ETV Bharat / state

Watch video: ಬಂಡೀಪುರದ ರಸ್ತೆಯಲ್ಲಿ ಆನೆ ಓಡಾಟ - ವಾಹನ ಸವಾರರ ಪರದಾಟ - ELEPHANT

ಬಂಡೀಪುರ ರಸ್ತೆಯಲ್ಲಿ ಕಾಡಾನೆಯೊಂದು ಓಡಾಟ ನಡೆಸಿದ್ದರಿಂದಾಗಿ ವಾಹನ ಸವಾರರು ಪರದಾಡಿದ್ದಾರೆ.

elephant-road-crossing-visual-viral-in-bandipur
ಬಂಡೀಪುರದ ರಸ್ತೆಯಲ್ಲಿ ಆನೆ ಓಡಾಟ (ETV Bharat)
author img

By ETV Bharat Karnataka Team

Published : Jan 19, 2025, 1:19 PM IST

ಚಾಮರಾಜನಗರ : ಕಾಡಾನೆಯೊಂದು ರಸ್ತೆಗಿಳಿದ ಪರಿಣಾಮ ವಾಹನ ಸವಾರರು ಪರದಾಡಿದ ಘಟನೆ ಜನಪ್ರಿಯ ಹುಲಿ ರಕ್ಷಿತಾರಣ್ಯಗಳಲ್ಲಿ ಒಂದಾಗಿರುವ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಶನಿವಾರ ರಾತ್ರಿ ನಡೆದಿದೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಗೂಡಲೂರು ಸೇರಿ ವಿವಿಧೆಡೆಗೆ ತೆರಳುವ ಮತ್ತು ತರಕಾರಿ ಹೊತ್ತು ಬರುವ ತುಂಬಿದ ವಾಹನಗಳು, ಲಾರಿಗಳಿಗಾಗಿ ಕಾಡಾನೆ ರಸ್ತೆಗಳಿಯುತ್ತಿದೆ.

ಬಂಡೀಪುರದ ರಸ್ತೆಯಲ್ಲಿ ಆನೆ ಓಡಾಟ (ETV Bharat)

ಊಟಿಗೆ ತೆರಳುತ್ತಿದ್ದವರೂ ಕೂಡ ಆನೆ ರಸ್ತೆಗಿಳಿದ ಪರಿಣಾಮ ಪರದಾಡಿದ್ದು, ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಆಹಾರ ಅರಸಿ ರಸ್ತೆಗಿಳಿದ ಕಾಡಾನೆ ಕಂಡು ವಾಹನ ಸವಾರರು ಗಲಿಬಿಲಿಗೊಂಡಿದ್ದಾರೆ.

ಒಟ್ಟಿನಲ್ಲಿ ಚಾಮರಾಜನಗರ - ಬಣ್ಣಾರಿ ನಡುವಿನ ರಸ್ತೆಗಿಳಿಯುವ ಕಾಡಾನೆ ರೀತಿ ಈಗ ಬಂಡೀಪುರದಲ್ಲೂ ಕೂಡ ಆನೆ ರಸ್ತೆಗಿಳಿಯುತ್ತಿರುವುದು ವಾಹನ ಸವಾರರಿಗೆ ಆತಂಕ ತರಿಸಿದೆ‌.

ಇದನ್ನೂ ಓದಿ : ಬಂಡೀಪುರದಲ್ಲಿ ಆನೆ ಮೇಲೆ ದಾಳಿಗೆ ವಿಫಲ ಯತ್ನ; ಕೆ.ಗುಡಿಯಲ್ಲಿ ಬಿಸಿಲಿಗೆ ಮೈಯೊಡ್ಡಿದ ಹುಲಿ- ವಿಡಿಯೋ ನೋಡಿ - TIGER ATTACKS ELEPHANT

ETV Bharat Logo

Copyright © 2025 Ushodaya Enterprises Pvt. Ltd., All Rights Reserved.