ಕಾರವಾರ (ಉತ್ತರ ಕನ್ನಡ): ಮನೆಯಲ್ಲಿ ಯಾರೂ ಇಲ್ಲದ ವೇಳೆ ಬೀಗ ಮುರಿದು ಸುಮಾರು 18 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು ಕದ್ದು ಪರಾರಿಯಾಗಿರುವ ಘಟನೆ ನಗರದ ಖುರ್ಸಾವಾಡದ ವಿಜಯನಗರದಲ್ಲಿ ನಡೆದಿದೆ. ನಗರದ ಸ್ಮಿತಾ ಗೋಪಾಲ ಪಾವಸ್ಕರ್ ಎಂಬುವರ ಮನೆಯಲ್ಲಿ ಈ ಕಳ್ಳತನ ನಡೆದಿದೆ.
ಕಳೆದ ಶನಿವಾರ ಬೆಳಗ್ಗೆ 7:30 ರಿಂದ ಭಾನುವಾರ ಸಂಜೆ 7:20ರ ಅವಧಿಯಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಲಾಕ್ ಮುರಿದು ಕಳ್ಳ ಒಳ ನುಗ್ಗಿದ್ದಾನೆ. ಈ ವೇಳೆ ಮನೆಯ ಬೆಡ್‌ರೂಂ ಲಾಕರ್‌ನಲ್ಲಿದ್ದ 18.85 ಲಕ್ಷ ಮೌಲ್ಯದ 357 ಗ್ರಾಂ ಬಂಗಾರದ ಆಭರಣ, 72 ಗ್ರಾಂ ತೂಕದ ಬೆಳ್ಳಿ ಸಾಮಗ್ರಿ ಹಾಗೂ 10 ಸಾವಿರ ರೂಪಾಯಿ ನಗದು ಕದ್ದೊಯ್ದಿದ್ದಾನೆ ಎಂದು ಸ್ಮಿತಾ ಅವರು ಕಾರವಾರ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.
![jewelry-and-cash-stolen-from-home-in Uttar Kannada district](https://etvbharatimages.akamaized.net/etvbharat/prod-images/04-02-2025/kn-kwr-01-kallara-kaichalaka-ka10044_04022025132215_0402f_1738655535_388.jpg)
ಸೆಕ್ಷನ್ 331(3), 331(4), 305 ಬಿಎನ್ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆ ನಡೆಸಿದ್ದಾರೆ. ಕಳ್ಳತನ ನಡೆದ ಮನೆಯ ವ್ಯಾಪ್ತಿಯಲ್ಲಿ ವ್ಯಕ್ತಿಯೋರ್ವ ಅನುಮಾನಾಸ್ಪದವಾಗಿ ಓಡಾಡುತ್ತಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ.
ಈ ಸಂಬಂಧ ಪ್ರಕಟಣೆ ನೀಡಿರುವ ಪೊಲೀಸರು, ಈ ಭಾವಚಿತ್ರದಲ್ಲಿರುವ ಸಂಶಯಾಸ್ಪದ ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತಲ್ಲಿ, ಸಾರ್ವಜನಿಕರು ಈ ಕೆಳಗಿನ ದೂರವಾಣಿ ಸಂಖ್ಯೆಗಳಿಗೆ ಮಾಹಿತಿಯನ್ನು ನೀಡುವಂತೆ ಮನವಿ ಮಾಡಿದ್ದಾರೆ.
ಪೊಲೀಸ್ ಅಧೀಕ್ಷಕರು, ಉತ್ತರ ಕನ್ನಡ ಜಿಲ್ಲೆ ಮೊಬೈಲ್ ಸಂಖ್ಯೆ: 9480805201, ಡಿವೈಎಸ್ಪಿ, ಕಾರವಾರ ಉಪವಿಭಾಗ ಮೊಬೈಲ್ ಸಂಖ್ಯೆ: 9480805220, ಪಿಐ, ಕಾರವಾರ ಶಹರ ಪೊಲೀಸ್ ಠಾಣೆ ಮೊಬೈಲ್ ಸಂಖ್ಯೆ: 9480805230, ಕಾರವಾರ ನಗರ ಪೊಲೀಸ್ ಠಾಣೆ 08382-226333, ಮೊಬೈಲ್ ಸಂಖ್ಯೆ: 9480805290, ಮತ್ತು ಉತ್ತರ ಕನ್ನಡ ಜಿಲ್ಲಾ ಕಂಟ್ರೋಲ್ ರೂಂ 08382-226550/22309 ಸಂಪರ್ಕಿಸಬಹುದು.
ಇದನ್ನೂ ಓದಿ: ಬ್ಯಾಂಕ್ ಗ್ರಾಹಕರ ಸೋಗಿನಲ್ಲಿ ಹಣ ದೋಚುತ್ತಿದ್ದ ಇಬ್ಬರು ಆರೋಪಿಗಳ ಬಂಧನ - ROBBERY CASE