ಕರ್ನಾಟಕ

karnataka

ETV Bharat / entertainment

ಕಾಂತಾರ ಸೆಟ್​ನಲ್ಲಿ ರಿಷಬ್​ ಶೆಟ್ಟಿ: 60 ದಿನಗಳ ನಿರಂತರ ಶೂಟಿಂಗ್​; 2 ಶೆಡ್ಯೂಲ್​ ಕಂಪ್ಲೀಟ್, ಬಜೆಟ್​ ಮಾಹಿತಿ ಇಲ್ಲಿದೆ​​ - RISHAB SHETTY

ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ 'ಕಾಂತಾರ ಚಾಪ್ಟರ್​ 1'ರ ಕೆಲ ಇಂಟ್ರೆಸ್ಟಿಂಗ್​ ಡೀಟೆಲ್ಸ್​​ ಇಲ್ಲಿದೆ.

Rishabh Shetty
ಡಿವೈನ್​ ಸ್ಟಾರ್​​ ರಿಷಬ್ ಶೆಟ್ಟಿ (Photo Source: ETV Bharat)

By ETV Bharat Entertainment Team

Published : Nov 6, 2024, 1:50 PM IST

ಕನ್ನಡ ಚಿತ್ರರಂಗದ ಡಿವೈನ್​ ಸ್ಟಾರ್​​ ರಿಷಬ್ ಶೆಟ್ಟಿ ಸಾರಥ್ಯದ ಮುಂದಿನ ಬಹುನಿರೀಕ್ಷಿತ ಚಿತ್ರ 'ಕಾಂತಾರ ಅಧ್ಯಾಯ-1'. ಈ ಸಿನಿಮಾ ನೋಡಲು ಸಿನಿಪ್ರಿಯರ ಜೊತೆ ಜೊತೆಗೆ ಭಾರತೀಯ ಚಿತ್ರರಂಗದ ಗಣ್ಯರು ಸಹ ಉತ್ಸುಕರಾಗಿದ್ದಾರೆ.

2022ರಲ್ಲಿ ತೆರೆಕಂಡ 'ಕಾಂತಾರ' ಚಿತ್ರದ ಪ್ರೀಕ್ವೆಲ್​​ ಆಗಿ ಇದನ್ನು ನಿರ್ಮಾಣ ಮಾಡಲಾಗುತ್ತಿದೆ. ಕಾಂತಾರ ಮೊದಲ ಭಾಗದಲ್ಲಿ ಕಂಡ ಕಥೆಗೂ ಮುನ್ನ ಏನಾಗಿತ್ತು? ಎಂಬುದನ್ನು ಈ 'ಕಾಂತಾರ ಅಧ್ಯಾಯ-1'ರಲ್ಲಿ ತೋರಿಸಲು ಚಿತ್ರತಂಡ ಎದುರು ನೋಡುತ್ತಿದೆ. ಕನ್ನಡ ಅಲ್ಲದೇ ದಕ್ಷಿಣ ಭಾರತ ಚಿತ್ರರಂಗದಲ್ಲಿ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಹೊಂಬಾಳೆ ಫಿಲ್ಮ್ಸ್​​​ ಈ ಬಹುನಿರೀಕ್ಷಿತ ಚಿತ್ರವನ್ನು ನಿರ್ಮಿಸುತ್ತಿದೆ. ಈ ಚಿತ್ರದ ಅಪ್ಡೇಟ್ಸ್​ ಇಲ್ಲಿದೆ.

2 ಶೆಡ್ಯೂಲ್​​ ಶೂಟಿಂಗ್​ ಪೂರ್ಣ:ರಿಷಬ್​ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಈಗಾಗಲೇ ತನ್ನ ಎರಡು ಶೆಡ್ಯೂಲ್‌ಗಳನ್ನು ಪೂರ್ಣಗೊಳಿಸಿದೆ. ಮೂರನೇ ಶೆಡ್ಯೂಲ್‌ನ ಚಿತ್ರೀಕರಣ ಇತ್ತೀಚೆಗಷ್ಟೇ ಶುರುವಾಗಿದೆ. ಈ ಶೆಡ್ಯೂಲ್​​ನಲ್ಲಿ ರಿಷಬ್ ಶೆಟ್ಟಿ ಭಾಗಿಯಾಗಲಿದ್ದಾರೆ. 60 ದಿನಗಳ ಕಾಲ ನಿರಂತರ ಶೂಟಿಂಗ್ ನಡೆಯಲಿದೆ. ಚಿತ್ರದ ಪ್ರಮುಖ ದೃಶ್ಯಗಳು ಮತ್ತು ಹಾಡುಗಳ ಚಿತ್ರೀಕರಣ ನಡೆಯಲಿದೆ ಎಂದು ವರದಿಯಾಗಿದೆ.

ಬಿಗ್​​ ಬಜೆಟ್​ ಸಿನಿಮಾ:ಕಾಂತಾರ ಮೊದಲ ಭಾಗ ಕೇವಲ 15-16 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣಗೊಂಡಿತ್ತು. ಇಡೀ ಕಥೆಯನ್ನು ಅರಣ್ಯ ಪ್ರದೇಶದ ಹಿನ್ನೆಲೆಯಲ್ಲೇ ಚಿತ್ರೀಕರಿಸಿದ್ದರಿಂದ ಹೆಚ್ಚು ಖರ್ಚಾಗಿರಲಿಲ್ಲ. ಆದ್ರೆ ಈ ಪ್ರೀಕ್ವೆಲ್​​​ ಬಿಗ್​​ ಬಜೆಟ್​ನಲ್ಲಿ ನಿರ್ಮಾಣಗೊಳ್ಳುತ್ತಿದೆ. ಕಾಂತಾರ ಚಾಪ್ಟರ್​​ 1ಕ್ಕೆ ಸುಮಾರು 125 ಕೋಟಿ ರೂಪಾಯಿ ವೆಚ್ಚವಾಗಲಿದೆಯಂತೆ. ಈ ಸಿನಿಮಾದ ಕಥೆ 4ನೇ ಶತಮಾನದ ಹಿನ್ನೆಲೆಯನ್ನು ಒಳಗೊಂಡಿದೆ. ನಾಯಕ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಕೂಡಾ ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಿದ್ದಾರೆ ಎಂಬುದು ಚಿತ್ರರಂಗದೊಳಗಿನ ಮಾತು. ಅದ್ಭುತ ಸಿನಿಮೀಯ ಅನುಭವಕ್ಕಾಗಿ ಹೆಚ್ಚಿನ ವಿಎಫ್​ಎಕ್ಸ್​​ ಮೊರೆ ಹೋಗುತ್ತಿದ್ದಾರೆ. ಹಾಗಾಗಿಯೇ ಬಜೆಟ್ ಏರಿದೆ.

ಇದನ್ನೂ ಓದಿ:ರಿಷಬ್​ ಶೆಟ್ಟಿ ಸಿನಿಮಾದಲ್ಲಿ ಬಾಹುಬಲಿ​​ ಸ್ಟಾರ್​?: ಇಂಟ್ರೆಸ್ಟಿಂಗ್​​ ಫೋಟೋ ಹಂಚಿಕೊಂಡ 'ಜೈ ಹನುಮಾನ್​' ನಿರ್ದೇಶಕ

ರಿಷಬ್​​​ ಶೆಟ್ಟಿಯ ಮತ್ತೊಂದು ಸಿನಿಮಾ: ಬ್ಲಾಕ್​ ಬಸ್ಟರ್ ಕಾಂತಾರದ ಮತ್ತೊಂದು ಭಾಗ ತೆರೆ ಮೇಲೆ ಅಬ್ಬರಿಸುವ ಮುನ್ನವೇ ಡಿವೈನ್​ ಸ್ಟಾರ್​ನ ಮತ್ತೊಂದು ಹೊಸ ಬಿಗ್​ ಪ್ರಾಜಕ್ಟ್​​ ಅನೌನ್ಸ್​​ ಆಗಿದೆ. ದೀಪಾವಳಿ ಸಂದರ್ಭ ಜೈ ಹನುಮಾನ್​ ಸಿನಿಮಾ ಘೋಷಣೆಯಾಗಿದೆ. ಟಾಲಿವುಡ್​ನ ಯುವ ನಿರ್ದೇಶಕ ಪ್ರಶಾಂತ್ ವರ್ಮಾ ನಿರ್ದೇಶನದ 'ಹನುಮಾನ್' ಚಿತ್ರದ ಮುಂದುವರಿದ ಭಾಗವಾಗಿರುವ 'ಜೈ ಹನುಮಾನ್'ನಲ್ಲಿ ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹನುಮಾನ್ ಪಾತ್ರಕ್ಕೆ ಜೀವ ತುಂಬಲಿದ್ದು, ಇತ್ತೀಚೆಗಷ್ಟೇ ನಿರ್ಮಾಪಕರು ಈ ವಿಷಯಗಳನ್ನು ಘೋಷಿಸಿದ್ದಾರೆ. ಅಷ್ಟೇ ಅಲ್ಲದೇ, ದೀಪಾವಳಿ ಉಡುಗೊರೆಯಾಗಿ ಸಿನಿಮಾ ಮತ್ತು ನಾಯಕ ನಟನ ಫಸ್ಟ್ ಲುಕ್ ಪೋಸ್ಟರ್ ಕೂಡಾ ಅನಾವರಣಗೊಂಡಿತ್ತು.

ಇದನ್ನೂ ಓದಿ:'ರಾಮಾಯಣ'ದಲ್ಲಿ ಯಶ್​, ಸಾಯಿಪಲ್ಲವಿ, ರಣ್​​​ಬೀರ್​ ನಟನೆ ಖಚಿತ: ಬಿಡುಗಡೆಗೂ ಮುಹೂರ್ತ ಫಿಕ್ಸ್

'ಜೈ ಹನುಮಾನ್​' ಲುಕ್​: ಫಸ್ಟ್ ಲುಕ್​ ಪೋಸ್ಟರ್ ಬಳಿಕ 'ಜೈ ಹನುಮಾನ್​' ನಿರ್ದೇಶಕ ಪ್ರಶಾಂತ್​ ವರ್ಮಾ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಕುತೂಹಲಕಾರಿ​​ ಫೋಟೋ ಹಂಚಿಕೊಂಡಿದ್ದರು. ರಿಷಬ್​ ಶೆಟ್ಟಿ, ರಾಣಾ ದಗ್ಗುಬಾಟಿ, ಪ್ರಶಾಂತ್ ವರ್ಮಾ ಕುಳಿತಿರುವ​ ಫ್ರೆಂಡ್ಲಿ ಲುಕ್ ಇದಾಗಿದೆ. ಪೋಸ್ಟ್​ಗೆ ಜೈ ಹನುಮಾನ್ ಎಂಬ ಕ್ಯಾಪ್ಷನ್​​ ಕೂಡಾ ಕೊಡಲಾಗಿದೆ. ಹಾಗಾಗಿ, ಬಾಹುಬಲಿ ಸ್ಟಾರ್​ ರಾಣಾ ದಗ್ಗುಬಾಟಿ ಅವರು ರಿಷಬ್​ ಜೊತೆ ಕಾಣಿಸಿಕೊಳ್ಳಲಿದ್ದಾರಾ ಎಂಬ ಊಹಾಪೋಹ ಹರಡಿದೆ.

ABOUT THE AUTHOR

...view details