ಮುಂಬೈ: ರಾಧಿಕಾ ಮರ್ಚೆಂಟ್ ಮತ್ತು ಅನಂತ್ ಅಂಬಾನಿಯ ಅದ್ದೂರಿ ಮತ್ತು ಐಷಾರಾಮಿ ಪ್ರಿ ವೆಡ್ಡಿಂಗ್ ಮುಗಿದಿದ್ದು, ಕಾರ್ಯಕ್ರಮದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಅನಂತ್ ರಾಧಿಯ ಅವರ ಈ ಕಾರ್ಯಕ್ರಮದ ವಿಶೇಷ ಫೋಟೋವೊಂದರಲ್ಲಿ ರಾಧಿಕಾ- ಅನಂತ್ ಡಿಸ್ನಿ ರಾಜಕುಮಾರ- ರಾಜಕುಮಾರಿಯಂತೆ ಕಂಗೊಳಿಸಿದ್ದಾರೆ ಎಂಬ ಹೋಲಿಕೆಯನ್ನು ಜನರು ಮಾಡುತ್ತಿದ್ದಾರೆ.
ಮುಖದ ತುಂಬ ಹೂ ನಗು ತುಂಬಿದ ಜೋಡಿಗಳು ಪರಸ್ಪರ ಕೈ ಹಿಡಿದು ನಿಂತಿರುವುದು ಕಾಣಬಹುದು. ಅನಂತ್ ಕಡು ನೀಲಿ ಬಣ್ಣದ ಬ್ಲೇಜರ್ ಸೂಟ್ನಲ್ಲಿ ಮಿಂಚಿದ್ದಾರೆ, ಈ ಸೂಟ್ನ ವಿಶೇಷ ಎಂದರೆ, ಬ್ಲೇಜರ್ನ ವಜ್ರದ ಬ್ರೊಚ್ನಿಂದ ಸಿಂಗರಿಸಲಾಗಿದೆ. ಸೂಟ್ನ ಕಾಲರ್ ಅನ್ನು ಕ್ರಿಸ್ಟಲ್ನಿಂದ ಅಲಂಕರಿಸಲಾಗಿದೆ. ರಾಧಿಕಾ ಮರ್ಚೆಂಟ್ ಆಕಾಶ ನೀಲಿ ಬಣ್ಣದ ಸ್ಟ್ರಪ್ಲೆಸ್ನ ಬಾಡಿಕಾನ್ ಗೌನ್ನಲ್ಲಿ ಕಂಡಿದ್ದಾರೆ. ಧಿರಿಸಿಗೆ ಒಪ್ಪುವ ಬಣ್ಣದ ವಜ್ರದ ಸರ ಮತ್ತು ಕಿವಿ ಒಲೆ ತೊಟ್ಟಿದ್ದು, ಕೂದಲನ್ನು ಬನ್ನಿಂದ ಸುತ್ತಿದ್ದಾರೆ. ರಾಧಿಕಾರನ್ನು ನೋಡಿದವರು ಸಿಂಡ್ರೆಲಾಗೆ ಹೋಲಿಕೆ ಮಾಡಿದ್ದಾರೆ.
ಮೇ 28ರಿಂದ 31ರವರೆಗೆ ಇಟಲಿಯಿಂದ ಫ್ರಾನ್ಸ್ವರೆಗೆ ಐಷಾರಾಮಿ ಹಡಗಿನಲ್ಲಿ ನಡೆದ ನಾಲ್ಕು ದಿನದ ಅದ್ದೂರಿ ವಿವಾಹ ಪೂರ್ವ ಸಮಾರಂಭದಲ್ಲಿ ಬಾಲಿವುಡ್ ನಟ - ನಟಿಯರು ಭಾಗಿಯಾಗಿದ್ದರು. ಶಾರುಖ್ ಖಾನ್ ಮತ್ತು ಅವರ ಮಕ್ಕಳು, ಜಾಹ್ನವಿ ಕಪೂರ್, ಕರೀನಾ ಕಪೂರ್ ಖಾನ್, ರಣಬೀರ್ ದಂಪತಿ, ಕರಣ್ ಜೋಹರ್, ಅನನ್ಯಾ ಪಾಂಡೆ, ಸಾರಾ ಆಲಿ ಖಾನ್ ಸೇರಿದಂತೆ 800 ಗಣ್ಯರು ಭಾಗಿಯಾಗಿದ್ದರು.