What is Good for Healthy Bones: ನಮ್ಮ ದೇಹವು ಬಲವಾಗಿರಲು ಹಾಗೂ ಸರಿಯಾಗಿ ಕೆಲಸಗಳನ್ನು ಮಾಡಲು ಪ್ರಮುಖವಾಗಿ ಮೂಳೆಗಳು ಆರೋಗ್ಯಕರವಾಗಿರಬೇಕು. ಮೂಳೆಗಳು ಆರೋಗ್ಯವಾಗದಿದ್ದರೆ ತುಂಬಾ ತೊಂದರೆ ಅನುಭವಿಸಬೇಕಾಗುತ್ತದೆ. ವಯಸ್ಸು ಹೆಚ್ಚಾದಂತೆ ಮೂಳೆಗಳು ದುರ್ಬಲಗೊಳ್ಳುತ್ತವೆ ಹಾಗೂ ವಿವಿಧ ಕಾಯಿಲೆಗಳು ಬರುತ್ತವೆ. ಅನಾರೋಗ್ಯಕರ ಆಹಾರ ಹಾಗೂ ಅಭ್ಯಾಸಗಳಿಂದ ಚಿಕ್ಕ ವಯಸ್ಸಿನಲ್ಲೂ ಮೂಳೆ ವಿವಿಧ ಸಮಸ್ಯೆಗಳು ಬರುವ ಸಾಧ್ಯತೆ ಹೆಚ್ಚಿರುತ್ತದೆ. ಮೂಳೆಗಳನ್ನು ಸದೃಢವಾಗಿ, ಆರೋಗ್ಯವಾಗಿಡಲು ಏನು ಮಾಡಬೇಕು ಎಂಬುದರ ಬಗ್ಗೆ ವೈದ್ಯರು ನೀಡಿರುವ ಸಲಹೆಗಳು ಇಲ್ಲಿವೆ ನೋಡಿ.
''ಮುಖ್ಯವಾಗಿ ಮೂಳೆಗಳು ಆರೋಗ್ಯವಾಗಿರಲು ಉಪ್ಪನ್ನು ಮಿತವಾಗಿ ಸೇವಿಸಬೇಕು. ಅತಿಯಾದ ಉಪ್ಪಿನ ಸೇವನೆಯಿಂದ ಕ್ಯಾಲ್ಸಿಯಂ ದೇಹದಿಂದ ಹೊರ ಹೋಗುತ್ತದೆ. ಇದು ಮೂಳೆಗಳಿಗೆ ಒಳ್ಳೆಯದಲ್ಲ'' ಎಂದು ಖ್ಯಾತ ಮೂಳೆ ಶಸ್ತ್ರಚಿಕಿತ್ಸಕ ಡಾ.ಕೆ. ಸಾಕೇತ್ ತಿಳಿಸುತ್ತಾರೆ.
''ಉಪ್ಪನ್ನು ಸಂಪೂರ್ಣವಾಗಿ ಕಡಿಮೆ ಮಾಡುವುದು ಅನಿವಾರ್ಯವಲ್ಲ. ಆದರೆ, ದಿನಕ್ಕೆ 2,300 ಮಿ. ಗ್ರಾಂ ಗಿಂತ ಹೆಚ್ಚು ಸೋಡಿಯಂ ತೆಗೆದುಕೊಳ್ಳಬಾರದು. ಹೆಚ್ಚು ಹೊತ್ತು ಸುಮ್ಮನೆ ಕುಳಿತರೆ ಮೂಳೆಗಳಿಗೆ ಹಾನಿಯಾಗುತ್ತದೆ. ಮೂಳೆಗಳು ಗಟ್ಟಿಯಾಗಿರಲು ಉತ್ತಮ ಆರೋಗ್ಯದ ಜೊತೆಗೆ ವ್ಯಾಯಾಮವೂ ಬಹಳ ಮುಖ್ಯ'' ಎಂದು ವೈದ್ಯರು ಸಲಹೆ ನೀಡುತ್ತಾರೆ.
ಮೂಳೆಗಳ ಗಾತ್ರ, ಸಾಂದ್ರತೆ ಕಡಿಮೆ ಮಾಡುವ ಆಸ್ಟಿಯೊಪೊರೋಸಿಸ್ ಕಾಯಿಲೆ ಇರುವವರು ನಿಯಮಿತವಾಗಿ ವ್ಯಾಯಾಮ ಮಾಡಬೇಕಾಗುತ್ತದೆ. ಹೆಚ್ಚು ಹೊತ್ತು ಕುಳಿತುಕೊಳ್ಳುವವರಿಗೆ ವ್ಯಾಯಾಮ ಹೆಚ್ಚು ಮುಖ್ಯ. ವಾಕಿಂಗ್ ಮಾಡುವುದು, ರನ್ನಿಂಗ್ ಮಾಡುವುದು ಮೂಳೆಗಳಿಗೆ ಹೆಚ್ಚು ಪ್ರಯೋಜನಕಾರಿ ಎಂದು ವೈದ್ಯರು ವಿವರಿಸುತ್ತಾರೆ.
ಕ್ಯಾಲ್ಸಿಯಂ ಭರಿತ ಆಹಾರಗಳು ಯಾವವು?:
- ವಿಟಮಿನ್ ಡಿ ಇರುವ ಆಹಾರಗಳು
- ಹಾಲು
- ಮೊಟ್ಟೆಗಳು
- ಮೀನು
- ಒಣದ್ರಾಕ್ಷಿ
- ಸೋಯಾ ಬೀನ್
''ಪ್ರತಿದಿನ ಸುಮಾರು ಒಂದು ಗಂಟೆ ಕಾಲ ವ್ಯಾಯಾಮ ಮಾಡಬೇಕು. ಯೋಗ, ಏರೋಬಿಕ್ಸ್, ಈಜು, ಜಾಗಿಂಗ್, ಓಟ, ಸ್ಕಿಪ್ಪಿಂಗ್, ಬ್ರಿಸ್ಕ್ ವಾಕಿಂಗ್ ಸೇರಿದಂತೆ ಮುಂತಾದ ವ್ಯಾಯಾಮಗಳನ್ನು ನಿಯಮಿತವಾಗಿ ಮಾಡಬೇಕು. ಹೀಗೆ ಮಾಡುವುದರಿಂದ ಮೂಳೆಗಳು ಬಲಗೊಳ್ಳಲು ಸಾಧ್ಯವಾಗುತ್ತದೆ. ಕ್ಯಾಲ್ಸಿಯಂ ಹಾಗೂ ವಿಟಮಿನ್ ಡಿ ಕೊರತೆಯು ಮಣಿಕಟ್ಟು, ಮೇಲಿನ ಸೊಂಟ, ಬೆನ್ನುಮೂಳೆಯ ಮೂಳೆಗಳ ಕುಗ್ಗುವಿಕೆಗೆ ಕಾರಣವಾಗುವುದು ಹಾಗೂ ಮೂಳೆ ಮುರಿತಕ್ಕೆ ಕಾರಣವಾಗಬಹುದು. ಕೆಲವರಲ್ಲಿ ಕೇವಲ ಒಂದು ಸಣ್ಣ ಹೊಡೆತದಿಂದ ಮೂಳೆಗಳು ಸಂಪೂರ್ಣವಾಗಿ ಮುರಿದುಹೋಗುತ್ತವೆ. ಆದ್ದರಿಂದ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಸರಿಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ವೈದ್ಯರ ಸಲಹೆಯಂತೆ ಕ್ಯಾಲ್ಸಿಯಂ ಹಾಗೂ ವಿಟಮಿನ್ ಡಿ ಇರುವ ಆಹಾರಗಳನ್ನು ತೆಗೆದುಕೊಳ್ಳಬೇಕು''.
-ಡಾ. ಸಾಕೇತ್, ಆರ್ಥೋಪೆಡಿಕ್ ಸರ್ಜನ್
ಮೂಳೆಗಳು ಗಟ್ಟಿಯಾಗಿರಲು ದೇಹವನ್ನು ಬಿಸಿಲಿಗೆ ಒಡ್ಡಬೇಕು. ನೆರಳಿನಲ್ಲಿ ಹೆಚ್ಚು ಸಮಯ ಕಳೆಯುವವರಿಗೆ ಮೂಳೆ ದುರ್ಬಲವಾಗುವ ಸಾಧ್ಯತೆಯಿದೆ. ದಿನಕ್ಕೆ 15 ನಿಮಿಷಗಳ ಕಾಲ ಸೂರ್ಯನ ಕಿರಣಗಳನ್ನು ದೇಹದ ಮೇಲೆ ಬೀಳಬೇಕಾಗುತ್ತದೆ. ಮೂಳೆಗಳು ಬಲವಾಗಿರಲು ಮದ್ಯಪಾನ ಹಾಗೂ ಧೂಮಪಾನವನ್ನು ತ್ಯಜಿಸಬೇಕು. ಇವುಗಳನ್ನು ಹೆಚ್ಚು ಸೇವಿಸಿದರೆ ಮೂಳೆಗಳು ಕ್ಯಾಲ್ಸಿಯಂ ಹೀರಿಕೊಳ್ಳುವುದಿಲ್ಲ ಎಂದು ತಜ್ಞರು ಹೇಳುತ್ತಾರೆ.
ಮೂಳೆಗಳು ಮುರಿಯುವ ಅಪಾಯ ಹೆಚ್ಚು ಇರುತ್ತದೆ. ಮೂಳೆ ಮುರಿತವಾದರೆ ಒಟ್ಟಿಗೆ ಕೂಡುವುದು ಕಷ್ಟವಾಗುತ್ತದೆ. ಧೂಮಪಾನವನ್ನು ತ್ಯಜಿಸುವುದರಿಂದ ಮೂಳೆ ಹಾನಿಯನ್ನು ಕಡಿಮೆ ಮಾಡಬಹುದು. ದೀರ್ಘಕಾಲ ಬಳಸುವ ಕೆಲವು ರೀತಿಯ ಔಷಧಗಳು ಮೂಳೆಗಳನ್ನು ಹಾನಿಗೊಳಿಸುತ್ತವೆ. ಕೆಲವು ರೀತಿಯ ತಂಪು ಪಾನೀಯಗಳು, ಕಾಫಿ ಹಾಗೂ ಚಹಾಗಳು ಮೂಳೆಗಳನ್ನು ದುರ್ಬಲಗೊಳಿಸುತ್ತವೆ ಎಂದು ವೈದ್ಯರು ತಿಳಿಸುತ್ತಾರೆ.
ಕಡಿಮೆ ತೂಕ ಇರುವವರು ಕ್ಯಾಲ್ಸಿಯಂ ಕೊರತೆಯನ್ನು ವೈದ್ಯರು ಗುರುತಿಸಬೇಕು. ವೃದ್ಧಾಪ್ಯದಲ್ಲಿ ಮೂಳೆಗಳು ದುರ್ಬಲವಾಗಿದ್ದರೆ ಅದನ್ನು ಸರಿಪಡಿಸುವುದು ತುಂಬಾ ಕಷ್ಟವಾಗುತ್ತದೆ. ಹಾಗಾಗಿ ವಯಸ್ಸಾದವರು ಮೂಳೆಗಳ ಆರೋಗ್ಯದ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು ಎಂದು ವೈದ್ಯ ಸಲಹೆಗಳನ್ನು ನೀಡುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ನ್ನು ಸಂಪರ್ಕಿಸಬಹುದು: https://www.nhs.uk/live-well/bone-health/food-for-strong-bones/
ಓದುಗರಿಗೆ ವಿಶೇಷ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಹಾಗೂ ಸಲಹೆಗಳು ನಿಮ್ಮ ತಿಳುವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನ, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ನೀಡಿದ್ದೇವೆ.
ಇದನ್ನೂ ಓದಿ: ಬೆಳಗ್ಗೆ ಜೇನುತುಪ್ಪ- ನಿಂಬೆ ರಸ ಬೆರೆಸಿದ ನೀರು ಕುಡಿಯುತ್ತೀರಾ?: ನಿಮಗೆ ಲಭಿಸುತ್ತೆ ಆರೋಗ್ಯದ ಹಲವು ಲಾಭಗಳು!