ಕರ್ನಾಟಕ

karnataka

ETV Bharat / entertainment

ರಿಷಬ್​ ಶೆಟ್ಟಿ ಸಮರ್ಪಣೆ, ರೂಪಾಂತರ, ಪರಿಪೂರ್ಣತೆ, ಬದ್ಧತೆಗೆ ಸಾಟಿಯಿಲ್ಲ: 'ಜೈ ಹನುಮಾನ್'​​ ನಿರ್ದೇಶಕನಿಂದ ಪ್ರಶಂಸೆ - RISHAB SHETTY

ಜೈ ಹನುಮಾನ್​​ ಚಿತ್ರದ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿರುವ ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟ ರಿಷಬ್​ ಶೆಟ್ಟಿ ಬಗ್ಗೆ ಜನಪ್ರಿಯ ನಿರ್ದೇಶಕ ಪ್ರಶಾಂತ್ ವರ್ಮಾ ಗುಣಗಾನ ಮಾಡಿದ್ದಾರೆ.

Rishab shetty Jai Hanuman look
ರಿಷಬ್​ ಶೆಟ್ಟಿ ಜೈ ಹನುಮಾನ್​​ ಲುಕ್​ (Film Poster)

By ETV Bharat Entertainment Team

Published : Nov 1, 2024, 7:12 PM IST

ಕಾಂತಾರ ಎಂಬ ಅಮೋಘ ಸಿನಿಮಾ ಮೂಲಕ ಇಡೀ ಭಾರತೀಯ ಚಿತ್ರರಂಗದಾದ್ಯಂತ ಭಾರಿ ಜನಪ್ರಿಯರಾಗಿರುವ ಡಿವೈನ್​ ಸ್ಟಾರ್ ಖ್ಯಾತಿಯ ರಿಷಬ್​ ಶೆಟ್ಟಿ 'ಜೈ ಹನುಮಾನ್'​​ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಟಾಲಿವುಡ್​ ಅಂಗಳದಿಂದ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆದ ಹನುಮಾನ್​​​​​​ ಈ ವರ್ಷದಲ್ಲಿ ಸಖತ್​ ಸದ್ದು ಮಾಡಿದ ಸಿನಿಮಾ. ಇತ್ತೀಚೆಗೆ ಈ ಚಿತ್ರದ ಸೀಕ್ವೆಲ್​​ ಅಧಿಕೃತವಾಗಿ ಘೋಷಣೆಯಾಗಿದ್ದು, ಡಿವೈನ್​ ಸ್ಟಾರ್​ ಹನುಮಾನ್​ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಜನಪ್ರಿಯ ನಿರ್ದೇಶಕ ಪ್ರಶಾಂತ್ ವರ್ಮಾ ಆ್ಯಕ್ಷನ್​ ಕಟ್​​ ಹೇಳುತ್ತಿರುವ ಹನುಮಾನ್ ಸಿನಿಮಾದ ಸೀಕ್ವೆಲ್​​​ ಜೈ ಹನುಮಾನ್​​ನಲ್ಲಿ ಕಾಂತಾರ ಸ್ಟಾರ್​​ ರಿಷಬ್ ಶೆಟ್ಟಿ ಹನುಮನ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ದೀಪಗಳ ಹಬ್ಬದ ಶುಭ ಸಂದರ್ಭ ನಟನ ಫಸ್ಟ್ ಲುಕ್ ಅನಾವರಣಗೊಂಡಿತ್ತು. ಇದೀಗ ಚಿತ್ರದ ನಿರ್ದೇಶಕರು ವಿಶೇಷ ಪೋಸ್ಟ್​ವೊಂದನ್ನು ಹಂಚಿಕೊಂಡು ಗಮನ ಸೆಳೆದಿದ್ದಾರೆ.

''ಜೈ ಹನುಮಾನ್​​​ ಫಸ್ಟ್​​ ಲುಕ್​ಗೆ ಬಂದ ಅಪಾರ ಪ್ರೀತಿ ಮತ್ತು ಪ್ರತಿಕ್ರಿಯೆಗಳಿಂದ ಬಹಳ ಸಂತಸವಾಗಿದೆ. ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟ ರಿಷಬ್​ ಶೆಟ್ಟಿ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಅವರು ಹನುಮಂತನ ಮೇಲೆ ಹೊಂದಿರುವ ಭಕ್ತಿ ಮತ್ತು ಸಿನಿಮಾಗಳಿಗೆ ಸಂಬಂಧಿಸಿದಂತೆ ಸಾಟಿಯಿಲ್ಲದ ಸಮರ್ಪಣೆ ಈ ಪ್ರಾಜೆಕ್ಟ್​​​ ಅನ್ನು ನಿಜವಾಗಿಯೂ ಜೀವಂತಗೊಳಿಸಿದೆ. ಅವರ ರೂಪಾಂತರ, ಪರಿಪೂರ್ಣತೆ ಮತ್ತು ಅಚಲ ಬದ್ಧತೆಯು 'ಜೈ ಹನುಮಾನ್' ಅನ್ನು ನಿಜವಾಗಿಯೂ ಅಸಾಮಾನ್ಯವಾಗಿಸಿದೆ. ಕರ್ನಾಟಕದಿಂದ ಹಿಡಿದು ಪ್ರಪಂಚದಾದ್ಯಂತ, ಅವರು ತಮ್ಮ ಅಭಿಮಾನಿಗಳಿಗೆ ಮರೆಯಲಾಗದ ಅದ್ಭುತ ಅನುಭವವನ್ನು ಸೃಷ್ಟಿಸಲು ಸಜ್ಜಾಗಿದ್ದಾರೆ. ನಿಮಗೆ ನನ್ನ ಅಪಾರ ಧನ್ಯವಾದಗಳು. ನಿಮ್ಮೊಂದಿಗೆ ಈ ಜೈ ಹನುಮಾನ್ ಪ್ರಯಾಣವನ್ನು ಪ್ರಾರಂಭಿಸಲು ಬಹಳ ಉತ್ಸುಕನಾಗಿದ್ದೇನೆ ಸರ್'' - ನಿರ್ದೇಶಕ ಪ್ರಶಾಂತ್ ವರ್ಮಾ ಪೋಸ್ಟ್​​.

ಇದನ್ನೂ ಓದಿ:'ನಿಮ್ಮೊಂದಿಗೆ ನಾನಿದ್ದೇನೆ': ಕುಟುಂಬವೇ ಇಲ್ಲದ ಐರ್ಶ್ವರ್ಯಾಗೆ ಬಿಗ್‍ ಬಾಸ್‍ ಲೆಟರ್

ಜೈ ಹನುಮಾನ್​​​ ಶೂಟಿಂಗ್ ಕ್ಷಣದ ಫೋಟೋವನ್ನು ಹಂಚಿಕೊಂಡಿದ್ದಾರೆ. ​​ಇದು ಫಸ್ಟ್ ಲುಕ್​ ಪೋಸ್ಟರ್​​ಗಾಗಿ ನಡೆದ ಚಿತ್ರೀಕರಣದಂತೆ ತೋರಿದೆ. ನಿರ್ದೇಶಕರೇ ಹಂಚಿಕೊಂಡಿರುವ ಪೋಸ್ಟ್​ ಪ್ರಕಾರ ಸಿನಿಮಾ ಶೂಟಿಂಗ್​ ಇನ್ನಷ್ಟೇ ಆರಂಭ ಆಗಬೇಕಿದೆ. ಅದ್ಭುತ ಪೌರಾಣಿಕ ಸಿನಿ ಅನುಭವಕ್ಕಾಗಿ ಅಪಾರ ಸಂಖ್ಯೆಯ ಪ್ರೇಕ್ಷಕರು ಮತ್ತು ಅಭಿಮಾನಿಗಳು ಕಾತರರಾಗಿದ್ದಾರೆ.

ಇದನ್ನೂ ಓದಿ:ಯಶ್​​ ಕನ್ನಡ ಪ್ರೇಮ ಮತ್ತೊಮ್ಮೆ ಸಾಬೀತು: ಮಕ್ಕಳೊಂದಿಗೆ ಮಗುವಾದ ರಾಕಿ ಭಾಯ್​; ಮುದ್ದಾದ ವಿಡಿಯೋಗಳಿಲ್ಲಿವೆ​

ಸಿನಿಮಾ ಘೋಷಣೆ ಆದ ದಿನ ತಮ್ಮ ಅಧಿಕೃತ ಎಕ್ಸ್​​ನಲ್ಲಿ ಪೋಸ್ಟ್​ ಶೇರ್ ಮಾಡಿಕೊಂಡಿದ್ದ ರಿಷಬ್​ ಶೆಟ್ಟಿ, ''ಕನ್ನಡ ನೆಲದ ವರಸುತ ಆಂಜನೇಯನ ಆಶೀರ್ವಾದದೊಂದಿಗೆ ಭಾರತ ಇತಿಹಾಸದ ಸರ್ವಶ್ರೇಷ್ಠ ಭಾವವೊಂದನ್ನು ತೆರೆಯ ಮೇಲೆ ತರಲಿದ್ದೇವೆ. ನಿಮ್ಮೆಲ್ಲರ ಪ್ರೀತಿ, ಬೆಂಬಲದ ಆಶೀರ್ವಾದ ಎಂದಿನಂತೆ ಸದಾ ಇರಲಿ - ಜೈ ಹನುಮಾನ್'' ಎಂದು ಬರೆದುಕೊಂಡಿದ್ದರು.

ABOUT THE AUTHOR

...view details