ಕನ್ನಡದ ಅತ್ಯಂತ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್ನ ಮೊದಲ ವಾರಾಂತ್ಯದ ಎಪಿಸೋಡ್ ಪ್ರಸಾರಕ್ಕೆ ಕ್ಷಣಗಣನೆ ಆರಂಭವಾಗಿದೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಕಾರ್ಯಕ್ರಮ ಪ್ರಸಾರ ಆಗಲಿದ್ದು, ಹೊಸ ಪ್ರೋಮೋ ಪ್ರೇಕ್ಷಕರ ಕುತೂಹಲ ಕೆರಳಿಸಿದೆ.
''ಜಗದೀಶ್ ಕಿರಿಕ್ಗೆ ಕಿಚ್ಚನ ಖಡಕ್ ಸಂದೇಶ! ವಾರದ ಕತೆ ಕಿಚ್ಚನ ಜೊತೆ, ಇಂದು ರಾತ್ರಿ 9ಕ್ಕೆ'' ಎಂಬ ಶೀರ್ಷಿಕೆಯಡಿ ಪ್ರೋಮೋ ಅನಾವರಣಗೊಂಡಿದೆ.
ಜಗದೀಶ್, ನೀವ್ ಹೇಳಿ ನಮ್ಗೆ ಶೋ ಹೇಗೆ ನಡೆಸಿಕೊಡಬೇಕು ಅಂತಾ? ಎಂದು ಸುದೀಪ್ ಪ್ರಶ್ನಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಲಾಯರ್, ನಿಮ್ಮದು ಕರೆಕ್ಟ್ ಇದೆ, ನಿಮ್ದೇನು ತಪ್ಪಿಲ್ಲಾ ಅಂತಾ ಉತ್ತರಿಸಿದ್ದಾರೆ. ಅದಕ್ಕೆ ನಗುತ್ತಲೇ ಹೆಮ್ಮೆಯಿಂದ ಪ್ರತಿಕ್ರಿಯಿಸಿದ ನಟ ಖಡಾಖಂಡಿತವಾಗಿಯೂ ಸರಿ ಇದೆ. ಇಲ್ಲಾ ಅಂದಿದ್ರೆ ನನ್ ಮಗಂದ್ ಹನ್ನೊಂದನೇ ಸೀಸನ್ವರೆಗೆ ಬರೋಕ್ಕೆ ಆಗ್ತಿರಲಿಲ್ಲ ಅಂತಾ ಹೇಳ್ತಿದ್ದಂತೆ ಮನೆ ಮಂದಿ ಜೋರಾಗಿ ಚಪ್ಪಾಳೆ ತಟ್ಟಿದ್ದಾರೆ. ಕ್ಯಾಮರಾ ಮುಂದೆ ಬಿಗ್ ಬಾಸ್ಗೆ ಚಾಲೆಂಜ್ ಮಾಡಿದ್ರಲ್ವಾ?, ಅದು ತಪ್ಪೇ ಅಲ್ಲಾ ಸರ್. ದಟ್ ವಾಸ್ ಅ ಜೋಕ್ ಎಂದು ತಿಳಿಸಿದ್ದಾರೆ. ಜಗದೀಶ್ ದನಿಯಿಂದ ಕಿರಿಕಿರಿ ಅನುಭವಿಸಿದ್ದ ಮನೆಮಂದಿ ಕಿಚ್ಚನ ಮಾತಿನಿಂದ ಬಹಳ ಸಂತಸಗೊಂಡರು. ಖುಷಿ ಮುಗಿಲು ಮುಟ್ಟಿತ್ತು. ಬಿಗ್ ಬಾಸ್ ಅದ್ಭುತವಾದಂತಹ ಒಂದು ಶೋ. ಇಂಪ್ರೂ ಮಾಡುವಂತಹ ಸಾಧ್ಯತೆ ನಿಮ್ಮ ಕೈಯಲ್ಲಿದೆ. ಹಾಳ್ ಮಾಡೋಕೆ ನಿಮ್ಮ ಅಪ್ಪನಾಣೆ ಸಾಧ್ಯವಿಲ್ಲ.
ಇದನ್ನೂ ಓದಿ:ಸಲ್ಮಾನ್ ಖಾನ್ ತ್ರಿಬಲ್ ರೋಲ್: ನಟನ ಕೋಪಕ್ಕೆ ಕಾರಣವೇನು? ನೋಡಿ ಬಿಗ್ ಬಾಸ್ ಹಿಂದಿ 18 ಪ್ರೋಮೋ - Bigg Boss Hindi 18 Promo
ಕಾರ್ಯಕ್ರಮ ಶುರುವಾದಾಗಿನಿಂದ ಲಾಯರ್ ಜಗದೀಶ್ ಅವರ ದನಿ ಬಹಳ ಜೋರಾಗೇ ಇತ್ತು. ಮನೆಯಲ್ಲಿ ಕಿರಿಕ್ ವಾತಾವರಣ ಸೃಷ್ಟಿಯಾಗಿದೆ ಎಂಬ ಮಾತುಗಳೂ ಕೇಳಿಬಂದಿದ್ದವು. ನಾನೇ ಬಿಗ್ ಬಾಸ್ ಅಂತಾ ಹೇಳಿಕೊಂಡಿದ್ದು ಮಾತ್ರವಲ್ಲದೇ, ಬಿಗ್ ಬಾಸ್ ಅನ್ನೇ ಎಕ್ಸ್ ಪೋಸ್ ಮಾಡುತ್ತೇನೆಂದು ಕ್ಯಾಮರಾದೆದುರು ಗುಡುಗಿದ್ದರು. ಮನೆಮಂದಿ ಬಳಿ ತೀವ್ರ ವಾಗ್ವಾದಕ್ಕಿಳಿದಿದ್ದರು. ಲಾಯರ್ ಹೇಳಿಕೆಗಳು ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿತ್ತು. ಈ ಬಗ್ಗೆ ಸಾಕಷ್ಟು ಚರ್ಚೆಯಾಗಿ, ಇಂದು ಅವರಿಗೆ ಕಿಚ್ಚನ ಕ್ಲಾಸ್ ಸಿಗೋದು ಪಕ್ಕಾ ಅಂತಾ ಬಹುತೇಕರು ಅಂದಾಜಿಸಿದ್ದರು.
ಇದನ್ನೂ ಓದಿ:ಬಿಗ್ ಬಾಸ್ ಅನ್ನೇ ಕೆಣಕಿದ ಲಾಯರ್ ಜಗದೀಶ್! ಅಂತು ಇಂತೂ ಆಯ್ತು ಸುದೀಪ್ ಎಂಟ್ರಿ - Sudeep class to Lawyer Jagdish
ಅದರಂತೆ ಇದೀಗ ಅನಾವರಣಗೊಂಡಿರುವ ಪ್ರೋಮೋ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಪ್ರೋಮೋಗೆ ಪ್ರತಿಕ್ರಿಯಿಸಿರುವ ಸಾಮಾಜಿಕ ಜಾಲತಾಣ ಬಳಕೆದಾರರೋರ್ವರು, ''ಇದು…ಇದು… ಇದು ಬೇಕಾಗಿರೋದು, ಈ ಎಪಿಸೋಡ್ಗಾಗಿ ಕಾತುರದಿಂದ ಕಾಯುತ್ತಿದ್ದೇವೆ'' ಎಂದು ತಿಳಿಸಿದ್ದಾರೆ. 'ಇದು ಕಿಚ್ಚ ಪವರ್' ಅಂತಾ ಓರ್ವರು ಕಾಮೆಂಟ್ ಮಾಡಿದ್ರೆ, ಅದಕ್ಕೆ ಮತ್ತೋರ್ವರು 'ನಮ್ಮ ಬಾಸ್ ಅಂದ್ರೆ ಹಾಗೇನೇ ಗುರು' ಎಂದು ಪ್ರತಿಕ್ರಿಯಿಸಿದ್ದಾರೆ. 'ಏನ್ ಗುರು ಸುದೀಪ್ ಅಣ್ಣನ ಮಾತುಗಳು' ಎಂದು ನೆಟ್ಟಿಗರೊರ್ವರು ಪ್ರತಿಕ್ರಿಯಿಸಿದ್ದಾರೆ. ಹೀಗೆ ಸುದೀಪ್ ಮಾತುಗಳಿಗೆ ಮೆಚ್ಚುಗೆ ಮಾತುಗಳು ಸಿಕ್ಕಿವೆ.