ನವದೆಹಲಿ: ಇತ್ತೀಚೆಗೆ 12 ವರ್ಷಗಳ ನಂತರ ರಣಜಿ ಪಂದ್ಯವನ್ನು ಆಡಿದ್ದ ವಿರಾಟ್ ಕೊಹ್ಲಿಗೆ ಕಹಿ ಅನುಭವವಾಗಿತ್ತು. ರೈಲ್ವೇಸ್ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ದೆಹಲಿ ಪರ ಕಣಕ್ಕಿಳಿದಿದ್ದ ಕೊಹ್ಲಿ, ಹಿಮಾಂಶು ಸಾಂಗ್ವಾನ್ ಎಸೆದ ಬೌಲಿಂಗ್ನಲ್ಲಿ ಕ್ಲೀನ್ ಬೋಲ್ಡ್ ಆಗಿದ್ದರು. ಇದರೊಂದಿಗೆ ಕೇವಲ 6 ರನ್ಗಳಿಗೆ ಪೆವಿಲಿಯನ್ ಸೇರಿಕೊಂಡಿದ್ದರು. ಕೊಹ್ಲಿ ವಿಕೆಟ್ ಪಡೆಯುತ್ತಿದ್ದಂತೆ ಹಿಮಾಂಶು ಸಾಂಗ್ವಾನ್ ಕುರಿತು ಭಾರೀ ಚರ್ಚೆಯಾಗಿದ್ದವು. ವಿಶ್ವದ ಶ್ರೇಷ್ಠ ಬ್ಯಾಟರ್ನನ್ನೇ ಔಟ್ ಮಾಡಿದ ಹಿಮಾಂಶು ಸಾಂಗ್ವಾನ್ಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿತ್ತು.
ಇದೀಗ ಸ್ವತಃ ಸಾಂಗ್ವಾನ್, ವಿರಾಟ್ ಕೊಹ್ಲಿ ವಿಕೆಟ್ ಕುರಿತು ಕೆಲ ಆಸಕ್ತಿಕರ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ರಣಜಿ ಪಂದ್ಯ ಆರಂಭಕ್ಕೂ ಮುನ್ನವೇ ದೆಹಲಿ ಪರ ವಿರಾಟ್ ಕೊಹ್ಲಿ ಮತ್ತು ರಿಷಭ್ ಪಂತ್ ಆಡುತ್ತಿದ್ದಾರೆ ಎಂದು ನಮ್ಮ ತಂಡಕ್ಕೆ ತಿಳಿಸಲಾಗಿತ್ತು. ಆದರೆ ಈ ಪಂದ್ಯವನ್ನು ನೇರ ಪ್ರಸಾರ ಮಾಡಲಾಗುತ್ತಿದೆ ಎಂಬುದು ಮೊದಲಿಗೆ ನಮಗ್ಯಾರಿಗೂ ಗೊತ್ತಿರಲಿಲ್ಲ. ಬಳಿಕ ಈ ಬಗ್ಗೆಯೂ ನಮಗೆ ತಿಳಿಸಲಾಯಿತು.
Virat kohli 2 balls in Domestic cricket after 13 years#viratkohli #kingkohli pic.twitter.com/t6Z3thOaek
— tayyaba Fatima (@Sweetheart_804) January 31, 2025
ಈ ವೇಳೆ ನನ್ನ ಸಹ ಆಟಗಾರರು ಕೊಹ್ಲಿ ಅವರ ವಿಕೆಟ್ ಪಡೆಯುವ ಜವಾಬ್ದಾರಿ ನಿನ್ನ ಮೇಲಿದೆ. ಹೇಗಾದರೂ ಮಾಡಿ ಅವರನ್ನು ಔಟ್ ಮಾಡಬೇಕು ಎಂದು ಹೇಳಿದರು. ಅಲ್ಲದೆ ಅವರ ವಿಕೆಟ್ ಪಡೆಯುವುದು ಹೇಗೆ ಎಂದು ತಂಡದ ಸದಸ್ಯರೆಲ್ಲ ಚರ್ಚಿಸಿದೆವು.
ಬಸ್ ಚಾಲಕನ ಸಲಹೆ : ನನಗೆ ನಮ್ಮ ಸಹ ಆಟಗಾರರು ಮಾತ್ರವಲ್ಲದೆ ಬಸ್ ಚಾಲಕ ಕೂಡ ಸಲಹೆ ನೀಡಿದ್ದರು. ನಾವು ಬಸ್ಸಿನಲ್ಲಿ ಮೈದಾನಕ್ಕೆ ಪ್ರಯಾಣಿಸುತ್ತಿದ್ದಾಗ, ಬಸ್ ಚಾಲಕ ನನ್ನೊಂದಿಗೆ ಮಾತನಾಡುತ್ತ, ನೀವು ವಿರಾಟ್ ಕೊಹ್ಲಿಯನ್ನು ಔಟ್ ಮಾಡಬೇಕಾದರೆ ನಾಲ್ಕನೇ ಅಥವಾ ಐದನೇ ಸ್ಟಂಪ್ ಲೈನ್ನಲ್ಲಿ ಬೌಲಿಂಗ್ ಮಾಡಿ. ಆಗ ಅವರ ವಿಕೆಟ್ ಪಡೆಯಬಹುದು ಎಂದಿದ್ದರು.
Himanshu Sangwan gets ball signed by Virat Kohli❤️#ViratKohli | #RanjiTrophy pic.twitter.com/fu6FK9E2R9
— 𝙒𝙧𝙤𝙜𝙣🥂 (@wrognxvirat) February 2, 2025
ಕೊನೆಯಲ್ಲಿ ನಾನು ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಬೌಲಿಂಗ್ ಮಾಡಿ ವಿರಾಟ್ ಕೊಹ್ಲಿ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದೆ ಎಂದು ಹಿಮಾಂಶು ಸಾಂಗ್ವಾನ್ ತಿಳಿಸಿದರು. ವಿಕೆಟ್ ಬಳಿಕ ಕೊಹ್ಲಿ ಪ್ರತಿಕ್ರಿಯೆ ಕುರಿತು ಮಾತನಾಡಿದ ಅವರು, ನಮ್ಮ ಇನ್ನಿಂಗ್ಸ್ ಮುಗಿದ ಬಳಿಕ ನಾನು ಡ್ರೆಸ್ಸಿಂಗ್ ರೂಂನತ್ತ ಹೋಗುತ್ತಿದ್ದೆ. ಈ ವೇಳೆ ಆಯುಷ್ ಬಡೋನಿ ಮತ್ತು ವಿರಾಟ್ ಜೊತೆಯಾಗಿ ಮೈದಾನಕ್ಕೆ ಬರುತ್ತಿದ್ದರು.
ನಂತರ ಕೊಹ್ಲಿ ಅವರೇ ಸ್ವತಃ ನನ್ನನ್ನು ತಡೆದು ಕೈಕುಲುಕಿ, ನೀವು ತುಂಬಾ ಅದ್ಭುತವಾಗಿ ಬೌಲಿಂಗ್ ಮಾಡಿದ್ದೀರಿ. ನಿಮ್ಮ ಬೌಲಿಂಗ್ ಶೈಲಿಯೂ ಉತ್ತಮವಾಗಿದೆ ಎಂದು ಹುರಿದುಂಬಿಸಿದರು. ನಂತರ ಊಟದ ವಿರಾಮದ ವೇಳೆ ನಿಮ್ಮೊಂದಿಗೆ ಒಂದು ಫೋಟೋ ಬೇಕು ಎಂದು ಕೊಹ್ಲಿಗೆ ಕೇಳಿದೆ. ಅದಕ್ಕೆ ಅವರು ಅವಕಾಶ ಮಾಡಿಕೊಟ್ಟರು ಎಂದು ಹಿಮಾಂಶು ಸಾಂಗ್ವಾನ್ ತಿಳಿಸಿದರು.
ಇದನ್ನೂ ಓದಿ: ಭಾರತ-ಇಂಗ್ಲೆಂಡ್ ಏಕದಿನ ಸರಣಿ: 15 ತಿಂಗಳ ಬಳಿಕ ತಂಡ ಸೇರಿದ ಸ್ಪೋಟಕ ಬ್ಯಾಟರ್!