ETV Bharat / technology

ಸ್ಯಾಮ್​ಸಂಗ್​ ಗ್ಯಾಲಕ್ಸಿ ಅನ್ಪ್ಯಾಕ್ಡ್ ಈವೆಂಟ್​ಗೆ ದಿನಗಣನೆ ಶುರು: ಯಾವಾಗ, ಎಲ್ಲಿ? - SAMSUNG GALAXY

ಗ್ಯಾಲಕ್ಸಿ ಅನ್ಪ್ಯಾಕ್ಡ್ ಈವೆಂಟ್ 2025 ಇದೇ ತಿಂಗಳು ನಡೆಯಲಿದೆ ಎಂದು ಕಂಪನಿ ಅಧಿಕೃತವಾಗಿ ಹೇಳಿದೆ.

SAMSUNG GALAXY UNPACKED EVENT  SAMSUNG GALAXY UNPACKED DATE  SAMSUNG GALAXY S25 SERIES  SAMSUNG GALAXY S25 FEATURES
ಸ್ಯಾಮ್​ಸಂಗ್​ ಗ್ಯಾಲಕ್ಸಿ ಅನ್ಪ್ಯಾಕ್ಡ್ ಈವೆಂಟ್​ಗೆ ಶುರುವಾಯ್ತು ದಿನಗಣನೆ (Photo Credit: YouTube/Samsung)
author img

By ETV Bharat Tech Team

Published : Jan 7, 2025, 11:03 AM IST

Samsung Galaxy Unpacked: ಗ್ಯಾಲಕ್ಸಿ ಅನ್ಪ್ಯಾಕ್ಡ್ ಈವೆಂಟ್-2025 ಜನವರಿಯಲ್ಲಿ ನಡೆಯಲಿದೆ ಎಂದು ಕಂಪನಿ ಅಧಿಕೃತವಾಗಿ ತಿಳಿಸಿದೆ. ಈವೆಂಟ್​ನಲ್ಲಿ Samsung Galaxy S25 ಸೀರಿಸ್​ ರಿಲೀಸ್ ಆಗಲಿದೆ.

ಗ್ಯಾಲಕ್ಸಿ ಅನ್ಪ್ಯಾಕ್ಡ್ ಈವೆಂಟ್ ಜ.22ರಂದು ಅಮೆರಿಕದ ಸ್ಯಾನ್ ಜೋಸ್‌ನಲ್ಲಿ ಆಯೋಜಿಸಲಾಗಿದೆ. ಈ ಸೀರಿಸ್​ ಅಡಿಯಲ್ಲಿ, ಸ್ಯಾಮ್‌ಸಂಗ್ ಮೂರು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತದೆ. ಹಾಗಾಗಿ, Galaxy S25, Galaxy S25+ ಮತ್ತು Galaxy S25 Ultra ಶೀಘ್ರದಲ್ಲೇ ಮಾರುಕಟ್ಟೆಗೆ ಅಪ್ಪಳಿಸಲಿವೆ. Galaxy S ಸೀರಿಸ್​ನ ನೇರ ಸ್ಪರ್ಧೆ ಐಫೋನ್‌ನ ಇತ್ತೀಚಿನ ಸೀರಿಸ್​ನೊಂದಿಗೆ ಇರಲಿದೆ.

ತನ್ನ ಹೊಸ ಮೊಬೈಲ್‌ಗಳು ಕೃತಕ ಬುದ್ಧಿಮತ್ತೆ (ಎಐ)ಯೊಂದಿಗೆ ಬರಲಿವೆ. Galaxy AIನ ಹೊಸ ಆವೃತ್ತಿ ನಿಮ್ಮ ಫೋನ್ ಬಳಸುವ ವಿಧಾನವನ್ನು ಸಂಪೂರ್ಣವಾಗಿ ಬದಲಾಯಿಸಲಿದೆ. Galaxy S ಸರಣಿಯ ಮೊಬೈಲ್ AI ಪ್ರಪಂಚದಲ್ಲಿ ಹೊಸ ಮೈಲಿಗಲ್ಲಾಗಲಿದೆ ಎಂದು ಕಂಪನಿ ಹೇಳಿದೆ.

ನೀವು Samsung.com, Samsung Newsroom ಮತ್ತು Samsungನ YouTube ಚಾನಲ್‌ನಲ್ಲಿ ಲೈವ್ ಸ್ಟ್ರೀಮ್ ಈವೆಂಟ್ ಅನ್ನು ವೀಕ್ಷಿಸಬಹುದು. ಭಾರತೀಯ ಕಾಲಮಾನ ಪ್ರಕಾರ ರಾತ್ರಿ 11:30ಕ್ಕೆ ಈವೆಂಟ್ ಪ್ರಾರಂಭವಾಗಲಿದೆ.

ಸ್ಯಾಮ್‌ಸಂಗ್ ಭಾರತದಲ್ಲಿ ತನ್ನ ಮುಂಬರುವ ಸ್ಮಾರ್ಟ್‌ಫೋನ್‌ಗಳಿಗಾಗಿ ಪ್ರಿ-ರಿಜರ್ವೇಶನ್​ ಪ್ರಾರಂಭಿಸಿದೆ. ಸ್ಯಾಮ್‌ಸಂಗ್ ಇಂಡಿಯಾ ಸ್ಟೋರ್‌ಗೆ ಭೇಟಿ ನೀಡುವ ಗ್ರಾಹಕರು 1,999 ರೂಪಾಯಿಗಳ ಟೋಕನ್ ಮೊತ್ತ ಪಾವತಿಸುವ ಮೂಲಕ ಮುಂಗಡ ಬುಕ್ ಮಾಡಬಹುದು. ಮುಂಗಡ ಬುಕಿಂಗ್‌ನಲ್ಲಿ ಸ್ಯಾಮ್‌ಸಂಗ್ ₹5000 ವರೆಗಿನ ಪ್ರಯೋಜನಗಳನ್ನು ನೀಡುತ್ತಿದೆ. ಭಾರತದಲ್ಲಿ ಬಿಡುಗಡೆ ದಿನಾಂಕ ಮತ್ತು ಬೆಲೆಯನ್ನು ಇನ್ನೂ ಘೋಷಿಸಿಲ್ಲ.

Samsung Galaxy S25 ಸೀರಿಸ್​ ನಿರೀಕ್ಷೆಗಳು: Samsung Galaxy S25 ಸೀರಿಸ್​ ಅಭಿವೃದ್ಧಿ ಹಂತದಲ್ಲಿದೆ. ಆದ್ದರಿಂದ ಅದರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಆದರೆ ಉದ್ಯಮದ ಪ್ರವೃತ್ತಿಗಳ ಪ್ರಕಾರ,

  • ಇದು Android 15 ಆಪರೇಟಿಂಗ್ ಸಿಸ್ಟಮ್‌ನೊಂದಿಗೆ Samsungನ One UI 6.0 ಪ್ರೊಸೆಸರ್​ ಹೊಂದಿರುತ್ತದೆ.
  • Qualcomm Snapdragon 8 Gen 3 ಅಥವಾ ಪವರ್​ಫುಲ್​ Exynos ಚಿಪ್‌ಸೆಟ್ ಹೊಂದಿರಬಹುದು.
  • S25 ಮತ್ತು S25+ AMOLED ಡಿಸ್​ಪ್ಲೇ ಹೊಂದಿರಬಹುದು. ಅದರ ರಿಫ್ರೆಶ್ ರೇಟ್​ 120Hz ಅಥವಾ ಹೆಚ್ಚಿನದಾಗಿರುತ್ತದೆ.
  • S25 ಅಲ್ಟ್ರಾ ಬಿಗ್​, ಕರ್ವ್ಡ್​ AMOLED ಡಿಸ್​ಪ್ಲೇಯನ್ನು ಹೊಂದಿರಬಹುದು. ಇದು ಇನ್ನೂ ಉತ್ತಮವಾದ ರಿಫ್ರೆಶ್ ರೇಟ್​ ಮತ್ತು ಬ್ರೈಟ್​ನೆಸ್​ ಹೊಂದಿರುತ್ತದೆ.
  • S25 ಮತ್ತು S25+ ಮೂರು ಕ್ಯಾಮೆರಾಗಳನ್ನು ಹೊಂದಿರುತ್ತದೆ ಮತ್ತು ಕಡಿಮೆ ಬೆಳಕಿನಲ್ಲಿಯೂ ಉತ್ತಮ ಫೋಟೋಗಳು ಮತ್ತು ವಿಡಿಯೋಗಳನ್ನು ರೆಕಾರ್ಡ್ ಮಾಡಬಹುದು.
  • S25 ಅಲ್ಟ್ರಾ 200MP ಯ ಉತ್ತಮ ಪ್ರಾಥಮಿಕ ಕ್ಯಾಮೆರಾವನ್ನು ಹೊಂದಬಹುದು. ಜೂಮ್ ಮಾಡುವ ಮೂಲಕವೂ ಉತ್ತಮ ಚಿತ್ರಗಳನ್ನು ಕ್ಲಿಕ್​ ಮಾಡಬಹುದು.
  • ಇದು ಅನೇಕ AI ವೈಶಿಷ್ಟ್ಯಗಳನ್ನೂ ಸಹ ಹೊಂದಿರುತ್ತದೆ. ಈ ಫೋನ್‌ಗಳು ಬಿಗ್​ ಬ್ಯಾಟರಿ ಹೊಂದಿರುತ್ತವೆ ಮತ್ತು ಬಹಳ ವೇಗವಾಗಿ ಚಾರ್ಜ್ ಆಗುತ್ತವೆ.

ಇದನ್ನೂ ಓದಿ: ರೆಡ್​ಮಿ 14ಸಿ 5ಜಿ ಸ್ಮಾರ್ಟ್‌ಫೋನ್: ಅಬ್ಬಬ್ಬಾ! ಕೈಗೆಟುಕುವ ದರದಲ್ಲಿ ಇಷ್ಟೊಂದು ಫೀಚರ್ಸ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.