ETV Bharat / bharat

'ನನಗಾಗಿ ಐಷಾರಾಮಿ ಬಂಗಲೆ ಕಟ್ಟಿಕೊಂಡಿಲ್ಲ, ಬಡವರಿಗಾಗಿ 4 ಕೋಟಿ ಸೂರು ನಿರ್ಮಿಸಿದ್ದೇವೆ': ಕೇಜ್ರಿವಾಲ್​​ಗೆ ಮೋದಿ ಟಾಂಗ್​ - PM MODI TARGETS KEJRIWAL

ದೆಹಲಿ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಆಪ್​ ಮಧ್ಯೆ ಮಾತಿನ ಸಮರ ಶುರುವಾಗಿದೆ. ಸಿಎಂ ನಿವಾಸ ನವೀಕರಣ ಮಾಡಿದ್ದ ಕೇಜ್ರಿವಾಲ್​​ ವಿರುದ್ಧ ಪ್ರಧಾನಿ ಮೋದಿ ಕುಟುಕಿದ್ದಾರೆ.

ಪ್ರಧಾನಿ ಮೋದಿ
ಪ್ರಧಾನಿ ಮೋದಿ (PTI)
author img

By PTI

Published : Jan 4, 2025, 10:55 AM IST

ನವದೆಹಲಿ: ಬಡವರಿಗಾಗಿ ಕೇಂದ್ರ ಸರ್ಕಾರ ಸಾವಿರಾರು ಮನೆಗಳನ್ನು ನಿರ್ಮಾಣ ಮಾಡಿಕೊಟ್ಟಿದೆ. ಆದರೆ, ಮಾಜಿ ಸಿಎಂ ಅರವಿಂದ್​ ಕೇಜ್ರಿವಾಲ್​​ ದೆಹಲಿಯ ಜನರು ಕೋವಿಡ್​​ನಿಂದ ಸಂಕಷ್ಟದಲ್ಲಿದ್ದಾಗ, ಐಷಾರಾಮಿ ಬಂಗಲೆಯನ್ನು ತಮಗಾಗಿ ನಿರ್ಮಿಸಿಕೊಂಡಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದರು.

ದೆಹಲಿಯ ಜೆಜೆ ಕ್ಲಸ್ಟರ್‌ಗಳ ನಿವಾಸಿಗಳಿಗಾಗಿ ಹೊಸದಾಗಿ ನಿರ್ಮಿಸಲಾದ 1,675 ಫ್ಲ್ಯಾಟ್‌ಗಳ ಉದ್ಘಾಟನೆ, ಅಶೋಕ್ ವಿಹಾರ್‌ನಲ್ಲಿರುವ ಸ್ವಾಭಿಮಾನ್ ಅಪಾರ್ಟ್‌ಮೆಂಟ್‌ನಲ್ಲಿ ಅರ್ಹ ಫಲಾನುಭವಿಗಳಿಗೆ ಕೀಗಳನ್ನು ಹಸ್ತಾಂತರಿಸಿ ಅವರು ಮಾತನಾಡಿದರು.

ಅರವಿಂದ್ ಕೇಜ್ರಿವಾಲ್ ಅವರು ಸಿಎಂ ಆಗಿದ್ದಾಗ ತಮಗಾಗಿ ಐಷಾರಾಮಿ ನಿವಾಸವನ್ನು ನಿರ್ಮಿಸಿಕೊಂಡಿದ್ದರು. ನಾನು ಎಂದೂ ಸ್ವಂತಕ್ಕಾಗಿ ಮನೆಯನ್ನು ನಿರ್ಮಿಸಿಕೊಂಡಿಲ್ಲ. ಇದು ದೇಶಕ್ಕೇ ಗೊತ್ತಿದೆ. ನನಗಾಗಿ ಐಷಾರಾಮಿ ಬಂಗಲೆಯನ್ನು ನಿರ್ಮಿಸಿಕೊಳ್ಳಬಹುದಿತ್ತು. ಬದಲಿಗೆ ಬಡವರಿಗಾಗಿ 4 ಕೋಟಿಗೂ ಹೆಚ್ಚು ಮನೆಗಳನ್ನು ನಿರ್ಮಿಸಿಕೊಟ್ಟಿದ್ದೇವೆ ಎಂದು ಪ್ರಧಾನಿ ಹೇಳಿದರು.

ದೆಹಲಿಗೆ ಆಪ್​ ಅಪಾಯ: ಕಳೆದ 10 ವರ್ಷಗಳಿಂದ ದೆಹಲಿಗೆ ಆಮ್​ ಆದ್ಮಿ ಪಕ್ಷವು (ಆಪ್​​) ವಿಪತ್ತಾಗಿ ಕಾಡುತ್ತಿದೆ. ಮತ್ತೆ ಕೇಜ್ರಿವಾಲ್​ ಸಿಎಂ ಆಗಿ ಬಂದಲ್ಲಿ ಕೇಂದ್ರಾಡಳಿತ ಪ್ರದೇಶಕ್ಕೆ ಅಪಾಯ ತಪ್ಪಿದ್ದಲ್ಲ ಎಂದು ಪ್ರಧಾನಿ ಮೋದಿ ಟೀಕಾಪ್ರಹಾರ ನಡೆಸಿದರು.

ಕೇಜ್ರಿವಾಲ್ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರ ಅಧಿಕೃತ ನಿವಾಸವನ್ನು ಕೋಟ್ಯಂತರ ರೂಪಾಯಿ ಖರ್ಚು ಮಾಡಿ, ವಿದೇಶಿ ವಸ್ತುಗಳಿಂದ ನವೀಕರಿಸಲಾಗಿತ್ತು. ಇದು ದೊಡ್ಡ ವಿವಾದಕ್ಕೂ ಕಾರಣವಾಗಿತ್ತು. ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಇದನ್ನೇ ಗುರಿಯಾಗಿಸಿಕೊಂಡು ನಿವಾಸವನ್ನು 'ಶೀಶ್​​ಮಹಲ್' ಎಂದು ಬಣ್ಣಿಸಿ ಜರಿಯುತ್ತಿದೆ.

ಮೋದಿಗೆ ಕೇಜ್ರಿವಾಲ್​ ತಿರುಗೇಟು: ತಮ್ಮ ನಿವಾಸ ನವೀಕರಣವನ್ನು ಟೀಕಿಸಿದ್ದಕ್ಕೆ ಪ್ರಧಾನಿ ಮೋದಿಗೆ ತಿರುಗೇಟು ನೀಡಿರುವ ಆಪ್​ ಮುಖ್ಯಸ್ಥ ಅರವಿಂದ್​ ಕೇಜ್ರಿವಾಲ್​​, 10 ಲಕ್ಷ ಮೌಲ್ಯದ ಸೂಟ್​, 8400 ಕೋಟಿ ರೂಪಾಯಿ ವೆಚ್ಚದಲ್ಲಿ ವಿಮಾನ ಸಂಚಾರ ನಡೆಸುವ ವ್ಯಕ್ತಿಗಳಿಗೆ ಶೀಶ್​ಮಹಲ್​​ ನಿರ್ಮಾಣ ಮಾಡುವುದು ಸರಿಹೊಂದುವುದಿಲ್ಲ ಎಂದಿದ್ದಾರೆ.

ದೆಹಲಿಯು ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ಅಪಾಯವನ್ನು ಎದುರಿಸುತ್ತಿದೆ. ಕೇಂದ್ರ ಸರ್ಕಾರವು ತನ್ನ ಹೊಣೆಗಾರಿಕೆಯನ್ನು ಉತ್ತಮವಾಗಿ ನಿರ್ವಹಿಸುತ್ತಿಲ್ಲ. ಜನರು ಸುರಕ್ಷತೆ ಮತ್ತು ಭದ್ರತೆಯನ್ನು ಬಯಸುತ್ತಿದ್ದಾರೆ ಎಂದು ಕೇಜ್ರಿವಾಲ್ ಮೋದಿ ಸರ್ಕಾರವನ್ನು ಟೀಕಿಸಿದರು.

ಇದನ್ನೂ ಓದಿ: ಮುಸ್ಲಿಂ ಲೀಗ್ ಕೋಮುವಾದಿಗಳ ದಾಳ, ಮತಕ್ಕಾಗಿ ಕಾಂಗ್ರೆಸ್​ ರಾಜಿ: ಕೇರಳ ಸಿಎಂ ಪಿಣರಾಯಿ ಆರೋಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.