ಬಾಲ್ಯದಲ್ಲೇ ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡು 'ಬೆಟ್ಟದ ಹೂವು' ಎನಿಸಿಕೊಂಡ ಪುನೀತ್ ರಾಜ್‌ಕುಮಾರ್ ಅಗಲಿ ಇಂದಿಗೆ ಮೂರು ವರ್ಷ. ಆದ್ರೆ ಸಿನಿಮಾ, ಸಮಾಜ ಸೇವೆ ಮೂಲಕ ಸದಾ ಜೀವಂತ ಈ ಸ್ಯಾಂಡಲ್ವುಡ್ ಸೂಪರ್ ಸ್ಟಾರ್.
ಆರು ತಿಂಗಳ ಮಗುವಾಗಿದ್ದಾಗಲೇ ಪ್ರೇಮದ ಕಾಣಿಕೆ ಸಿನಿಮಾ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ 'ಮಾಸ್ಟರ್ ಲೋಹಿತ್' ಕನ್ನಡ ಚಿತ್ರರಂಗ ಮಾತ್ರವಲ್ಲದೇ ಇಡೀ ಭಾರತೀಯ ಸಿನಿರಂಗ ಮೆಚ್ಚುವಂತೆ ಬದುಕಿದ 'ರಾಜಕುಮಾರ' ಕೊನೆಯುಸಿರೆಳೆದು ಮೂರು ವರ್ಷಗಳಾಗಿವೆ. ಅಭಿಮಾನಿಗಳ ದೃಷ್ಠಿಯಲ್ಲಿ ನಗುಮೊಗದ ಅರಸನಾಗಿರುವ ಪುನೀತ್ ರಾಜ್‌ಕುಮಾರ್ ಅಮೋಘ ಅಭಿನಯದ ಜೊತೆ ಜೊತೆಗೆ ಆ್ಯಕ್ಷನ್, ಡ್ಯಾನ್ಸ್‌ನಲ್ಲಿಯೂ ಕಿಂಗ್ ಅಂತಾ ಕರೆಸಿಕೊಂಡರು. ತಮ್ಮ ಅದ್ಭುತ ಡ್ಯಾನ್ಸ್ ಮೂಲಕ ಅಪಾರ ಕನ್ನಡಿಗರ ಮನ ಗೆದ್ದಿರುವ ಪವರ್ ಸ್ಟಾರ್ ಅಭಿನಯದ ದಿ ಬೆಸ್ಟ್ ಡ್ಯಾನ್ಸ್ ಮಾಹಿತಿ ಇಲ್ಲಿದೆ.
ತಂದೆಗೆ ತಕ್ಕ ಮಗ ಅಂತಾ ಸಿನಿಮಾ ಹಾಗೂ ರಿಯಲ್ ಲೈಫ್ನಲ್ಲಿ ಸಾಬೀತುಪಡಿಸಿದ ಪುನೀತ್ ರಾಜ್‌ಕುಮಾರ್ ಅವರೀಗ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳ ಆರಾಧ್ಯ ದೈವರಾಗಿದ್ದಾರೆ. ಬಾಲ್ಯದಲ್ಲೇ ವಸಂತ ಗೀತ ಚಿತ್ರದಲ್ಲಿ ಅಣ್ಣಾವ್ರ ಜೊತೆ ಬೊಂಬಾಟ್ ಆಗಿ ಡ್ಯಾನ್ಸ್ ಮಾಡಿ ವಾಹ್ ಎನಿಸಿಕೊಂಡಿದ್ರು.
ಪೂರ್ಣ ಪ್ರಮಾಣದ ಹೀರೋ ಆಗಿ ಸ್ಯಾಂಡಲ್ವುಡ್ ಸಿಲ್ವರ್ ಸ್ಕ್ರೀನ್ ಮೇಲೆ ವಿಜೃಂಭಿಸಿದ ಚಿತ್ರ 'ಅಪ್ಪು'. 2002ರಲ್ಲಿ ತೆರೆಕಂಡ ಅಪ್ಪು ಚಿತ್ರವನ್ನು ತೆಲುಗು ನಿರ್ದೇಶಕ ಪುರಿ ಜಗನ್ನಾಥ್ ನಿರ್ದೇಶಿಸಿದ್ರು. ಈ ಚಿತ್ರ ಕಮರ್ಷಿಯಲಿ ಬ್ಲಾಕ್ಬಸ್ಟರ್ ಹಿಟ್ ಆಗಿತ್ತು. ಚಿತ್ರದ ಟೈಟಲ್ ಸಾಂಗ್ ತಾಲಿಬಾನ್ ಅಲ್ಲ ಅಲ್ಲ ಅಂತಾ ಪುನೀತ್ ರಾಜ್‌ಕುಮಾರ್ ಸಖತ್ತಾಗೆ ಡ್ಯಾನ್ಸ್ ಮಾಡಿ ಟ್ರೆಂಡ್ ಸೆಟ್ ಮಾಡಿದ್ರು. ಈ ಹಾಡಿನ ಜೊತೆಗೆ ಪುನೀತ್ ಅವರ ಡ್ಯಾನ್ಸ್ ಸ್ಟೈಲ್ ದೊಡ್ಡ ಮಟ್ಟದ ಕ್ರೇಜ್ ಕ್ರಿಯೇಟ್ ಮಾಡಿತ್ತು.
ಈ ಚಿತ್ರದ ನಂತರ ಮತ್ತಷ್ಟು ಹವಾ ಸೃಷ್ಟಿಸಿದ ಚಿತ್ರದ 'ವೀರ ಕನ್ನಡಿಗ'. ಅಪ್ಪು ಪಕ್ಕಾ ಲೋಕಲ್ ಹುಡುಗನಾಗಿ ನೈರೆ ನೈರೆ ನೈ ನೈ ರೆ ಬಾಬಾ ಎಂದು ಸಖತ್ ಸ್ಟೆಪ್ ಹಾಕಿದ್ದರು. ಈ ಹಾಡು ಕೂಡಾ ಪಡ್ಡೆ ಹೈಕ್ಳ ಹಾಟ್ ಫೇವರೆಟ್ ಆಗಿತ್ತು.
ಸಿನಿಮಾದಿಂದ ಸಿನಿಮಾಗೆ ಪುನೀತ್ ನಟನೆ ಜೊತೆ ಜೊತೆಗೆ ಡ್ಯಾನ್ಸ್ ಮೂಲಕವೂ ಗಮನ ಸೆಳೆಯುತ್ತಾ ಬರುತ್ತಾರೆ. ಡ್ಯಾನ್ಸ್ ಸ್ಟೆಪ್ಸ್ ಟ್ರೆಂಡ್ ಸೆಟ್ ಮಾಡುವಲ್ಲಿ ಯಶ ಕಾಣುತ್ತೆ. ಅದ್ರಲ್ಲಿ ರಾಮ್ ಸಿನಿಮಾ ಕೂಡಾ ಒಂದು.
ಪ್ರಿಯಾಮಣಿ ಜೊತೆ ಪವರ್ ಸ್ಟಾರ್ ಹೊಸ ಗಾನಬಜಾನ ಅಂತಾ ಟಪ್ಪಾಂಗುಂಚಿ ಹಾಡಿಗೆ ಸಖತ್ತಾಗಿ ಸ್ಟೆಪ್ ಹಾಕಿದ್ದಾರೆ. ಈ ಗೀತೆ ಟ್ರೆಂಡ್ ಕ್ರಿಯೇಟ್ ಮಾಡಿತ್ತು.
2010ರ ಹಿಟ್ ಸಿನಿಮಾ ಜಾಕಿ. ಈ ಚಿತ್ರದ ಟೈಟಲ್ ಸಾಂಗ್ನಲ್ಲಿ ಪವರ್ ಸ್ಟಾರ್ ಬಾಲ್ಯದ ಫೋಟೋ ಜೊತೆಗೆ ಅವರ ಡ್ಯಾನ್ಸಿಂಗ್ ಖದರ್ ಸೂಪರ್ ಆಗಿ ಮೂಡಿಬಂತು.