Ola: ಎರಡು ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಓಲಾ ಕಂಪೆನಿ ಮಂಗಳವಾರ ಬಿಡುಗಡೆ ಮಾಡಿತು. ಈ ಸ್ಕೂಟರ್‌ಗಳು ಪೋರ್ಟಬಲ್ ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತಿವೆ. ಇದು ಓಲಾ ಪವರ್‌ಪಾಡ್ ಬಳಸಿಕೊಂಡು ಹೋಮ್ ಇನ್ವರ್ಟರ್ ಆಗಿ ಕಾರ್ಯನಿರ್ವಹಿಸುತ್ತದೆ. Ola S1 Z ಮತ್ತು Ola Gig ಹೆಸರಿನಲ್ಲಿ ಇವುಗಳನ್ನು ಬಿಡುಗಡೆಗೊಳಿಸಲಾಗಿದೆ. ಬೈಕ್‌ಗಳ ಆರಂಭಿಕ ಬೆಲೆ 39,999 ರೂ. ಆಗಿದೆ.
ಕಂಪೆನಿಯ ಸಿಇಒ ಭವಿಶ್ ಅಗರ್ವಾಲ್ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ 'ಎಕ್ಸ್'ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಈಗಾಗಲೇ ಸ್ಕೂಟರ್‌ಗಳ ಬುಕಿಂಗ್ ಪ್ರಾರಂಭವಾಗಿದೆ. ಮುಂದಿನ ವರ್ಷ ಏಪ್ರಿಲ್‌ನಿಂದ ವಿತರಣೆ ನಡೆಯುತ್ತದೆ ಎಂದು ಪೋಸ್ಟ್ ಮೂಲಕ ತಿಳಿಸಿದ್ದಾರೆ.
ಎರಡೂ ಸ್ಕೂಟರ್‌ಗಳು ಬದಲಾಯಿಸಬಹುದಾದ ಬ್ಯಾಟರಿಗಳನ್ನು ಹೊಂದಿವೆ. ಸ್ಕೂಟರ್‌ಗಳಲ್ಲಿ ನಾಲ್ಕು ರೂಪಾಂತರಗಳಿವೆ. ಅವುಗಳಲ್ಲಿ ಮೂರು ಸ್ಕೂಟರ್‌ಗಳಲ್ಲಿ ಎರಡು 1.5 kWh ಬ್ಯಾಟರಿ ಪ್ಯಾಕ್‌ಗಳನ್ನು ಬಳಸಬಹುದು. ಸಿಟಿ ರೈಡಿಂಗ್‌ಗೆ ಅನುಗುಣವಾಗಿ ಇವುಗಳನ್ನು ವಿನ್ಯಾಸಗೊಳಿಸಲಾಗಿದೆ.
Ola S1 Z ಮತ್ತು Ola Gig ಬೆಲೆ:
- Ola Gig: 39,999 ರೂ.
- Ola Gig+: 49,999 ರೂ.
- Ola S1 Z: 59,999 ರೂ.
- Ola S1 Z+: 64,999 ರೂ.
Ola Gig ಮತ್ತು Ola Gig+ ವಿಶೇಷತೆಗಳು: Ola Gig+ ಕುರಿತು ಹೇಳುವುದಾದರೆ, ಇದು 1.5 kWh ಬ್ಯಾಟರಿ ಸಾಮರ್ಥ್ಯದೊಂದಿಗೆ ಎರಡು 1.5 kWh ಬ್ಯಾಟರಿಗಳನ್ನು ಹೊಂದಿಸುವ ಆಯ್ಕೆ ಹೊಂದಿದೆ. ಆದರೆ, Ola Gig ಕೇವಲ ಒಂದು ಬ್ಯಾಟರಿ ಪ್ಯಾಕ್ ಹೊಂದಿದೆ. Ola Gig+ 81 ಕಿ.ಮೀ ನಿಂದ 157 ಕಿ.ಮೀ ವರೆಗೆ ಪ್ರಮಾಣೀಕೃತ ವ್ಯಾಪ್ತಿ ಹೊಂದಿದರೆ, ಸಿಂಗಲ್-ಬ್ಯಾಟರಿ Ola Gig ಒಂದೇ ಚಾರ್ಜ್‌ನಲ್ಲಿ 112 ಕಿ.ಮೀ ವರೆಗೆ ಚಲಿಸಬಹುದು.
ಈ ಎರಡೂ ರೂಪಾಂತರಗಳ ಗರಿಷ್ಠ ವೇಗವು ಕ್ರಮವಾಗಿ 45 km/hr ಮತ್ತು 25 km/hr ಆಗಿದೆ. Ola Gig+ ಅನ್ನು ಪವರ್ ಮಾಡಲು 1.5 kWh ಮೋಟಾರ್ ಅನ್ನು ಬಳಸಲಾಗಿದೆ ಮತ್ತು Gig ಗೆ 250 W ಮೋಟಾರ್ ಅನ್ನು ಬಳಸಲಾಗಿದೆ. ಓಲಾ ಗಿಗ್ ಶ್ರೇಣಿಯು ಅಪ್ಲಿಕೇಶನ್-ಆಧರಿತ ಪ್ರವೇಶ ನೀಡುತ್ತದೆ. ಅಲ್ಲಿ ಸವಾರರು ಅನ್‌ಲಾಕ್ ಮಾಡಲು ಮತ್ತು ಸವಾರಿ ಮಾಡಲು ಸ್ಕ್ಯಾನ್ ಮಾಡಬಹುದಾದ ಆಪ್ಷನ್ ಹೊಂದುತ್ತಾರೆ.
Ola S1 Z+ ಮತ್ತು Ola S1 Z ನ ವಿಶೇಷತೆಗಳು: Ola S1 Z+ ಮತ್ತು Ola S1 Z ಎರಡೂ ಉತ್ತಮ ಕಾರ್ಯಕ್ಷಮತೆಗಾಗಿ ಎರಡು 1.5 kWh ಪೋರ್ಟಬಲ್ ಬ್ಯಾಟರಿ ಪ್ಯಾಕ್‌ಗಳನ್ನು ಹೊಂದಿಸುವ ಆಯ್ಕೆ ಹೊಂದಿವೆ. ಈ ಎಲೆಕ್ಟ್ರಿಕ್ ಸ್ಕೂಟರ್‌ಗಳು ಬಳಕೆಯ ಆಧಾರದ ಮೇಲೆ 75 ರಿಂದ 146 ಕಿಮೀಗಳ ಪ್ರಮಾಣೀಕೃತ ರೇಂಜ್ ನೀಡುತ್ತವೆ. ಗರಿಷ್ಠ ವೇಗವು 70 ಕಿಮೀ ಆಗಿದೆ. ಈ ಸ್ಕೂಟರ್‌ಗಳು 3 kW ಮೋಟಾರ್‌ನಿಂದ ಚಾಲಿತವಾಗಿದ್ದು, ಇದು ಸುಗಮ ಮತ್ತು ಪರಿಣಾಮಕಾರಿ ಸವಾರಿಯನ್ನು ಒದಗಿಸುತ್ತದೆ.
Ola S1 Z+ ಸ್ಕೂಟರ್ ಒಂದು ಬ್ಯಾಟರಿಯೊಂದಿಗೆ 4.7 ಸೆಕೆಂಡುಗಳಲ್ಲಿ 0-40 km/h ವೇಗವನ್ನು ಪಡೆಯಬಹುದು. ಇದಲ್ಲದೇ S1 Z+ ನಲ್ಲಿ 14 ಇಂಚಿನ ಟೈರ್‌ಗಳನ್ನು ಅಳವಡಿಸಲಾಗಿದೆ. ಕಂಪನಿಯು ಮುಂಭಾಗ ಮತ್ತು ಹಿಂಭಾಗದಲ್ಲಿ ಲೋಡ್ ಅನ್ನು ಸಾಗಿಸಲು ಕ್ಯಾರಿಯರ್‌ಗಳನ್ನು ಸ್ಥಾಪಿಸುವ ಆಯ್ಕೆಯನ್ನು ಸಹ ನೀಡಿದೆ. ಆದ್ರೆ ಈ ಲೋಡ್ ಸಾಗಿಸುವ ಸಾಮರ್ಥ್ಯದ ಬಗ್ಗೆ ಯಾವುದೇ ಮಾಹಿತಿ ನೀಡಲಾಗಿಲ್ಲ.
ಇದನ್ನೂ ಓದಿ: ಭಾರತೀಯ ಮಾರುಕಟ್ಟೆಗೆ ಹೊಸ 3 ಕಾರು ಪರಿಚಯಿಸಲು ಟಾಟಾ ಮೋಟಾರ್ಸ್ ಕಸರತ್ತು