ಮುಂಬೈ (ಮಹಾರಾಷ್ಟ್ರ): ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಮೇಲೆ ಹಲ್ಲೆ ನಡೆಸಿದ ನಂತರ ಶಂಕಿತ ಆರೋಪಿ ಇಯರ್‌ಫೋನ್ ಖರೀದಿಸಲು ದಾದರ್‌ನ ಮೊಬೈಲ್ ಅಂಗಡಿಗೆ ಭೇಟಿ ನೀಡಿದ್ದಾನೆ. ಮುಂಬೈ ಪೊಲೀಸರ ಅಪರಾಧ ವಿಭಾಗದ ಅಧಿಕಾರಿಗಳು ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿದ್ದಾರೆ.
ಶಂಕಿತ "ಇಕ್ರಾ" ಅಂಗಡಿಗೆ ಭೇಟಿ ನೀಡಿದ್ದಾನೆ. "ಅವನು (ಶಂಕಿತ) ನನ್ನ ಅಂಗಡಿಗೆ ಭೇಟಿ ನೀಡಿ 50 ರೂಪಾಯಿಯ ಇಯರ್‌ಫೋನ್ ಖರೀದಿಸಿದ. ಆತ ನನಗೆ 100 ರೂಪಾಯಿ ಕೊಟ್ಟ, ನಾನು ಅವನಿಗೆ 50 ರೂ. ಹಿಂತಿರುಗಿಸಿದೆ. ನಂತರ, ಅವನು ಅಂಗಡಿಯಿಂದ ಹೊರಟು ಹೋದನು. ಕೆಲ ಪೊಲೀಸ್ ಅಧಿಕಾರಿಗಳು ನಿನ್ನೆ (ಶುಕ್ರವಾರ) ಅಂಗಡಿಗೆ ಬಂದು ಸಿಸಿಟಿವಿ ದೃಶ್ಯಾವಳಿಗಳನ್ನು ತೆಗೆದುಕೊಂಡು ಹೋದರು. ಅವರು ಆ ವ್ಯಕ್ತಿಯ (ಶಂಕಿತ) ಬಗ್ಗೆ ವಿಚಾರಿಸಿದರು. ಅವನ ಕೃತ್ಯದ ಬಗ್ಗೆ ನನಗೆ ತಿಳಿದಿರಲಿಲ್ಲ" ಎಂದು ಅಂಗಡಿಯಲ್ಲಿ ಕೆಲಸ ಮಾಡುವ ಹಸನ್ ತಿಳಿಸಿದ್ದಾನೆ.
ಇದನ್ನೂ ಓದಿ: ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ: ವಿಜೇತರಿಗೆ ಸಿಗುವ ಹಣವೆಷ್ಟು? ಗೆಲುವು ಯಾರಿಗೆ? ಈವೆಂಟ್ ಡೀಟೆಲ್ಸ್
ಗುರುವಾರ ಮುಂಜಾನೆ (ಬುಧವಾರ ಮಧ್ಯರಾತ್ರಿ) ಬಾಂದ್ರಾದಲ್ಲಿರುವ ಸೈಫ್ ಕರೀನಾ ದಂಪತಿಯ ನಿವಾಸದಲ್ಲಿ ನಡೆದ ಕ್ರೂರ ದಾಳಿಯಲ್ಲಿ 54ರ ಹರೆಯದ ನಟನ ಕುತ್ತಿಗೆ ಮತ್ತು ಬೆನ್ನುಮೂಳೆ ಬಳಿ ಸೇರಿದಂತೆ ದೇಹದ ಹಲವೆಡೆ ಗಂಭೀರ ಗಾಯಗಳಾಗಿವೆ. ಮನೆಗೆ ನುಗ್ಗಿದ ದುಷ್ಕರ್ಮಿ ನಟನಿಗೆ 6 ಬಾರಿ ಇರಿದು ಪರಾರಿಯಾಗಿದ್ದಾನೆ. ನಟನನ್ನು ಕೂಡಲೇ ಲೀಲಾವತಿ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಅವರಿಗೆ ತುರ್ತು ಶಸ್ತ್ರಚಿಕಿತ್ಸೆ ಮಾಡಲಾಯಿತು.
ಇದನ್ನೂ ಓದಿ: ಸೈಫ್ ಅಲಿ ಖಾನ್ ಇರಿತ ಪ್ರಕರಣ: ದಾಳಿಕೋರನ ಕೃತ್ಯದ ಬಗ್ಗೆ ಕರೀನಾ ಹೇಳಿದ್ದಿಷ್ಟು
"ಇಲ್ಲಿ ಕೆಲಸ ಮಾಡುವ ನನ್ನ ಹುಡುಗ ಅವನಿಗೆ (ಶಂಕಿತ) ಇಯರ್‌ಫೋನ್‌ಗಳನ್ನು ನೀಡಿದ್ದಾಗಿ ತಿಳಿಸಿದೆ. ಕೆಲ ಪೊಲೀಸ್ ಅಧಿಕಾರಿಗಳು ನಿನ್ನೆ ಬಂದು ಸಿಸಿಟಿವಿ ದೃಶ್ಯಾವಳಿಗಳನ್ನು ತೆಗೆದುಕೊಂಡರು" ಎಂದು ಅಂಗಡಿ ಮಾಲೀಕ ಶಕೀರ್ ತಿಳಿಸಿದ್ದಾರೆ.