ETV Bharat / bharat

ತೆಂಕಾಸಿಯಲ್ಲಿ ಭಾರಿ ಮಳೆ: ಕುಟ್ರಾಲಂ ಜಲಾಶಯಕ್ಕೆ ಪ್ರವಾಸಿಗರಿಗೆ ನಿರ್ಬಂಧ - HEAVY RAIN

ತಮಿಳುನಾಡಿನ ಕೆಲ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ.

ತ.ನಾಡಿನ ತೆಂಕಾಸಿಯಲ್ಲಿ ಭಾರಿ ಮಳೆ: ಕುಟ್ರಾಲಂ ಜಲಾಶಯಕ್ಕೆ ಪ್ರವಾಸಿಗರಿಗೆ ನಿರ್ಬಂಧ
ತ.ನಾಡಿನ ತೆಂಕಾಸಿಯಲ್ಲಿ ಭಾರಿ ಮಳೆ: ಕುಟ್ರಾಲಂ ಜಲಾಶಯಕ್ಕೆ ಪ್ರವಾಸಿಗರಿಗೆ ನಿರ್ಬಂಧ (ians)
author img

By ETV Bharat Karnataka Team

Published : Jan 19, 2025, 12:50 PM IST

ಚೆನ್ನೈ: ತಮಿಳುನಾಡಿನ ತೆಂಕಾಸಿ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ಪ್ರಸಿದ್ಧ ಕುಟ್ರಾಲಂ ಜಲಪಾತ ಪ್ರದೇಶದಲ್ಲಿ ಜಿಲ್ಲಾಡಳಿತವು ಹಲವಾರು ನಿರ್ಬಂಧಗಳನ್ನು ವಿಧಿಸಿದೆ. ಕುಟ್ರಾಲಂನ ಐದು ಜಲಪಾತಗಳು ಎಂದೂ ಕರೆಯಲ್ಪಡುವ ಮುಖ್ಯ ಜಲಪಾತ ಮತ್ತು ಐಂತರುವಿಯಲ್ಲಿ ಪ್ರವಾಸಿಗರು ಸ್ನಾನ ಮಾಡುವುದನ್ನು ನಿಷೇಧಿಸಲಾಗಿದೆ. ಕುಟ್ಟಲಂ ಜಲಪಾತ ಎಂದೂ ಕರೆಯಲ್ಪಡುವ ಈ ಜಲಪಾತವು ಕೇರಳದ ಕೊಲ್ಲಂ ಜಿಲ್ಲೆಯ ಗಡಿಯಲ್ಲಿರುವ ಪಶ್ಚಿಮ ಘಟ್ಟಗಳ ಸನಿಹದಲ್ಲಿದೆ.

ಈ ಪ್ರದೇಶದಲ್ಲಿ ಒಟ್ಟು ಒಂಬತ್ತು ಜಲಪಾತಗಳಿದ್ದು ಇವುಗಳಲ್ಲಿ ಪೆರರುವಿ, ಐಂತರುವಿ ಮತ್ತು ಪುಲಿ ಅರುವಿ ಪ್ರಮುಖವಾಗಿವೆ. ಈ ಗಮ್ಯಸ್ಥಾನವು ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾಗಿದ್ದು, ಇಲ್ಲಿಗೆ ಅತ್ಯಧಿಕ ಸಂಖ್ಯೆಯ ಪ್ರವಾಸಿಗರು ಆಗಮಿಸುತ್ತಾರೆ. ತಮಿಳುನಾಡು ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಟಿಟಿಡಿಸಿ) ಪ್ರವಾಸಿ ಋತುವಿನಲ್ಲಿ ಇಲ್ಲಿಗೆ ಹತ್ತಿರದ ದೋಣಿಮನೆಯಲ್ಲಿ ಬೋಟಿಂಗ್ ಸೌಲಭ್ಯವನ್ನು ಸಹ ನಿರ್ವಹಿಸುತ್ತದೆ.

ಆದರೆ, ಶನಿವಾರ ರಾತ್ರಿಯಿಂದ ಸುರಿಯುತ್ತಿರುವ ನಿರಂತರ ಮತ್ತು ಭಾರಿ ಮಳೆಯಿಂದಾಗಿ, ಕುಟ್ರಾಲಂ ಜಲಪಾತದಲ್ಲಿ ನೀರಿನ ಹರಿವು ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗಿದೆ.

ತಮಿಳುನಾಡು ಕರಾವಳಿಯ ನೈಋತ್ಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಭಾರಿ ಮಳೆ ಸುರಿಯುತ್ತಿದೆ ಎಂದು ಪ್ರಾದೇಶಿಕ ಹವಾಮಾನ ಕೇಂದ್ರ (ಆರ್ ಎಂಸಿ) ತಿಳಿಸಿದೆ. ಕನ್ಯಾಕುಮಾರಿ, ತಿರುನೆಲ್ವೇಲಿ, ತೂತುಕುಡಿ, ರಾಮನಾಥಪುರಂ ಮತ್ತು ತೆಂಕಾಸಿ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಭಾನುವಾರ ಕೂಡ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ಹವಾಮಾನ ವೈಪರೀತ್ಯ ಉಂಟಾಗಿರುವುದರಿಂದ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚಿಸಲಾಗಿದೆ. ಮುಂದಿನ ಎರಡು ದಿನಗಳಲ್ಲಿ ದಕ್ಷಿಣ ತಮಿಳುನಾಡು ಕರಾವಳಿ, ಕೊಮೊರಿನ್ ಪ್ರದೇಶ ಮತ್ತು ಪಕ್ಕದ ಮನ್ನಾರ್ ಕೊಲ್ಲಿಯಲ್ಲಿ ಗಂಟೆಗೆ 35 - 45 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ನಿರೀಕ್ಷೆಯಿದೆ. ಅಕ್ಟೋಬರ್ 1 ರಂದು ಪ್ರಾರಂಭವಾದ ಈಶಾನ್ಯ ಮಾನ್ಸೂನ್ ಈವರೆಗೂ ತಮಿಳುನಾಡಿನಿಂದ ಸಂಪೂರ್ಣವಾಗಿ ಹಿಂದೆ ಸರಿದಿಲ್ಲ ಎಂದು ಹವಾಮಾನ ಅಧಿಕಾರಿಗಳು ಹೇಳಿದ್ದಾರೆ.

ಚೆನ್ನೈ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲಿ ಗುಡುಗು ಸಹಿತ ಹಗುರದಿಂದ ಮಧ್ಯಮ ಮಳೆಯಾಗುವ ನಿರೀಕ್ಷೆಯಿದೆ. ಜನವರಿ 23 ರವರೆಗೆ ತಮಿಳುನಾಡಿನಲ್ಲಿ ಸರಾಸರಿಗಿಂತ ಹೆಚ್ಚಿನ ಮಳೆಯಾಗಲಿದೆ ಎಂದು ಆರ್ ಎಂಸಿ ಮುನ್ಸೂಚನೆ ನೀಡಿದೆ. ಜನವರಿ 17 ರಿಂದ 23 ರವರೆಗೆ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-4 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗುವ ನಿರೀಕ್ಷೆಯಿದೆ. ಈ ಅವಧಿಯಲ್ಲಿ 26 ಡಿಗ್ರಿ ಮತ್ತು 32 ಡಿಗ್ರಿಗಳ ನಡುವೆ ತಾಪಮಾನ ಇರಲಿದೆ.

ಇದನ್ನೂ ಓದಿ : ಸೈಫ್ ಅಲಿ ಖಾನ್ ಮೇಲೆ ಚಾಕು ಇರಿತ ಪ್ರಕರಣ: ಆರೋಪಿ ಅರೆಸ್ಟ್, ಬಾಂಗ್ಲಾದೇಶದಿಂದ ಅಕ್ರಮವಾಗಿ ಬಂದಿರುವ ಶಂಕೆ - SAIF ALI KHAN ATTACK CASE

ETV Bharat Logo

Copyright © 2025 Ushodaya Enterprises Pvt. Ltd., All Rights Reserved.