ETV Bharat / entertainment

'ಬಲರಾಮನ ದಿನಗಳು': ವಿನೋದ್ ಪ್ರಭಾಕರ್​ಗೆ ಜೋಡಿಯಾದ ಪ್ರಿಯಾ ಆನಂದ್ - PRIYA ANAND

ವಿನೋದ್ ಪ್ರಭಾಕರ್ ಅಭಿನಯದ 25ನೇ ಚಿತ್ರದಲ್ಲಿ ಪ್ರಿಯಾ ಆನಂದ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

Priya Anand
ನಟಿ ಪ್ರಿಯಾ ಆನಂದ್ (Photo: Film Poster)
author img

By ETV Bharat Entertainment Team

Published : Jan 1, 2025, 7:02 PM IST

ಕನ್ನಡ ಚಿತ್ರರಂಗದ ಭರವಸೆಯ ನಟ ವಿನೋದ್ ಪ್ರಭಾಕರ್ ಒಂದಾದ ಬಳಿಕ ಒಂದು ಸಿನಿಮಾದ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳು, ಸಿನಿಪ್ರಿಯರಿಗೆ ಮನರಂಜನೆಯ ರಸದೌತಣ ಉಣಬಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಮುಂದಿನ ಬಹು ನಿರೀಕ್ಷಿತ ಚಿತ್ರ 'ಬಲರಾಮನ ದಿನಗಳು'.

ಪದ್ಮಾವತಿ ಫಿಲ್ಮ್ಸ್ ಲಾಂಛನದಲ್ಲಿ ಪದ್ಮಾವತಿ ಜಯರಾಂ ಹಾಗೂ ಶ್ರೇಯಸ್ ಅವರು ಅಪಾರ ವೆಚ್ಚದಲ್ಲಿ ಅದ್ಧೂರಿಯಾಗಿ ನಿರ್ಮಿಸುತ್ತಿರುವ ಹಾಗೂ ಆ ದಿನಗಳು ಖ್ಯಾತಿಯ ಕೆ‌.ಎಂ.ಚೈತನ್ಯ ನಿರ್ದೇಶನದಲ್ಲಿ ಬರುತ್ತಿರುವ ಈ ಚಿತ್ರದಲ್ಲಿ ವಿನೋದ್ ಪ್ರಭಾಕರ್ ನಾಯಕರಾಗಿ ನಟಿಸುತ್ತಿದ್ದಾರೆ. ಇದು ವಿನೋದ್ ಪ್ರಭಾಕರ್ ಅಭಿನಯದ 25ನೇ ಚಿತ್ರ ಕೂಡಾ ಹೌದು.

ಬಹುನಿರೀಕ್ಷಿತ "ಬಲರಾಮನ ದಿನಗಳು" ಚಿತ್ರಕ್ಕೆ ಪ್ರಿಯಾ ಆನಂದ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ರಾಜಕುಮಾರ, ಜೇಮ್ಸ್, ಆರೆಂಜ್, ಕರಟಕ ದಮನಕದಂತಹ ಯಶಸ್ವಿ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿ ಪ್ರಿಯಾ ಆನಂದ್ ಜನಪ್ರಿಯರಾಗಿದ್ದಾರೆ. ಹೊಸ ವರ್ಷದಂದು ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ನಾಯಕಿ ಪ್ರಿಯಾ ಆನಂದ್ ಅವರನ್ನು ಚಿತ್ರತಂಡ ಸ್ವಾಗತಿಸಿದೆ.

Priya Anand
ಪ್ರಿಯಾ ಆನಂದ್ ಇನ್​ಸ್ಟಾ ಸ್ಟೋರಿ (Photo: Film Poster)

"ಬಲರಾಮನ ದಿನಗಳು" 1980ರ ಕಾಲಘಟ್ಟದಲ್ಲಿ ನಡೆಯುವ ಕಥೆಯಾಗಿದೆ. ಇತ್ತೀಚೆಗಷ್ಟೇ ವಿನೋದ್ ಪ್ರಭಾಕರ್ ಅವರ ಹುಟ್ಟುಹಬ್ಬಕ್ಕೆ ಫಸ್ಟ್ ಲುಕ್ ಬಿಡುಗಡೆಯಾಗಿತ್ತು. ಫಸ್ಟ್ ಲುಕ್​ಗೆ ಫಿದಾ ಆಗಿದ್ದ ಅಭಿಮಾನಿಗಳು ಚಿತ್ರದ ಅಪ್ಡೇಟ್ಸ್​ಗಾಗಿ ಕಾತರರಾಗಿದ್ದರು.

ಇದನ್ನೂ ಓದಿ: ತಂದೆ ನೋಡಿ ಗಳಗಳನೇ ಕಣ್ಣೀರಿಟ್ಟ ಉಗ್ರಂ ಮಂಜು: ಅಕ್ಕನನ್ನು ಗುರುತಿಸಲಾಗದ ಪರಿಸ್ಥಿತಿಯಲ್ಲಿ ಮೋಕ್ಷಿತಾ ತಮ್ಮ

ಅಟ್ಟಕತ್ತಿ, ಕಾಲ, ಕಬಾಲಿ, ಭೈರವ, ದಸರಾ, ಕಲ್ಕಿ ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳಿಗೆ ಸಂಗೀತ ನೀಡಿರುವ ಭಾರತದ ಖ್ಯಾತ ಜನಪ್ರಿಯ ಸಂಗೀತ ನಿರ್ದೇಶಕ ಸಂತೋಷ್ ನಾರಾಯಣನ್ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಇದು ಅವರು ಸಂಗೀತ ಸಂಯೋಜಿಸುತ್ತಿರುವ 51ನೇ ಸಿನಿಮಾ ಹಾಗೂ ಕನ್ನಡದ ಮೊದಲ ಚಿತ್ರವಾಗಿದೆ.

ಇದನ್ನೂ ಓದಿ: ನಿರ್ದೇಶಕಿಯಾದ 'ಕನ್ನಡತಿ' ರಂಜನಿ ರಾಘವನ್​: ಸಂಗೀತ ಮಾಂತ್ರಿಕ ಇಳಯರಾಜರಿಗೂ ಹಿಡಿಸಿತು ಕಥೆ

ಈಗಾಗಲೇ ಎರಡು ಹಂತಗಳ ಚಿತ್ರೀಕರಣ ನಡೆದಿದೆ. ಜನವರಿ 15ರಿಂದ ಮೂರನೇ ಹಂತದ ಚಿತ್ರೀಕರಣ ಆರಂಭವಾಗಲಿದೆ‌.‌ ಹೀಗೆ ಸಾಕಷ್ಟು ವಿಶೇಷಗಳನ್ನೊಳಗೊಂಡಿರುವ ಹಾಗೂ ಆರಂಭದಿಂದಲೇ ಸಾಕಷ್ಟು ಕುತೂಹಲ ಮೂಡಿಸಿರುವ "ಬಲರಾಮನ ದಿನಗಳು" ಚಿತ್ರದ ಕುರಿತು ಮತ್ತಷ್ಟು ಮಾಹಿತಿಯನ್ನು ಮುಂದಿನ ದಿನಗಳಲ್ಲಿ ಹಂಚಿಕೊಳ್ಳುವುದಾಗಿ ನಿರ್ಮಾಪಕ ಶ್ರೇಯಸ್ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.