Tata Motors: 2024ರಲ್ಲಿ ಟಾಟಾ ಮೋಟಾರ್ಸ್ ಭಾರತೀಯ ಮಾರುಕಟ್ಟೆಗೆ Altroz Racer, Tata Nexon CNG, SUV ಕೂಪೆ ಕರ್ವ್‌ನಂತಹ ವಿಭಿನ್ನ ಮಾದರಿಯ ಕಾರುಗಳನ್ನು ಬಿಡುಗಡೆ ಮಾಡಿತ್ತು. ಈಗ ಕಂಪನಿ ಇನ್ನೂ ಮೂರು ಹೊಸ SUV ಕಾರುಗಳನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಇದು ಮುಂದಿನ ವರ್ಷ ಬಿಡುಗಡೆಯಾಗಲಿದೆ. ಟಾಟಾ ಸಿಯೆರಾ, ಟಾಟಾ ಹ್ಯಾರಿಯರ್ ಇವಿ, ಟಾಟಾ ಸಿಯೆರಾ ಇವಿ ಬಿಡುಗಡೆಯಾಗಲಿರುವ ಹೊಸ ಕಾರುಗಳೆಂದು ಮೂಲಗಳಿಂದ ತಿಳಿದು ಬಂದಿದೆ.
ಅದ್ಭುತ ಎಸ್‌ಯುವಿ ಕಾರುಗಳು: ಟಾಟಾ ಮೋಟಾರ್ಸ್ ಮುಂದಿನ ವರ್ಷ ಎಸ್‌ಯುವಿ ವಿಭಾಗದಲ್ಲಿ ಒಂದಕ್ಕಿಂತ ಹೆಚ್ಚು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುವ ತಯಾರಿಯಲ್ಲಿದೆ. ಕಂಪನಿಯ ಸಿಯೆರಾ ಹೆಸರಿನ ಎಸ್‌ಯುವಿ ಎಲ್ಲರಿಗೂ ಚಿರಪರಿಚಿತ. ಈಗ ಈ ಐಕಾನಿಕ್ ಕಾರು ಪುನರಾಗಮನ ಮಾಡುತ್ತಿದೆ. ಈ ವರ್ಷದ ಮೊಬಿಲಿಟಿ ಎಕ್ಸ್‌ಪೋದಲ್ಲಿ ಕಾರನ್ನು ಪ್ರದರ್ಶಿಸಲಾಗಿತ್ತು. ಕಂಪನಿ ಮುಂದಿನ ವರ್ಷ ಇದನ್ನು ಪರಿಚಯಿಸಲಿದೆ ಎಂಬ ವರದಿಗಳಿವೆ. ಇದರೊಂದಿಗೆ ಹ್ಯಾರಿಯರ್ ಎಲೆಕ್ಟ್ರಿಕ್ ಮಾದರಿಯನ್ನೂ ಬಿಡುಗಡೆ ಮಾಡಬಹುದು.
ಟಾಟಾ ಹ್ಯಾರಿಯರ್ ಇವಿ: ಟಾಟಾ ಮೋಟಾರ್ಸ್ ತನ್ನ ಮಧ್ಯಮ ಗಾತ್ರದ ಎಸ್‌ಯುವಿ ಹ್ಯಾರಿಯರ್‌ನ ಎಲೆಕ್ಟ್ರಿಕ್ ರೂಪಾಂತರವನ್ನು ಮುಂದಿನ ವರ್ಷ ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಈ ವರ್ಷದ ಫೆಬ್ರವರಿಯಲ್ಲಿ ಮೊಬಿಲಿಟಿ ಎಕ್ಸ್‌ಪೋದಲ್ಲಿ ಬಿಡುಗಡೆಯಾದ ಹ್ಯಾರಿಯರ್ ಇವಿ ಗ್ರಾಹಕರ ಗಮನ ಸೆಳೆಯಿತು. ಇದು ಮುಂದಿನ ವರ್ಷ ಭಾರತದ ರಸ್ತೆಗಳಿಗೆ ಬರಲು ಸಿದ್ಧವಾಗಿದೆ. ಟಾಟಾ ಹ್ಯಾರಿಯರ್ EV ಶಕ್ತಿಯುತ ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ. ಇದು ಒಂದು ಬಾರಿ ಚಾರ್ಜ್ ಮಾಡಿದರೆ 600 ಕಿ.ಮೀ. ಚಲಿಸಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಇದಲ್ಲದೆ, ಲುಕ್ ಮತ್ತು ಕ್ರೇಜಿ ಫೀಚರ್ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ.
ಟಾಟಾ ಸಿಯೆರಾ: ಟಾಟಾ ಮೋಟಾರ್ಸ್ ತನ್ನ ಐಕಾನಿಕ್ ಸಿಯೆರಾ ಎಸ್‌ಯುವಿಯನ್ನು ಮುಂದಿನ ವರ್ಷದ ಮೊದಲಾರ್ಧದಲ್ಲಿ ಮರಳಿ ತರಲಿದೆ. ಇದು ಎಲೆಕ್ಟ್ರಿಫೈಡ್ ಮಾಡ್ಯುಲರ್ ಆರ್ಕಿಟೆಕ್ಚರ್ ಪ್ಲಾಟ್‌ಫಾರ್ಮ್ ಆಧರಿಸಿದೆ. ಸಿಯೆರಾ ಎಲೆಕ್ಟ್ರಿಕ್ ರೂಪಾಂತರದ ಜೊತೆ ಪೆಟ್ರೋಲ್ ಮತ್ತು ಡೀಸೆಲ್ ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಬರಲಿದೆ. ಈ ಕಾರು ಸ್ಟೈಲಿಶ್ ಲುಕ್ ಮತ್ತು ಡಿಸೈನ್ನೊಂದಿಗೆ ಬರುತ್ತಿದೆ. ಇದರ ಎಲೆಕ್ಟ್ರಿಕ್ ಮಾದರಿಯು 500 ಕಿಮೀಗಿಂತ ಹೆಚ್ಚು ವ್ಯಾಪ್ತಿಯನ್ನು ಹೊಂದಿದೆ. ಟಾಟಾ ಸಿಯೆರಾ ಎಲ್ಲಾ ಎಲೆಕ್ಟ್ರಿಕ್ ಮತ್ತು ಪೆಟ್ರೋಲ್, ಡೀಸೆಲ್ ಮಾದರಿಗಳಲ್ಲಿ ವೈಶಿಷ್ಟ್ಯಗಳು ಅದ್ಭುತವಾಗಿದೆ ಎಂದು ಕಂಪನಿ ಹೇಳಿದೆ.
ಇದನ್ನೂ ಓದಿ: PAN 2.0 ಯೋಜನೆಗೆ ಕೇಂದ್ರ ಒಪ್ಪಿಗೆ: ಇನ್ಮುಂದೆ QR ಕೋಡ್ ಜೊತೆ ಬರಲಿದೆ ಪ್ಯಾನ್ ಕಾರ್ಡ್; ಏನಿದರ ಉದ್ದೇಶ?