETV Bharat)
author img

By ETV Bharat Entertainment Team

Published : Jan 1, 2025, 4:40 PM IST

'ಕನ್ನಡತಿ' ಎಂಬ ಜನಪ್ರಿಯ ಧಾರಾವಾಹಿ ಮೂಲಕ ಹೆಸರು ಸಂಪಾದಿಸಿದ ನಟಿ ರಂಜನಿ ರಾಘವನ್ ಹಿರಿತೆರೆಯಲ್ಲೂ ಕಮಾಲ್​ ಮಾಡಿದ್ದಾರೆ. ಇದೀಗ ನಿರ್ದೇಶಕಿಯಾಗಿ ಹೊಸ ಪಯಣದತ್ತ ಪ್ರಾರಂಭಿಸಿದ್ದಾರೆ. ಹೊಸ ವರ್ಷದಂದು ಈ ವಿಷಯವನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಭಾರತೀಯ ಚಿತ್ರರಂಗದ ಸಂಗೀತ ಮಾಂತ್ರಿಕ ಇಳಯರಾಜರಿಗೂ ಕಥೆ ಹಿಡಿಸಿರೋದು ಹೆಮ್ಮೆಯ ವಿಚಾರ.

ರಂಜನಿ ರಾಘವನ್​ ಪೋಸ್ಟ್​​ನಲ್ಲೇನಿದೆ? ''ಹೊಸ ವರ್ಷದ ದಿನ ನನ್ನ ಹೊಸ ಕೆಲಸದ ಬಗ್ಗೆ ಹೇಳಿಕೊಳ್ಳಲು ಭಯ, ಉತ್ಸಾಹ ಎರಡೂ ಇದೆ. ಈ ಹಿಂದೆ ಬರವಣಿಗೆ ಮತ್ತು ನಟನೆಯ ಮೂಲಕ ಕಥೆಗಳನ್ನು ತಲುಪಿಸೋ ಪ್ರಯತ್ನ ಮಾಡಿದ್ದೇನೆ. ಇದೀಗ ಮೊದಲ ಬಾರಿಗೆ ಕಥೆಯೊಂದನ್ನು ದೊಡ್ಡ ಪರದೆಯ ಮೇಲೆ ನಿಮಗೆ ತೋರಿಸುವತ್ತ ಕೆಲಸ ನಡೆದಿದೆ. ಹೊಸ ಕೆಲಸ ಅನ್ನುವುದಕ್ಕಿಂತ ಸಿನಿಮಾ ನಿರ್ದೇಶಕಿ ಆಗಬೇಕೆಂಬ ಕನಸು ಹೊತ್ತು ಬಹಳ ವರ್ಷಗಳೇ ಸರಿದಿದೆ. ಈ ಕಥೆ ಹುಟ್ಟಿ ಎರಡು ವರ್ಷಗಳಾಗಿವೆ. ಒಂದೂವರೆ ವರ್ಷದಿಂದ ಇದರ ಚಿತ್ರಕಥೆಯನ್ನು ಬರೆದು ತಿದ್ದಿದ್ದೇನೆ. ಚಿತ್ರರಂಗದ ಹಲವಾರು ಜನರ ಸಹಾಯ, ಪ್ರೋತ್ಸಾಹದಿಂದ ನಮ್ಮ ನಿರ್ಮಾಪಕರಾದ ಡಾ.ಆನಂದ್ ಮತ್ತು ರಾಮಕೃಷ್ಣ ಸುಬ್ರಮಣ್ಯಂ ಅವರ ಸಹಕಾರದಿಂದ ನಮ್ಮ ಸಿನಿಮಾ ಬಗ್ಗೆ ಮಾತನಾಡುವ ಧೈರ್ಯ ಬಂದಿದೆ''.

''ಈ ಪಯಣದಲ್ಲಿ ಮುಖ್ಯವಾಗಿ ನನಗೆ ಶಕ್ತಿಯಾಗಿರುವವರು Maestro ಇಸೈಜ್ಞಾನಿ ಇಳಯರಾಜ ಸರ್. 1,000ಕ್ಕೂ ಹೆಚ್ಚು ಚಿತ್ರಕ್ಕೆ ಸಂಗೀತ ನೀಡಿರುವವರು ನನ್ನ ಕಥೆಯನ್ನು ಮೆಚ್ಚಿ ಜೊತೆಗೆ ನಿಂತಿದ್ದಾರೆ. ಸೆಪ್ಟೆಂಬರ್ 13, 2024ರಂದು ಅವರನ್ನು ಭೇಟಿ ಆಗಿ ಕಥೆ ಹೇಳುವ ಅದೃಷ್ಟ ಸಿಕ್ಕಾಗ 'ಚೆನ್ನೈಗೆ ಹೋಗಿ ಅವರನ್ನು ಭೇಟಿ ಆಗಿ, ಕಾಲಿಗೆ ಬಿದ್ದು ಒಂದು ಫೋಟೋ ತೆಗೆಸಿಕೊಂಡು ಬಂದ್ರೆ ಅದೇ ದೊಡ್ಡದು' ಅಂತಷ್ಟೇ ಅಂದುಕೊಂಡಿದ್ದು! ಕನ್ನಡದಲ್ಲಿ ಕಥೆ ಹೇಳಮ್ಮ, ಕನ್ನಡ ನನಗೆ ಚೆನ್ನಾಗಿ ಬರುತ್ತೆ ಕೊಲ್ಲೂರು ಮೂಕಾಂಬಿಕೆ ನನ್ನವ್ವ ಎಂದು ಮಾತು ಶುರು ಮಾಡಿದವರು ಮೂರೇ ದಿನದಲ್ಲಿ ಕಥೆ ನನ್ನ ಮನಸ್ಸಿಗೆ ಬಹಳ ಹತ್ತಿರವಾಗಿದೆ ಎಂದು ತಿಳಿಸಿ ನಮ್ಮ ಸಿನಿಮಾದ ಭಾಗವಾಗಿ, ಇವತ್ತಿಗೆ ಇಳಯರಾಜ ಸರ್ ನಮಗೆ 'ಒನ್ ಕಾಲ್ ಅವೇ' ಅನ್ನೋ ಜಂಭ ಹುಟ್ಟಿಸಿದ್ದಾರೆ''.

ಇದನ್ನೂ ಓದಿ: ಚಿತ್ರರಂಗಕ್ಕೆ ಜೂ.ಕಿಚ್ಚನ ಎಂಟ್ರಿ: ಸುದೀಪ್ ಸಿನಿಮಾದಲ್ಲಿ ಅಕ್ಕನ ಮಗ ಸಂಚಿತ್ ಸಂಜೀವ್

''ಹೋದ ವರ್ಷ, 2024 ಜನವರಿ ಒಂದು ನನ್ನ ಹೊಸ ಕನಸಿನ ಬಗ್ಗೆ ಪೋಸ್ಟ್ ಹಾಕಿದ್ದರೂ, ಅದೇನೆಂದು ಹೇಳಲು 2025 ಬರಬೇಕಾಯಿತು! ಸಿನಿಮಾ ಮಾಡುವಾಗ ಎಲ್ಲವೂ ಅಂದುಕೊಂಡಂತೆ ನಡೆಯುವುದಿಲ್ಲ ಅನ್ನುವುದು ಇಲ್ಲಿಯ ತನಕ ಕಲಿತ ಪಾಠವಾದರೂ ಒಳ್ಳೆಯ ಸಿನಿಮಾ ಆಗಲು ಅದಕ್ಕೇನು ಬೇಕೋ ಅದೇ ಪಡೆದುಕೊಳ್ಳುತ್ತದೆ ಅನ್ನೋ ನಂಬಿಕೆಯೂ ಅಚಲವಾಗಿದೆ. ಕನ್ನಡಿಗರ ಅಶೀರ್ವಾದ, ಸಹಕಾರವನ್ನ ಬೇಡುತ್ತಾ ಮುನ್ನಡೆಯುತ್ತಿದ್ದೇನೆ. ನಿಮ್ಮೆಲ್ಲರಿಗೂ ರಾಶಿ ಪ್ರೀತಿ'' ಎಂದು ಬರೆದುಕೊಂಡಿದ್ದಾರೆ. ತಮ್ಮ ಸಿನಿಮಾಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ನಟಿ ರಂಜನಿ ರಾಘವನ್ ಶೀಘ್ರವೇ ಹಂಚಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಗಣೇಶ್​​ ಸಿನಿಮಾ ಟೈಟಲ್​ ಟೀಸರ್​​ ಅನಾವರಣಕ್ಕೆ ದಿನ ನಿಗದಿ: ಪವರ್​ಫುಲ್​ ಪಾತ್ರದಲ್ಲಿ ಗೋಲ್ಡನ್​ ಸ್ಟಾರ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.