ಯಶ್ ಮತ್ತು ರಾಧಿಕಾ ಪಂಡಿತ್ ಇಂಡಿಯನ್ ಸಿನಿಮಾ ಇಂಡಸ್ಟ್ರಿಯಲ್ಲಿ ಯಶಸ್ವಿ ಕಲಾವಿದರಾಗಿ ಅಲ್ಲದೇ ಮಾದರಿ ದಂಪತಿಯಾಗಿ ಗುರುತಿಸಿಕೊಂಡಿದ್ದಾರೆ. ಸದಾ ಮೇಡ್ ಫರ್ ಈಚ್ ಅದರ್ ಅನ್ನೋ ಗುಣಗಾನಕ್ಕೆ ಪಾತ್ರರಾಗುವ ಈ ಸೆಲೆಬ್ರಿಟಿ ಕಪಲ್ 2025 ಅನ್ನು ಭರ್ಜರಿಯಾಗಿ ಸ್ವಾಗತಿಸಿದ್ದಾರೆ. ನ್ಯೂ ಇಯರ್ ಸೆಲೆಬ್ರೇಶನ್ ಫೋಟೋಗಳನ್ನು ಹಂಚಿಕೊಂಡಿದ್ದು, ಅಭಿಮಾನಿಗಳು ಪ್ರೀತಿಯ ಧಾರೆಯೆರೆಯುತ್ತಿದ್ದಾರೆ.
ಇಂಡಿಯನ್ ಸಿನಿಮಾ ಇಂಡಸ್ಟ್ರಿಯಲ್ಲೇ ರಾಕಿಂಗ್ ಕಪಲ್ ಎಂದೇ ಫೇಮಸ್ ಆಗಿರುವ ಯಶ್ ಹಾಗೂ ರಾಧಿಕಾ ಪಂಡಿತ್ ಯಶಸ್ವಿ ವೈವಾಹಿಕ ಜೀವನ ನಡೆಸೋ ಮೂಲಕ ತಮ್ಮ ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ಮಾದರಿಯಾಗಿದ್ದಾರೆ. ವೈವಾಹಿಕ ಜೀವನ ನಡೆಸಿದರೆ ಇವರಂಥಿರಬೇಕು ಎಂದವರ ಸಂಖ್ಯೆ ದೊಡ್ಡದಿದೆ. ಯಶಸ್ವಿ ದಾಂಪತ್ಯ ಜೀವನ ನಡೆಸಿಕೊಂಡು ಬಂದಿದ್ದಾರೆ. ವೃತ್ತಿ ಜೀವನದ ಜೊತೆ ಜೊತೆಗೆ ದಂಪತಿಯ ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳಲು, ಅವರ ಫೋಟೋ ವಿಡಿಯೋಗಳನ್ನು ಕಣ್ತುಂಬಿಕೊಳ್ಳಲು ಕೋಟ್ಯಂತರ ಫ್ಯಾನ್ಸ್ ಉತ್ಸುಕರಾಗಿರುತ್ತಾರೆ. ಅದರಂತೆ ಇಂದು ಶೇರ್ ಆಗಿರೋ ಫೋಟೋ ಸಖತ್ ಸದ್ದು ಮಾಡುತ್ತಿದೆ.
ಒಂದು ಸಮಯ ಕನ್ನಡ ಚಿತ್ರರಂಗವನ್ನಾಳಿದ ನಟಿ ರಾಧಿಕಾ ಪಂಡಿತ್ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಮೂರು ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಹೊಸ ವರ್ಷಾಚರಣೆಯ ಸುಂದರ ಫೋಟೋಗಳು ಇದಾಗಿದ್ದು, ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯ ಕೋರಿದ್ದಾರೆ. ಸಂತೋಷ, ಪ್ರೀತಿ, ನಗುವಿನಿಂದ ಈ ವರ್ಷ ಕೂಡಿರಲಿ ಎಂದು ಹಾರೈಸಿದ್ದಾರೆ.
ಜ.8ಕ್ಕೆ ಅಭಿಮಾನಿಗಳಿಗೆ ಸಿಗೋದಿಲ್ಲ ರಾಕಿಂಗ್ ಸ್ಟಾರ್ ಯಶ್: ಇದೇ ಜನವರಿ 8ರಂದು 39ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿರುವ ರಾಕಿಂಗ್ ಸ್ಟಾರ್ ಯಶ್ ಇತ್ತೀಚೆಗಷ್ಟೇ ತಮ್ಮ ಅಪಾರ ಸಂಖ್ಯೆಯ ಅಭಿಮಾನಿಗಳಿಗಾಗಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಕ್ಯಾನ್ಸರ್ ಗೆದ್ದ ಕರುನಾಡ ಚಕ್ರವರ್ತಿ : ಡಬಲ್ ಪವರ್ನೊಂದಿಗೆ ಬರುತ್ತೇನೆಂದ ಶಿವರಾಜ್ಕುಮಾರ್
''ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರ. ನಿಮ್ಮ ಅಭಿಮಾನದ ಅಪ್ಪುಗೆ ಮತ್ತೊಂದು ವರ್ಷವನ್ನು ಸಾರ್ಥಕಗೊಳಿಸಿದೆ. ಹೊಸ ವರ್ಷ ಹೊಸ ಭರವಸೆಗಳೊಂದಿಗೆ ನಗುನಗುತ್ತಾ ಬದುಕೋಣ. ಬದುಕನ್ನು ಮೆರಗುಗೊಳಿಸುವಂತಹ ಹೊಸ ಯೋಜನೆಗಳೊಂದಿಗೆ ಹೊಸ ವರ್ಷವನ್ನು ಸ್ವಾಗತಿಸೋಣ. ಸಿನಿಮಾ ಕೆಲಸದ ನಿಮಿತ್ತ ನಾನು ಹುಟ್ಟುಹಬ್ಬದಂದು ಊರಿನಲ್ಲಿ ಇರುವುದಿಲ್ಲ. ಬಬ್ಬರ ಹುಟ್ಟುಹಬ್ಬಕ್ಕೆ ನೀವು ತೋರುವ ಅಭಿಮಾನ ಜವಾಬ್ದಾರಿಯುತವಾಗಿರಲಿ ಎಂಬುದು ನನ್ನ ಪ್ರೀತಿಯ ಮನವಿ. ಹಾಗಾಗಿ ಫ್ಲೆಕ್ಸ್, ಬ್ಯಾನರ್ಗಳ ಯಾವುದೇ ಆಡಂಬರ ಮಾಡದೇ ನನ್ನ ಮನಸ್ಸಿಗೆ ನೋವಾಗುವ ನಡವಳಿಕೆ ತೋರದೇ ನೀವು ಇದ್ದಲ್ಲಿಂದಲೇ ನಿಮ್ಮ ಕುಟುಂಬದವರು ಹೆಮ್ಮೆ ಪಡುವ ಕೆಲಸ ನಿಮ್ಮಿಂದ ಆದರೆ ಅದಕ್ಕಿಂತ ದೊಡ್ಡ ಜನ್ಮದಿನದ ಉಡುಗೊರೆ ನನಗೆ ಮತ್ತೊಂದಿಲ್ಲ. ಆದಷ್ಟು ಬೇಗ ನಿಮ್ಮನ್ನೆಲ್ಲ ಭೇಟಿ ಆಗುತ್ತೇನೆ. ಎಲ್ಲರಿಗೂ ಹೊಸ ವರ್ಷ ಒಳಿತನ್ನು ತರಲಿ. ನಿಮ್ಮ ಪ್ರೀತಿಯ ಯಶ್'' - ರಾಕಿಂಗ್ ಸ್ಟಾರ್ ಪೋಸ್ಟ್ನಲ್ಲಿರೋದಿಷ್ಟು. ಅಭಿಮಾನಿಗಳ ಸುರಕ್ಷತೆಗೆ ನಟ ಆದ್ಯತೆ ನೀಡಿದ್ದಾರೆ.
ಇದನ್ನೂ ಓದಿ: 'ಅಮ್ಮನ ನೆನಪು, ನಾನಿನ್ನೂ ಸಿನಿಮಾವನ್ನು ಸಂಪೂರ್ಣ ವೀಕ್ಷಿಸಿಲ್ಲ': ಮ್ಯಾಕ್ಸ್ ನಾಯಕ ಸುದೀಪ್