ETV Bharat / bharat

ಬೈಕ್​ ಆಯ್ತು ಹಿಟ್ಟಿನ ಗಿರಣಿ: ತೆಲಂಗಾಣ ಯುವಕನ ಹೊಸ ಐಡಿಯಾ; ಕರೆಂಟ್​ ಸಮಸ್ಯೆಗೆ ಮುಕ್ತಿ - MOTORCYCLE MOBILE FLOUR MILL

ಪದೇ ಪದೆ ಎದುರಾಗುತ್ತಿದ್ದ ವಿದ್ಯುತ್​ ಸಮಸ್ಯೆಯನ್ನೇ ಸವಾಲಾಗಿ ಸ್ವೀಕರಿಸಿದ ಯುವಕರೊಬ್ಬರು ತಮ್ಮ ಬೈಕ್​ ಅನ್ನೇ ಹಿಟ್ಟಿನ ಗಿರಣಿಯನ್ನಾಗಿ ಪರಿವರ್ತಿಸಿದ್ದಾರೆ.

Syed Majid Ali of Asifabad Telangana with his innovative flour mill
ಹಿಟ್ಟಿನ ಗಿರಣಿಯೊಂದಿಗೆ ತೆಲಂಗಾಣದ ಆಸಿಫಾಬಾದ್‌ನ ಸೈಯದ್ ಮಜೀದ್ ಅಲಿ (Social media)
author img

By ETV Bharat Karnataka Team

Published : Jan 19, 2025, 3:57 PM IST

ಆಸಿಫಾಬಾದ್, ತೆಲಂಗಾಣ​: ಮನಸ್ಸಿದ್ದರೆ ಮಾರ್ಗ ಎಂಬಂತೆ ಯುವಕನೊಬ್ಬ ನಿತ್ಯ ಕಾಡುತ್ತಿದ್ದ ಸಮಸ್ಯೆಗೆ ಮುಕ್ತಿ ಹಾಡಿ, ವಿನೂತನ ಪ್ರಯೋಗದ ಮೂಲಕ ಗಮನ ಸೆಳೆದಿದ್ದಾನೆ. ಪದೇ ಪದೆ ಆಗುವ ವಿದ್ಯುತ್​ ಕಡಿತದ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ತೆಲಂಗಾಣದ ಆಸಿಫಾಬಾದ್​ನ ಯುವಕನೊಬ್ಬ ತಮ್ಮ ಮೋಟಾರ್​ ಸೈಕಲ್​ ಅನ್ನು ಮೊಬೈಲ್​ ಹಿಟ್ಟಿನ ಗಿರಣಿಯನ್ನಾಗಿ ಪರಿವರ್ತಿಸಿದ್ದಾರೆ.

ಆಸಿಫಾಬಾದ್​ ಪಟ್ಟಣದ ಸೈಯದ್​ ಮಜೀದ್​ ಅಲಿ ಯಾವುದೇ ಅಡೆತಡೆಗಳಿಲ್ಲದೇ ಸೇವೆ ಒದಗಿಸುವ ನಿಟ್ಟಿನಲ್ಲಿ ತಮ್ಮ ಸೃಜನಾತ್ಮಕತೆಗೆ ಕೆಲಸ ಕೊಟ್ಟಿದ್ದಾರೆ. ತಮ್ಮ ಬೈಕ್​ನ ಸೀಟಿನ ಮೇಲೆ ಹಿಟ್ಟಿನ ಗಿರಣಿಯನ್ನು ಜೋಡಿಸಿ, ಹಿಂಭಾಗದ ಟೈರ್​ಗೆ ಬೆಲ್ಟ್​ ಜೋಡಿಸಿ ಬೈಕ್​ ಚಲಿಸುವಾಗ ಗಿರಣಿ ತಿರುಗಿ ಕೆಲಸ ಮಾಡುವಂತೆ ಮಾಡಿದ್ದಾರೆ.

ಕರೆಂಟ್​ ಗೊಡವೆ ಇಲ್ಲ: ತಮ್ಮ ಚಾಕಚಕ್ಯತೆ ಉಪಯೋಗಿಸಿಕೊಂಡು ಮಾಡಿರುವ ಈ ವ್ಯವಸ್ಥೆಯಿಂದ ಮಜೀದ್​ ಅವರಿಗೆ ಪಟ್ಟಣ ಹಾಗೂ ನೆರೆಯ ಹಳ್ಳಿಗಳಿಗೆ ಹೋಗಿ ತನ್ನ ಮೂವಿಂಗ್​ ಗಿರಣಿ ಯಿಂದ ಹಿಟ್ಟು ಹಾಕಿ ಕೊಡಲು ಸಹಾಯವಾಗುತ್ತದೆ. ಈ ಮೊಬೈಲ್​ ಹಿಟ್ಟಿನ ಗಿರಣಿಯು ಸ್ಥಳೀಯವಾಗಿ ವಿಶೇಷವಾಗಿ ಗ್ರಾಮಗಳ ಒಳ ಪ್ರದೇಶಗಳಲ್ಲಿ ಜನಪ್ರಿಯವಾಗಿದೆ. ತಾಜಾ ಹಿಟ್ಟು ನೇರವಾಗಿ ಮನೆ ಬಾಗಿಲಿಗೆ ತಲುಪುವ ಕಾರಣ ನಿವಾಸಿಗಳಿಗೂ ಇದು ಆತ್ಮೀಯವಾಗಿದೆ.

ಮನೆ ಬಾಗಿಲಕ್ಕೆ ಹಿಟ್ಟಿನ ಗಿರಣಿ, ಜನರು ಫಿದಾ: ಸಾಂಪ್ರದಾಯಿಕ ವಿದ್ಯುತ್​ ಚಾಲಿತ ಗಿರಣಿಗಳಿಗೆ ವಿರುದ್ಧವಾಗಿ ಮಜೀದ್​ ಅವರು ತಯಾರಿಸಿದ ಹೊಸ ವಿಧಾನ ಹಿಟ್ಟಿನ ಗಿರಣಿ ಅನುಕೂಲಕರ ಹಾಗೂ ಪರಿಣಾಮಕಾರಿಯಾಗಿದೆ. ಈ ಹಿಂದೆ ಮಜೀದ್​ ಟ್ರ್ಯಾಕ್ಟರ್​ನಲ್ಲಿ ಹಿಟ್ಟಿನ ಗಿರಣಿಯನ್ನು ಸೆಟ್​ ಮಾಡಿದ್ದರು. ಆದರೆ ಟ್ರ್ಯಾಕ್ಟರ್​ ಓಡಿಸಲು ಬೇಕಾಗುವ ವೆಚ್ಚ ತುಂಬಾ ಹೆಚ್ಚಿದ್ದ ಕಾರಣ ಅವರು ಗಿರಣಿಗೆ ಬೈಕ್​ ಅನ್ನು ಆಯ್ಕೆ ಮಾಡಿದರು.

ಈ ನೂತನ ಪ್ಲ್ಯಾನ್​ ಮಜೀದ್​ ಅವರ ಚಾಕಚಕ್ಯತೆ ಹಾಗೂ ಅವರ ಕಾಯಕದ ಮೇಲಿನ ಬದ್ಧತೆಗೆ ಹಿಡಿದ ಕೈಗನ್ನಡಿಯಾಗಿದೆ. ಈ ನೂತನ ಯೋಜನೆಯಿಂದಾಗಿ ಮಜೀದ್​ ನೇರವಾಗಿ ಗ್ರಾಹಕರ ಮನೆಗೆ ಸೇವೆ ತಲುಪಿಸುವಂತಾಗಿದೆ. ಮಾತ್ರವಲ್ಲದೇ ಗ್ರಾಹಕರು ಗಿರಣಿ ವರೆಗೆ ಬರುವ ಸಮಸ್ಯೆಯನ್ನು ಇಲ್ಲದಾಗಿಸಿದೆ.

ಗಿರಣಿ ಇದ್ದಲ್ಲಿಗೆ ಹೋಗಿ ಕಾಯುವ ಪ್ರಮೇಯವೇ ಇಲ್ಲ: ಮಜೀದ್​ ಅವರ ಈ ಪ್ರಯತ್ನದಿಂದ ಜನರೀಗ ಗಿರಣಿಗಳಿಗಾಗಿ ಅಲೆಯುವುದು ಹಾಗೂ ಅಲ್ಲಿ ಹೋಗಿ ಗಂಟೆ ಗಟ್ಟಲೆ ಕಾಯುವುದನ್ನು ತಪ್ಪಿಸಿದೆ. ಮನೆ ಬಾಗಿಲಲ್ಲೇ ತಮಗೆ ಬೇಕಾದಷ್ಟು ಕಾಳು- ಕಡಿಗಳನ್ನು ಹಿಟ್ಟು ಮಾಡಿಸಿಕೊಂಡು ಗ್ರಾಹಕರು ಓಡಾಟದ ತಾಪತ್ರಯ ತಪ್ಪಿಸಿಕೊಂಡಿದ್ದಾರೆ.

ಇದನ್ನೂ ಓದಿ: ಪಂಜರ ಮೀನು ಕೃಷಿಯಲ್ಲಿ ಮೇರು ಸಾಧನೆ: ಗಣತಂತ್ರದ ದಿನ ರಾಷ್ಟ್ರಪತಿಗಳಿಂದ ಸನ್ಮಾನಿಸಲು ಪ್ರಗತಿಪರ ರೈತನಿಗೆ ಆಹ್ವಾನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.