ಯುಗಾದಿ ಹಬ್ಬದ ದಿನದಂದು ಸ್ಯಾಂಡಲ್ವುಡ್ನ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಲುಕ್ ನೋಡಿದ್ರೆ ನಿಜಕ್ಕೂ ಪ್ರಜ್ವಲ್ ಅವರೇನಾ? ಎಂದು ಅಚ್ಚರಿ ಪಡುವಂತಿದೆ. ಮೊಟ್ಟ ಮೊದಲ ಬಾರಿಗೆ ಪ್ರಜ್ವಲ್ ದೇವರಾಜ್ 'ಯಕ್ಷಗಾನ' ವೇಷಧಾರಿಯಾಗಿ ಕಾಣಿಸಿಕೊಂಡಿದ್ದು, ಚಿತ್ರತಂಡ ಅನಾವರಣಗೊಳಿಸಿರುವ ಪೋಸ್ಟರ್ ಕುತೂಹಲಕಾರಿಯಾಗಿದೆ. ಅಂದಹಾಗೆ, ಇದು ಕರಾವಳಿ ಸಿನಿಮಾದ ಹೊಸ ಪೋಸ್ಟರ್. ಪ್ರಜ್ವಲ್ ದೇವರಾಜ್ ಸದ್ಯ ಕರಾವಳಿ ಸಿನಿಮಾದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ.
'ಕರಾವಳಿ' ಪೋಸ್ಟರ್:ಈಗಾಗಲೇ ಟೀಸರ್ ಮತ್ತು ಪೋಸ್ಟರ್ಗಳ ಮೂಲಕ 'ಕರಾವಳಿ' ಚಿತ್ರ ನಿರೀಕ್ಷೆ ಹುಟ್ಟುಹಾಕಿದೆ. ಈ ನಡುವೆ ಯುಗಾದಿ ಹಬ್ಬದ ನಿಮಿತ್ತ ಬಂದಿರುವ ಪ್ರಜ್ವಲ್ ಅವರ ಯಕ್ಷಗಾನ ಲುಕ್ ಸಿನಿಮಾ ನೋಡುವ ವೀಕ್ಷಕರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ಲುಕ್ ಡಿಸೈನ್ ಮಾಡಿದ ಯಕ್ಷಗಾನ ಭಾಗವತರು: ಗುರುದತ್ ಗಾಣಿಗ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಕರಾವಳಿ ಸಿನಿಮಾದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಈ ಚಿತ್ರದಲ್ಲಿ ಪ್ರಜ್ವಲ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಂಬಳದ ಜೊತೆಗೆ ಯಕ್ಷಗಾನ ಕೂಡ ಕರಾವಳಿ ಸಿನಿಮಾದ ಹೈಲೈಟ್ಗಳಲ್ಲಿ ಒಂದಾಗಿದೆ ಎನ್ನುವುದು ಈ ಲುಕ್ ನೋಡಿದ್ರೆ ಗೊತ್ತಾಗುತ್ತದೆ. ಈ ಲುಕ್ ಅನ್ನು ಪ್ರೊಫೆಷನಲ್ ಕಲಾವಿದರೇ ಮಾಡಿದ್ದು ವಿಶೇಷ. ಯಕ್ಷಗಾನ ಭಾಗವತರೇ ಆಗಿರುವ ಪಲ್ಲವ ಗಾಣಿಗ ಎನ್ನುವರು ಈ ಲುಕ್ ಡಿಸೈನ್ ಮಾಡಿದ್ದಾರೆ. ಪ್ರಜ್ವಲ್ ಅವರಿಗೆ ಈ ಲುಕ್ ಡಿಸೈನ್ ಮಾಡಲು ಅರ್ಧ ದಿನ ತೆಗೆದುಕೊಂಡಿದ್ದಾರೆ.
ಮೇಕಿಂಗ್ ವಿಡಿಯೋ ರಿಲೀಸ್:ಪೋಸ್ಟರ್ ಅನಾವರಣಗೊಳಿಸುವುದರ ಜೊತೆಗೆ, ಮೇಕಿಂಗ್ ವಿಡಿಯೋ ಕೂಡ ಬಿಡುಗಡೆ ಆಗಿದೆ. ಯಕ್ಷಗಾನ ಕಲಾವಿದನಾಗಿ ಕಾಣಿಸಿಕೊಳ್ಳುವುದರ ತೆರೆಮರೆಯ ಶ್ರಮ ಈ ವಿಡಿಯೋದಲ್ಲಿದೆ. ಸ್ವತಃ ನಾಯಕ ನಟ ಪ್ರಜ್ವಲ್ ದೇವರಾಜ್ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಮೇಕಿಂಗ್ ವಿಡಿಯೋ ಹಂಚಿಕೊಂಡು, 'ಯುಗಾದಿ ಹಬ್ಬದ ಶುಭಾಶಯಗಳು' ಎಂದು ಬರೆದುಕೊಂಡಿದ್ದಾರೆ.