ಭಾರತೀಯ ಸಿನಿಮಾಗಳಲ್ಲಿ ಪ್ರಾಣಿಗಳಿಗೆ ವಿಶೇಷ ಪ್ರಾಧಾನ್ಯತೆ ಇದೆ. ಸಾಕುಪ್ರಾಣಿಗಳನ್ನು ಭಾರತೀಯರು ಬಹುವಾಗಿ ಪ್ರೀತಿಸುತ್ತಾರೆ. ಮಾನವರ ಜೀವನದಲ್ಲಿ ಪ್ರಾಣಿಗಳು ಪ್ರಮುಖ ಪಾತ್ರ ವಹಿಸುತ್ತವೆ. ಇದೇ ಕಾನ್ಸೆಪ್ಟ್ನೊಂದಿಗೆ ಹಲವು ಚಲನಚಿತ್ರಗಳು ಮೂಡಿಬಂದಿವೆ. ಮ್ಯಾಚ್‌ಮೇಕರ್‌ಗಳ ಪಾತ್ರದಿಂದ ಹಿಡಿದು ಜೀವ ಉಳಿಸುವವರೆಗೆ ಮತ್ತು ಸೇಡು ತೀರಿಸಿಕೊಳ್ಳುವವರೆಗೆ, ಪ್ರಾಣಿಗಳು ತಮ್ಮ ವಿಶಿಷ್ಟ ಪಾತ್ರಗಳಿಂದಾಗಿ ಜನಮನ ಗೆದ್ದಿವೆ. ಪ್ರಾಣಿಗಳು ಮುಖ್ಯಭೂಮಿಕೆಯಲ್ಲಿ ನಟಿಸಿ, ಪ್ರೇಕ್ಷಕರ ಮೇಲೆ ಪ್ರಭಾವ ಬೀರಿರುವ ಐದು ಭಾರತೀಯ ಚಲನಚಿತ್ರಗಳ ಕುರಿತಾದ ಮಾಹಿತಿ ಇಲ್ಲಿದೆ..
777 ಚಾರ್ಲಿ : ಕಿರಣ್‌ರಾಜ್ ಕೆ ನಿರ್ದೇಶನದ '777 ಚಾರ್ಲಿ' ಒಂದು ಹೃದಯಸ್ಪರ್ಶಿ ಕಥೆ. ನಾಯಕ ಧರ್ಮನ ಪಾತ್ರವನ್ನು ರಕ್ಷಿತ್ ಶೆಟ್ಟಿ ನಿರ್ವಹಿಸಿದ್ದಾರೆ. ಏಕಾಂಗಿಯಾಗಿ ಜೀವನ ಸಾಗಿಸುತ್ತಿದ್ದ ನಾಯಕನ ಜೀವನದಲ್ಲಿ ಚಾರ್ಲಿ ನಾಯಿಮರಿ ಪ್ರವೇಶಿಸುತ್ತದೆ. ಧರ್ಮನ ಜೀವನವನ್ನು ಸಂತೋಷ, ಉತ್ಸಾಹಭರಿತಗೊಳಿಸುವಲ್ಲಿ ಚಾರ್ಲಿ ಯಶಸ್ವಿಯಾಗುತ್ತದೆ. ಚಾರ್ಲಿ ಚಿತ್ರದ ಭಾವನಾತ್ಮಕ ತಿರುಳು. ಚಾರ್ಲಿ ಜೊತೆಗಿನ ಪ್ರಯಾಣದಲ್ಲಿ ಧರ್ಮ ಪ್ರೀತಿ, ಒಡನಾಟ ಮತ್ತು ಜೀವನದಲ್ಲಿ ಒಂದು ಉದ್ದೇಶ ಹೊಂದುವ ಬಗ್ಗೆ ಕಲಿಯುತ್ತಾನೆ. ಈ ಸಿನಿಮಾ ಅಭೂತಪೂರ್ವ ಯಶಸ್ಸು ಕಂಡಿದೆ. ಸಂಗೀತ ಶೃಂಗೇರಿ, ರಾಜ್ ಬಿ ಶೆಟ್ಟಿ ಮತ್ತು ಬಾಬಿ ಸಿಂಹ ಕೂಡಾ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. '777 ಚಾರ್ಲಿ' ಮನುಷ್ಯ ಮತ್ತು ಶ್ವಾನದ ನಡುವಿನ ಅವಿನಾಭಾವ ಸಂಬಂಧಕ್ಕೆ ಸಂದ ಗೌರವ.
ಹಮ್ ಆಪ್ಕೆ ಹೈ ಕೌನ್ : ಸೂರಜ್ ಬರ್ಜತ್ಯ ನಿರ್ದೇಶನದ ಹಮ್ ಆಪ್ಕೆ ಹೈ ಕೌನ್ ಎಂಬ ಎವರ್ಗ್ರೀನ್ ಫ್ಯಾಮಿಲಿ ಡ್ರಾಮಾದಲ್ಲಿ ಟಫಿ ಎಂಬ ಮುದ್ದಾದ ಪೊಮೆರೇನಿಯನ್ ಶ್ವಾನ ಗಮನ ಸೆಳೆದಿತ್ತು. ಟಫಿ, ನಿಶಾ (ಮಾಧುರಿ ದೀಕ್ಷಿತ್) ಮತ್ತು ಪ್ರೇಮ್ (ಸಲ್ಮಾನ್ ಖಾನ್) ಅವರನ್ನು ಒಂದುಗೂಡಿಸುವ ಕ್ಷಣದಲ್ಲಿ ಕಾಣಿಸಿಕೊಂಡಿತ್ತು.
ಮಾ : ಈ ಚಿತ್ರದಲ್ಲಿ ಡಾಬಿ ಎಂಬ ಶ್ವಾನ ಪ್ರಮುಖ ಪಾತ್ರ ವಹಿಸಿದ್ದು, ಅದು ತನ್ನ ಧೈರ್ಯಕ್ಕೆ ಹೆಸರುವಾಸಿಯಾಗಿದೆ. ನಟಿ ಜಯಪ್ರದಾ ಕಥೆಯ ಅರ್ಧದಾರಿಯಲ್ಲೇ ಕೊನೆಯುಸಿರೆಳೆದು ಭೂತದ ರೂಪದಲ್ಲಿ ಪರದೆಗೆ ಹಿಂತಿರುಗುತ್ತಾಳೆ. ತನ್ನ ಪತಿ ಮತ್ತು ಮಗುವಿಗೆ ರಕ್ಷಕಳಾಗಬಹುದಾದರೂ, ಅಸಹಾಯಕಳಾಗುತ್ತಾಳೆ. ನಂತರ ಈ ಡಾಬಿಯ ಎಂಟ್ರಿ ಆಗುತ್ತದೆ. ಮೃತ ತಾಯಿ (ನಟಿ/ಭೂತ) ನ್ಯಾಯ ದಕ್ಕಿಸಿಕೊಳ್ಳಲು ಮತ್ತು ತನ್ನ ಸಾವಿಗೆ ಸೇಡು ತೀರಿಸಿಕೊಳ್ಳಲು ಡಾಬಿಯ ವಿಶೇಷ ಶಕ್ತಿ ಬಳಸಿಕೊಳ್ಳುತ್ತಾಳೆ. ಭೂತಗಳನ್ನು ನೋಡುವ ವಿಶೇಷ ಶಕ್ತಿ ಶ್ವಾನಗಳಿಗಿದೆ ಎಂಬ ವರದಿಗಳಿದ್ದು, ಡಾಬಿ ಇಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ.
ಇದನ್ನೂ ಓದಿ: ಉದಿತ್ ನಾರಾಯಣ್ ಆಯ್ತು, ಗುರು ರಾಂಧವ ಕಿಸ್ ಕಹಾನಿ ವೈರಲ್: ಗಾಯಕ ಹೇಳಿದ್ದೇನು?
ನಾಗಿನ್ (ನಾಗಿನಾ) : ದಿವಂಗತ ನಟಿ ಶ್ರೀದೇವಿ ನಟಿಸಿದ ನಾಗಿನ್, ಭಾರತೀಯ ಚಿತ್ರರಂಗದ ಅತ್ಯಂತ ಪ್ರಸಿದ್ಧ ಫ್ಯಾಂಟಸಿ ಚಿತ್ರಗಳಲ್ಲಿ ಒಂದಾಗಿದೆ. ಶ್ರೀದೇವಿ ತನ್ನ ಅಸ್ತಿತ್ವಕ್ಕೆ ಬೆದರಿಕೆ ಹಾಕುವವರ ವಿರುದ್ಧ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸುವ ಸರ್ಪ (ಇಚ್ಛಾಧಾರಿ ನಾಗಿನ್) ಪಾತ್ರವನ್ನು ನಿರ್ವಹಿಸಿದ್ದಾರೆ. ಮೈ ತೇರಿ ದುಷ್ಮನ್ ಎಂಬ ಸಾಂಗ್ನಿಂದ ಈ ಸಿನಿಮಾ ಹೆಚ್ಚು ಪ್ರಸಿದ್ಧವಾಗಿದೆ. ಈ ಚಿತ್ರ ಬ್ಲಾಕ್ಬಸ್ಟರ್ ಆಗೋ ಜೊತೆಗೆ ಶ್ರೀದೇವಿ ಅವರ ಸೂಪರ್ ಸ್ಟಾರ್ ಸ್ಥಾನಮಾನವನ್ನು ಭದ್ರಪಡಿಸಿತ್ತು. ಜೊತೆಗೆ ನಿಗಾಹೆನ್ ಎಂಬ ಸೀಕ್ವೆಲ್ ಸಹ ಬಂದಿತು.
ಇದನ್ನೂ ಓದಿ: 'ಜೀವನದ ಅತ್ಯಂತ ಕಠಿಣ ದಿನ': ಸಂಗೀತ ಕಾರ್ಯಕ್ರಮದಲ್ಲಿ ಸೋನು ನಿಗಮ್ ನರಳಾಟ - ವಿಡಿಯೋ
ಹಾಥಿ ಮೇರೆ ಸಾಥಿ : ರಾಜೇಶ್ ಖನ್ನಾ ಮತ್ತು ತನುಜಾ ನಟನೆಯ ಎಮೋಷನಲ್ ಡ್ರಾಮಾದಲ್ಲಿ ರಾಮು ಎಂಬ ಪ್ರೀತಿಯ, ನಿಷ್ಠಾವಂತ ಆನೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿತ್ತು. ರಾಮು ತಮಾಷೆಯ ಸಂಕೇತ ಮಾತ್ರವಲ್ಲದೇ, ದೂರವಾಗಿದ್ದ ದಂಪತಿಯ ಪುನರ್ಮಿಲನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ರಾಮು ಇಬ್ಬರನ್ನೂ ಒಟ್ಟಿಗೆ ಸೇರಿಸಲು ತನ್ನ ಪ್ರಾಣವನ್ನೇ ತ್ಯಾಗ ಮಾಡುತ್ತಾನೆ, ಇದು ಪ್ರೇಕ್ಷಕರಲ್ಲಿ ಕಣ್ಣೀರು ತರಿಸಿದೆ. ಆನೆಗೆ ಸಮರ್ಪಿತವಾದ ಚಲ್ ಚಲ್ ಮೇರೆ ಸಾಥಿ ಹಾಡು ಹಿಟ್ ಸಾಂಗ್ ಆಗಿ ಗುರುತಿಸಿಕೊಂಡಿದೆ.