ETV Bharat / entertainment

“X&Y” ಸಿನಿಮಾದಲ್ಲಿ “ಆಂಬು ಆಟೋ ” ಎಂಬ ಆಪ್ತಮಿತ್ರ: ಇದು ರಾಮಾ ರಾಮಾ ರೇ ನಿರ್ದೇಶಕನ ಹೊಸ ಐಡಿಯಾ!

ಹೊಸ ವರ್ಷಕ್ಕೆ ಬಿಡುಗಡೆಗೆ ಸಜ್ಜಾಗಿರುವ ಕನ್ನಡದ “X&Y” ಚಿತ್ರದಲ್ಲಿ ಆಟೋರಿಕ್ಷಾ “ಆಂಬು ಆಟೋ ” ಆಗಿ ಬಡ್ತಿ ಪಡೆದು ಎಲ್ಲರ ಗಮನ ಸೆಳೆದಿದೆ. ಇದರ ವಿಶೇಷತೆ ಏನು ಎಂಬ ಮಾಹಿತಿ ಇಲ್ಲಿದೆ.

ಆಂಬು ಆಟೋ
ಆಂಬು ಆಟೋ (ETV Bharat)
author img

By ETV Bharat Karnataka Team

Published : 3 hours ago

ಇನ್ನೇನು ಬಿಡುಗಡೆಗೆ ಸಜ್ಜಾಗಿರುವ ಕನ್ನಡದ “X&Y” ಚಿತ್ರದಲ್ಲಿ ಆಟೋರಿಕ್ಷಾ “ಆಂಬು ಆಟೋ ” ಆಗಿ ಬಡ್ತಿ ಪಡೆದು ಎಲ್ಲರ ಗಮನ ಸೆಳೆದಿದೆ.

ಆಂಬ್ಯುಲೆನ್ಸ್‌ ನಲ್ಲಿರುವಂತೆ ಎಲ್ಲ ಸೌಲಭ್ಯಗಳನ್ನು ಈ ಆಟೋದಲ್ಲಿ ಅಳವಡಿಸಿ ಚಿತ್ರದಲ್ಲಿ ಅದನ್ನೊಂದು ಕಲಾವಿದನೆಂಬಂತೆ ಕಲಾತ್ಮಕವಾಗಿ ಬಳಸಲಾಗಿದೆ. ಈ ವಿಷಯ ತಿಳಿದ ಆಟೋ ಚಾಲಕರ ಸಂಘವೊಂದು, ಚಿತ್ರ ನಿರ್ದೇಶಕ ಸತ್ಯಪ್ರಕಾಶ್ ಅವರನ್ನು ಖುದ್ದು ಭೇಟಿ ಮಾಡಿ, ಸರ್ ಇಲ್ಲಿತನಕ 'ಆಟೋರಿಕ್ಷಾ' ನಮ್ಮ ಮಿತ್ರನಾಗಿತ್ತು. ಈಗದನ್ನು 'ಆಂಬು ಆಟೋ' ಆಗಿ ಪರಿವರ್ತಿಸಿ ಎಲ್ಲರ 'ಆಪ್ತಮಿತ್ರ'ನಾಗುವಂತೆ ಮಾಡಿದ್ದೀರಿ ಎಂದು ಆಂಬು ಆಟೋ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಅದರಲ್ಲಿ ಕೆಲವರು ತಾವೂ ತಮ್ಮ ಆಟೋಗಳನ್ನು 'ಆಂಬು ಆಟೋ' ಆಗಿ ರೆಡಿ ಮಾಡಿ ಸಾರ್ವಜನಿಕ ಸಹಾಯಕ್ಕಾಗಿ ಬಳಸುವ ಮನಸ್ಸು ಮಾಡಿದ್ದೇವೆಂದು ಸಂತಸ ಹಂಚಿಕೊಂಡಿದ್ದಾರೆ.

ನಿರ್ದೇಶಕ ಡಿ. ಸತ್ಯಪ್ರಕಾಶ್
ನಿರ್ದೇಶಕ ಡಿ. ಸತ್ಯಪ್ರಕಾಶ್ (ETV Bharat)

ರಕ್ತದಾನ ಶಿಬಿರ ಆಯೋಜಿಸುವ ಮೂಲಕ ಆ್ಯಂಬು ಆಟೋ ಪ್ರದರ್ಶನ; ಈ ನಿಟ್ಟಿನಲ್ಲಿ ಇದೇ ನವೆಂಬರ್​ನಲ್ಲಿ ಬೆಂಗಳೂರಿನ ಜಯನಗರದ ಬೆಂಗಳೂರು ಸಾರಥಿ ಸೇನೆ ಆಟೋ ಚಾಲಕರ ಸಂಘ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಸಮಾಜಮುಖಿ ಸಮಾವೇಶದಲ್ಲಿ ಈ "ಆಂಬು ಆಟೋ" ಪ್ರದರ್ಶನಕ್ಕಿಟ್ಟು ಅದರ ಕುರಿತು ವಿಸ್ತೃತ ವಿವರಣೆ ಪಡೆದು ಹರುಷ ವ್ಯಕ್ತಪಡಿಸಿದ್ದಾರೆ. ಹಾಗೇ ಆಂಬು ಆಟೋದಲ್ಲಿ ECG ತಪಾಸಣೆ ಮಾಡುವ ಮೂಲಕ ಚಾಲಕರೆಲ್ಲರಿಗೂ ನೆರವಾಯಿತು.

"X&Y" ನಿರ್ದೇಶಕರ ನಾಲ್ಕನೇ ಚಿತ್ರ. ಮೊದಲ ಮೂರು ಚಿತ್ರಗಳು ರಾಮಾ ರಾಮಾ ರೇ, ಒಂದಲ್ಲಾ ಎರಡಲ್ಲಾ ಮತ್ತು ಮ್ಯಾನ್ ಆಫ್ ದಿ ಮ್ಯಾಚ್ ಒಂದಕ್ಕಿಂತ ಒಂದು ಭಿನ್ನ ಕಥೆಯ ಚಿತ್ರಗಳಾಗಿವೆ. ರಾಮ ರಾಮಾ ರೇ ಉತ್ತಮ ಚಿತ್ರವೆಂದು ರಾಜ್ಯ ಪ್ರಶಸ್ತಿ ಪಡೆದರೆ, ಒಂದಲ್ಲಾ ಎರಡಲ್ಲಾ ಚಿತ್ರವು ಎರಡು ರಾಷ್ಟ್ರ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ.

“X&Y” ಸಿನಿಮಾ ಪೋಸ್ಟರ್​
“X&Y” ಸಿನಿಮಾ ಪೋಸ್ಟರ್​ (ETV Bharat)

ಚಿತ್ರದಿಂದ ಚಿತ್ರಕ್ಕೆ ಹೊಸತವನ್ನು ನೀಡುತ್ತ ಸಿನಿಮಾ ನೋಡುವಂತೆ ಮಾಡುವ ಕಲಾ ಕೌಶಲ್ಯ ಹೊಂದಿರುವ ನಿರ್ದೇಶಕ ಡಿ. ಸತ್ಯಪ್ರಕಾಶ್ ಮೊದಲ ಬಾರಿಗೆ ಅಭಿನಯಿಸಿ ನಿರ್ದೇಶನ ಮಾಡಿರುವ ಸಿನಿಮಾ "‌X&Y". ಸದ್ಯ ಫಸ್ಟ್​ ಲುಕ್ ನಿಂದ ಕುತೂಹಲ ಹುಟ್ಟಿಸಿರೋ ಈ ಚಿತ್ರ ಮಕ್ಕಳ ಸಂತಾನ ಹಾಗೂ ಹಾರ್ಮೋನ್ಸ್​ ಬಗೆಗಿನ‌ ಕಥಾಹಂದರವನ್ನು ಒಳಗೊಂಡಿದೆ. ಬಹುತೇಕ ಶೂಟಿಂಗ್ ಮುಗಿಸಿರೋ ಈ ಚಿತ್ರ ಹೊಸ ವರ್ಷಕ್ಕೆ ಪ್ರೇಕ್ಷಕರ ಮುಂದೆ ಬರಲಿದೆ.

ಇದನ್ನೂ ಓದಿ: ಮ್ಯಾಕ್ಸ್ ಚಿತ್ರತಂಡದಿಂದ ಅಭಿನಯ ಚಕ್ರವರ್ತಿಯ ಅಭಿಮಾನಿಗಳಿಗೆ ಸಿಕ್ತು ಗುಡ್ ನ್ಯೂಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.