ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಚಿತ್ರ 'ಸಿಕಂದರ್'. ಎಆರ್ ಮುರುಗದಾಸ್ ಆ್ಯಕ್ಷನ್ ಕಟ್ ಹೇಳಿರುವ ಚಿತ್ರದಲ್ಲಿ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಈ ಸಾಲಿನ ಈದ್‌ಗೆ ಬಿಡುಗಡೆ ಆಗಲಿರುವ ಬಹುನಿರೀಕ್ಷಿತ ಚಿತ್ರದ ಹೊಸ ಪೋಸ್ಟರ್ ಇಂದು ಅನಾವರಣಗೊಳಿಸಲಾಗಿದೆ.
ಭಾಯ್ಜಾನ್ ಸಲ್ಮಾನ್ ಖಾನ್ ತಮ್ಮ ಆಪ್ತ ಸ್ನೇಹಿತ, ಚಲನಚಿತ್ರ ನಿರ್ಮಾಪಕ ಸಾಜಿದ್ ನಾಡಿಯಾಡ್ವಾಲಾ ಅವರ 59ನೇ ಹುಟ್ಟುಹಬ್ಬಕ್ಕೆ ಶುಭ ಹಾರೈಸುತ್ತಾ, ಮಧ್ಯಾಹ್ನ 3.33ಕ್ಕೆ ಸಿಕಂದರ್‌ನ ಹೊಸ ಪೋಸ್ಟರ್ ಅನ್ನು ಅನಾವರಣಗೊಳಿಸಿದರು. ಎ.ಆರ್ ಮುರುಗದಾಸ್ ನಿರ್ದೇಶನದ ಚಿತ್ರದಲ್ಲಿ ಖಾನ್‌ಗೆ ಜೋಡಿಯಾಗಿ ಕನ್ನಡತಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
Sikandar On Eid#SajidNadiadwala’s #Sikandar
— Salman Khan (@BeingSalmanKhan) February 18, 2025
Directed by @ARMurugadoss
@iamRashmika @DOP_Tirru @ipritamofficial @Music_Santhosh @NGEMovies @WardaNadiadwala @ZeeMusicCompany @PenMovies #SikandarEid2025 pic.twitter.com/N3Wxh6EkOH
ಸಲ್ಮಾನ್ ಖಾನ್ ತಮ್ಮ ಆ್ಯಕ್ಷನ್ ಸಿನಿಮಾದಿಂದ ಕ್ಲೋಸ್ - ಅಪ್ ಲುಕ್ನ ಹೊಸ ಪೋಸ್ಟರ್ ಅನ್ನು ಶೇರ್ ಮಾಡಿದ್ದಾರೆ. ಪ್ರೇಕ್ಷಕರ ಕುತೂಹಲ ಹೆಚ್ಚಿಸುವ ಪೋಸ್ಟರ್ ಹಂಚಿಕೊಂಡ ಭಾರತೀಯ ಚಿತ್ರರಂಗದ ಬಹುಬೇಡಿಕೆ ನಟ, "ಈದ್‌ಗೆ ಸಿಕಂದರ್ ಬಿಡುಗಡೆ, ಸಾಜಿದ್ ನಾಡಿಯಾಡ್ವಾಲಾ ನಿರ್ಮಾಣದ ಸಿಕಂದರ್ಗೆ ಎಆರ್ ಮುರುಗದಾಸ್ ನಿರ್ದೇಶನವಿದೆ" ಎಂದು ಬರೆದುಕೊಂಡಿದ್ದಾರೆ. ಸಲ್ಮಾನ್ ಖಾನ್ ಆ್ಯಕ್ಷನ್ ಜಾನರ್ಗೆ ಮರಳುತ್ತಿದ್ದು, ಈ ಪೋಸ್ಟರ್ ಅಭಿಮಾನಿಗಳ ಉತ್ಸಾಹ ಹೆಚ್ಚಿಸಿದೆ. ಪೋಸ್ಟರ್ ಹಿನ್ನೆಲೆ ಸಂಗೀತದೊಂದಿಗೆ ಕೂಡಿದ್ದು, ಸಿನಿಮಾ ನೋಡಬೇಕೆನ್ನೋ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ.
ಇದಕ್ಕೂ ಮೊದಲು, ಬಾಲಿವುಡ್ ಸೂಪರ್ ಸ್ಟಾರ್ ಸಾಜಿದ್ ಅವರ ಜನ್ಮದಿನಕ್ಕೆ ಶುಭ ಹಾರೈಸಿ ಫೋಟೋ ಹಂಚಿಕೊಂಡಿದ್ದರು. "ಹ್ಯಾಪಿ ಬರ್ತ್‌ಡೇ ಗ್ರ್ಯಾಂಡ್ಸನ್. ಮಧ್ಯಾಹ್ನ 3:33ಕ್ಕೆ ಪೋಸ್ಟರ್ ಬಿಡುಗಡೆಯಾಗುತ್ತಿದ್ದು, ಅದಕ್ಕೆ ಎದುರು ನೋಡುತ್ತಿದ್ದೇನೆ" ಎಂದು ಬರೆದುಕೊಂಡಿದ್ದರು. ಫೋಟೋದಲ್ಲಿ, ಸಲ್ಮಾನ್ ತಮ್ಮ ಸಿಕಂದರ್ ನಿರ್ಮಾಪಕರಿಗೆ ಚಾಕೊಲೇಟ್ ಕೇಕ್ ತಿನ್ನಿಸುತ್ತಿರುವುದನ್ನು ಕಾಣಬಹುದು.
SALMAN KHAN - SAJID NADIADWALA: 'SIKANDAR' POSTER *TODAY* AT 3.33 PM... On his birthday today, #SajidNadiadwala receives heartfelt wishes from his close friend, #SalmanKhan.#Sikandar | #SikandarPoster | #WardaNadiadwala | #SikandarEid2025 pic.twitter.com/GeX6yW87nU
— taran adarsh (@taran_adarsh) February 18, 2025
ಇದನ್ನೂ ಓದಿ: 150 ಕೋಟಿ ರೂ. ಸಮೀಪಿಸಿದ ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ ಸಿನಿಮಾ: 4 ದಿನಗಳ 'ಛಾವಾ' ಕಲೆಕ್ಷನ್ ಹೀಗಿದೆ
2025ರ ಬಹುನಿರೀಕ್ಷಿತ ಚಿತ್ರಗಳ ಪೈಕಿ ಐಎಮ್‌ಡಿಬಿ ಪಟ್ಟಿಯಲ್ಲಿ ಸಿಕಂದರ್ ಅಗ್ರಸ್ಥಾನದಲ್ಲಿದ್ದು, ಸದ್ಯ ಅನಾವರಣಗೊಂಡಿರುವ ಈ ಪೋಸ್ಟ್ ಸಖತ್ ಸದ್ದು ಮಾಡುತ್ತಿದೆ. ಮಾರ್ಚ್ 28, 2025ರ ಈದ್ ಹಬ್ಬದ ಸಂದರ್ಭದಲ್ಲಿ ಚಿತ್ರಮಂದಿರ ಪ್ರವೇಶಿಸಲಿರುವ ಈ ಚಿತ್ರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ಅಭಿಮಾನಿಗಳು ಬಹಳ ಕಾತರದಿಂದ ಕಾಯುತ್ತಿದ್ದಾರೆ. 2014ರಲ್ಲಿ ಬಿಡುಗಡೆಯಾದ 'ಕಿಕ್' ಚಿತ್ರದ ನಂತರ ಸಲ್ಮಾನ್ ಮತ್ತು ಸಾಜಿದ್ ಎರಡನೇ ಬಾರಿ ಕೈ ಜೋಡಿಸಿದ್ದಾರೆ.
ಇದನ್ನೂ ಓದಿ: ಬಾರ್ಡರ್ 2: ಯುದ್ಧಕ್ಕೆ ಸಜ್ಜಾಗುತ್ತಿರುವ ಸನ್ನಿ ಡಿಯೋಲ್, ವರುಣ್ ಧವನ್; ತೆರೆಮರೆಯ ಫೋಟೋಗಳಿಲ್ಲಿವೆ
ಇನ್ನು , ರಶ್ಮಿಕಾ ಮಂದಣ್ಣ ಸದ್ಯ ತಮ್ಮ 'ಛಾವಾ' ಚಿತ್ರದ ಯಶಸ್ಸಿನಲೆಯಲ್ಲಿ ತೇಲುತ್ತಿದ್ದಾರೆ. ವಿಕ್ಕಿ ಕೌಶಲ್ ಜೊತೆ ತೆರೆ ಹಂಚಿಕೊಂಡಿರುವ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಲಕ್ಷ್ಮಣ್ ಉಟೇಕರ್ ನಿರ್ದೇಶನದ ಸಿನಿಮಾ ಕೇವಲ 4 ದಿನಗಳಲ್ಲಿ 140.5 ಕೋಟಿ ರೂಪಾಯಿ ಕಲೆಕ್ಷನ್ ಮಾಡುವಲ್ಲಿ ಯಶಸ್ವಿಯಾಗಿದೆ.