ಕರ್ನಾಟಕ

karnataka

ETV Bharat / entertainment

'ರಾಹ' ಪೋಷಕರಿಗೆ ಅತ್ಯುತ್ತಮ ನಟ, ನಟಿ ಫಿಲ್ಮ್‌ಫೇರ್ ಅವಾರ್ಡ್​ - ಅತ್ಯುತ್ತಮ ನಟಿ

69th Filmfare Awards: ಬಾಲಿವುಡ್​ ದಂಪತಿ ರಣ್​ಬೀರ್​ ಕಪೂರ್ ಮತ್ತು ಅಲಿಯಾ ಭಟ್ ಅತ್ಯುತ್ತಮ ನಟ ಮತ್ತು ನಟಿ ಫಿಲ್ಮ್‌ಫೇ​ರ್​ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.

Ranbir Kapoor and Alia Bhatt
ರಣ್​ಬೀರ್​ ಕಪೂರ್ ಮತ್ತು ಅಲಿಯಾ ಭಟ್

By ANI

Published : Jan 29, 2024, 11:57 AM IST

ಗುಜರಾತ್​(ಗಾಂಧಿನಗರ):ಈ ಬಾರಿಯ 69ನೇ ಫಿಲ್ಮ್‌ಫೇ​ರ್​ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ರಣ್​ಬೀರ್​ ಕಪೂರ್​ ಮತ್ತು ಅಲಿಯಾ ಭಟ್​ ದಂಪತಿ ಅತ್ಯುತ್ತಮ ನಟ ಮತ್ತು ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಆ್ಯಕ್ಷನ್​ ಥ್ರಿಲ್ಲರ್​ ಮೂವಿ ಅನಿಮಲ್​ನಲ್ಲಿ ರಣ್​ಬೀರ್ ಕಪೂರ್​ ನಟನೆಗೆ ಅತ್ಯತ್ತಮ ನಟ ಮತ್ತು ರೋಮ್ಯಾಂಟಿಕ್​ ಮೂವಿ ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ ಚಿತ್ರದಲ್ಲಿ ಅಲಿಯಾ ಭಟ್​ ನಟನೆಗೆ ಅತ್ಯುತ್ತಮ ನಟಿ ಪ್ರಶಸ್ತಿ ಒಲಿದು ಬಂದಿದೆ. ದಂಪತಿ ವೇದಿಕೆ ಮೇಲೆ ಜೊತೆಯಾಗಿ ಪ್ರಶಸ್ತಿ ಸ್ವೀಕರಿಸಿ ಫೋಟೋಗೆ ಪೋಸ್​​ ನೀಡಿದ್ದಾರೆ.

ಅನಿಮಲ್​ ಚಿತ್ರದ ಕುರಿತು:2023ರ ಕೊನೆಯಲ್ಲಿ ತೆರೆಕಂಡ 'ಅನಿಮಲ್​​' ಸಿನಿಮಾ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿತು. ಈಗ ಒಟಿಟಿಯಲ್ಲೂ ಲಭ್ಯ. ಆ್ಯಕ್ಷನ್​, ಥ್ರಿಲ್ಲರ್, ಫಾದರ್​ ಸೆಂಟಿಮೆಂಟ್​ಅನ್ನು ಒಳಗೊಂಡ ಈ ಸಿನಿಮಾ​ ಡಿಸೆಂಬರ್​ನಲ್ಲಿ ಚಿತ್ರಮಂದಿರ ಪ್ರವೇಶಿಸಿ ನಿರೀಕ್ಷೆಗೂ ಮೀರಿ ಅಭೂತಪೂರ್ವ ಯಶಸ್ಸು ಕಂಡಿದೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದಲ್ಲಿ ರಣ್​​ಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಮೊದಲ ಬಾರಿಗೆ ಸ್ಕ್ರೀನ್​ ಶೇರ್ ಮಾಡಿದ್ದಾರೆ. ಅನಿಮಲ್ ಚಿತ್ರ ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ 550ಕೋಟಿ ರೂ. ಕಲೆಕ್ಷನ್​ ಮಾಡಿದ್ದು, ಒಟ್ಟು ಜಾಗತಿಕವಾಗಿ 900 ಕೋಟಿ ರೂಪಾಯಿಯ ವ್ಯವಹಾರ ನಡೆಸಿತು. ಸಿನಿಮಾ ಹಿಂದಿಯಲ್ಲದೆ ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂನಲ್ಲಿ ಡಬ್​ ಆಗಿದೆ. ತನ್ನ ತಂದೆಯ ಮೇಲೆ ಹತ್ಯೆಯ ಪ್ರಯತ್ನದ ನಂತರ ಸೇಡು ತೀರಿಸಿಕೊಳ್ಳುವುದು ಚಿತ್ರದಲ್ಲಿ ಮುಖ್ಯವಾಗಿದೆ.

ಅನಿಮಲ್​ ನಟನೆಗೆ ಅತ್ಯುತ್ತಮ ನಟ, ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಗಾಗಿ ಅತ್ಯುತ್ತಮ ನಟಿ

'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಕುರಿತು: ಈ ಚಿತ್ರವನ್ನು ಕರಣ್ ಜೋಹರ್ ನಿರ್ದೇಶಿಸಿದ್ದಾರೆ. ಸಿನಿಮಾಗೆ ನಾಯಕನಾಗಿ ರಣವೀರ್ ಸಿಂಗ್ ಹಾಗೂ ನಾಯಕಿಯಾಗಿ ಅಲಿಯಾ ಭಟ್​ ನಟಿಸಿದ್ದಾರೆ. ಚಿತ್ರ ಜುಲೈ 28 ರಂದು ತೆರೆಗೆ ಅಪ್ಪಳಿಸಿತ್ತು. ಪಂಜಾಬಿ ಉದ್ಯಮಿ ರಾಕಿ ರಾಂಧವಾ (ರಣವೀರ್) ಮತ್ತು ಬಂಗಾಳಿ ಪತ್ರಕರ್ತೆ ರಾಣಿ ಚಟರ್ಜಿ (ಆಲಿಯಾ ಭಟ್) ಅವರ ಭಿನ್ನಾಭಿಪ್ರಾಯಗಳು ಮತ್ತು ಕುಟುಂಬದ ಆಕ್ಷೇಪಗಳ ನಡುವೆಯೂ ಪ್ರೀತಿಯಲ್ಲಿ ಬೀಳುವ ಸುತ್ತ ಕಥೆ ಸುತ್ತುತ್ತದೆ. ಧರ್ಮೇಂದ್ರ, ಶಬಾನಾ ಅಜ್ಮಿ, ಜಯಾ ಬಚ್ಚನ್ ಅವರಂತಹ ಹಿರಿಯ ಸ್ಟಾರ್ ನಟರು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:'ಡಂಕಿ'ಗೆ ಫಿಲ್ಮ್‌ಫೇರ್‌ ಗರಿ: ವಿಕ್ಕಿ ಕೌಶಲ್‌ ಅತ್ಯುತ್ತಮ ಪೋಷಕ ನಟ

ABOUT THE AUTHOR

...view details