Vodafone Idea 5G Services: ವೊಡಾಫೋನ್-ಐಡಿಯಾದಿಂದ ಜಿಯೋ ಮತ್ತು ಏರ್‌ಟೆಲ್‌ಗೆ ಇದೊಂದು ರೀತಿ ಶಾಕಿಂಗ್ ನ್ಯೂಸ್. ಕೊನೆಗೂ ವೊಡಾಫೋನ್-ಐಡಿಯಾ ಈ ಕಂಪನಿಗಳೊಂದಿಗೆ ಸ್ಪರ್ಧಿಸಲು ತನ್ನ 5G ಬ್ರಾಡ್‌ಬ್ಯಾಂಡ್ ಸೇವೆಗಳನ್ನು ಹೊಸತರಲು ಸಿದ್ಧವಾಗುತ್ತಿದೆ. ಕಂಪನಿಯ ಪ್ರತಿನಿಧಿಯೊಬ್ಬರು ಈ ವರ್ಷದ ಮಾರ್ಚ್‌ನಲ್ಲಿ ಸುಮಾರು 75ಕ್ಕೂ ಹೆಚ್ಚು ನಗರಗಳಲ್ಲಿ 5G ಸೇವೆ ಪ್ರಾರಂಭಿಸಲಿದ್ದೇವೆ ಎಂದು ಬಹಿರಂಗಪಡಿಸಿದ್ದಾರೆ. ಉತ್ತಮ ನೆಟ್‌ವರ್ಕ್ ಅನುಭವದ ಜೊತೆಗೆ ಈ ಸೇವೆಗಳು ಕಡಿಮೆ ಬೆಲೆಯಲ್ಲಿ ದೊರೆಯುವ ನಿರೀಕ್ಷೆ ಮೂಡಿದೆ.
ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್-ಐಡಿಯಾ ದೇಶದ ಮೂರು ದೊಡ್ಡ ಖಾಸಗಿ ಟೆಲಿಕಾಂ ಕಂಪನಿಗಳಾಗಿವೆ. ಮೊದಲಿನಿಂದಲೂ ನಡೆಯುತ್ತಿರುವ ತ್ರಿಕೋನ ಸಮರದಲ್ಲಿ ವೊಡಾಫೋನ್ ಐಡಿಯಾ ಕೊನೆಯ ಸ್ಥಾನದಲ್ಲಿದೆ. ಪ್ರಸ್ತುತ ಅದರ ಬಳಕೆದಾರರ ಸಂಖ್ಯೆ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ Vodafone-Idea ತನ್ನ ಸ್ಥಾನವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗಲೇ Jio ಮತ್ತು Airtel ತಮ್ಮ 5G ಸೇವೆಗಳನ್ನು ವಿಸ್ತರಿಸಿವೆ.
ವೊಡಾಫೋನ್-ಐಡಿಯಾ 5G ರೂಪದಲ್ಲಿ ಕಠಿಣ ಸವಾಲು ಎದುರಿಸಿದೆ ಎಂದು ಹೇಳಬಹುದು. 5G ಸ್ಪೆಕ್ಟ್ರಮ್ ಪಡೆದುಕೊಂಡಿರುವ ಕಂಪನಿಯು ಹಣದ ಕೊರತೆಯಿಂದಾಗಿ ಬಿಡುಗಡೆ ವಿಳಂಬಗೊಳಿಸಿದೆ. ಇನ್ನೂ ಹೆಚ್ಚಿನ ಬಳಕೆದಾರರನ್ನು ಆಕರ್ಷಿಸಲು ಜಿಯೋ ಮತ್ತು ಏರ್‌ಟೆಲ್ ತಮ್ಮ 5G ಸೇವೆಗಳನ್ನು ವೇಗವಾಗಿ ವಿಸ್ತರಿಸಿವೆ. ಹೀಗಾಗಿ ವೊಡಾಫೋನ್-ಐಡಿಯಾ ಹೆಚ್ಚಿನ ಸಂಖ್ಯೆಯ ಬಳಕೆದಾರರನ್ನು ಕಳೆದುಕೊಂಡಿತು. ಆದರೆ ಈಗ ಸ್ವಲ್ಪ ತಡವಾಗಿ VI (ವೊಡಾಫೋನ್-ಐಡಿಯಾ) 5G ಸೇವೆಗಳನ್ನು ತರುವ ಮೂಲಕ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ.
ಸಂಬಂಧಿತ ಮೂಲಗಳ ಪ್ರಕಾರ, ಏರ್‌ಟೆಲ್ ಮತ್ತು ಜಿಯೋಗೆ ಹೋಲಿಸಿದರೆ ಪ್ರವೇಶ ಮಟ್ಟದ ಯೋಜನೆಗಳನ್ನು ಶೇಕಡಾ 15ರಷ್ಟು ಅಗ್ಗವಾಗಿ ತರಲಾಗುತ್ತದೆ. ಪ್ರಿಪೇಯ್ಡ್ ಬಳಕೆದಾರರನ್ನು ಆಕರ್ಷಿಸಲು ಡೀಲರ್ ಕಮಿಷನ್‌ಗಳು ಮತ್ತು ಪ್ರಚಾರದ ವೆಚ್ಚಗಳು ಗಮನಾರ್ಹವಾಗಿ ಹೆಚ್ಚಾಗುವ ಸಾಧ್ಯತೆಯಿದೆ ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ. Vodafone Idea ತನ್ನ 5G ನೆಟ್‌ವರ್ಕ್ ಅನ್ನು ಮೊದಲು 75 ನಗರಗಳಲ್ಲಿ ಪರಿಚಯಿಸಲಿದೆ ಎಂದು ವರದಿಯಾಗಿದೆ.
ಮತ್ತೊಂದೆಡೆ, ಜಿಯೋ ಮತ್ತು ಏರ್‌ಟೆಲ್‌ಗೆ ಪೈಪೋಟಿ ನೀಡಲು ಬಿಎಸ್ಎನ್ಎಲ್ ಕೂಡಾ ಈ ವರ್ಷವೇ 5G ಸೇವೆಗಳನ್ನು ತರಲು ಮುಂದಾಗಿದೆ.
ಇದನ್ನೂ ಓದಿ: ಪಿಗ್ ಬುಚರಿಂಗ್ ಹಗರಣ: ಇದು ಸೈಬರ್ ವಂಚಕರ ಹೊಸ ಟ್ರಿಕ್; ನಿರುದ್ಯೋಗಿಗಳು, ಗೃಹಿಣಿಯರು, ವಿದ್ಯಾರ್ಥಿಗಳೇ ಟಾರ್ಗೆಟ್